ಬಲೀಂದ್ರ ಪೂಜೆ


ಬಲಿ ಪ್ರತಿಪದವು ರಾಜ ಮಹಾಬಲಿಯನ್ನು ಸ್ವಾಗತಿಸಲು ಆಚರಿಸಲಾಗುತ್ತದೆ ಮತ್ತು ಇದು ಭಗವಾನ್ ವಿಷ್ಣು ಮತ್ತು ಬಲಿರಾಜನ ದಂತಕಥೆಗೆ ಸಂಬಂಧಿಸಿದೆ. ದೀಪಾವಳಿಯ ಮೂರನೇ ದಿನ ಬಲೀಂದ್ರ ಪೂಜೆ. ಈ ದಿನದಂದು ಅನುಸರಿಸಿರುವ ಸಂಪ್ರದಾಯಗಳು ಮತ್ತು ಸಂಪ್ರದಾಯಗಳು ಉತ್ತರ ಭಾರತದಂತೆಯೇ ಇವೆ.

ಅಮಾವಾಸ್ಯೆ ದಿನ ಪಾಡ್ಯ ಇದ್ದ ರಾತ್ರಿಯಲ್ಲಿ ದೇವರ ಪೂಜೆಯನಂತರ ತುಲಸೀ ಸಮೀಪ ಇಲ್ಲವೇ ಮನೆಯಲ್ಲಿ ರಂಗವಲ್ಲಿಗಳಿಂದ ಬಲಿ ಚಕ್ರವರ್ತಿಯ ಆಕಾರ ಬರೆದು ಅದರ ಮಧ್ಯದಲ್ಲಿ ಸ್ವಸ್ತಿಕೆಯನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನನನ್ನೂ ಬಲೀಂದ್ರನನ್ನೂ ಪೂಜಿಸಬೇಕು. ದೀಪಾವಳಿ ಅಮಾವಸ್ಯೆಯ ದಿನ ದೇವರ ಪೂಜೆಯನಂತರ ಮನೆಯ ಒಳಗೆ ಅಥವಾ ಹೊರಗೆ ಬಲೀಂದ್ರನನ್ನು ರಂಗವಲ್ಲಿಗಳಿಂದ ಬಿಡಿಸಿ ಪದ್ಮಮಂದಲ ಬರೆದು, ಸ್ವಸ್ತಿಕೆಯನ್ನಿಟ್ಟು ಅದರ ಮೇಲೆ ಸಾಲಿಗ್ರಾಮವನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನ ಪೂಜೆಯನ್ನು ಮಾಡಬೇಕು.

ವಾಮನ ದೇವರನ್ನು ಪೂಜಿಸಿದನಂತರ ಬಲೀಂದ್ರನನ್ನು ಪೂಜಿಸಬೇಕು. ಆವಾಹಿಸಿ ಪೂಜಿಸಿ ನೀರಾಜನ ಮಂತ್ರಪುಷ್ಪಗಳಿಂದ ಷೋಡಶೋಪಚಾರ ಪೂಜೆ ಮಾಡಬೇಕು. ಆಮೇಲೆ ಪುಷ್ಪಾಕ್ಷತೆಗಳಿಂದ ಪ್ರಾರ್ಥಿಸಬೇಕು.

ನಮಸ್ಕರಿಸಿ ಕೃಷ್ಣಾರ್ಪಣ ಬಿಡಬೇಕು. ಅನಂತರ ಒಂದು ಹರಿವಾಣದಲ್ಲಿ ಧಾನ್ಯದ ಮೇಲೆ ೫ ದೊಡ್ಡ ದೀಪಗಳನ್ನು ಹಚ್ಚಿ ದೇವರಿಗೆ ಮಂಗಳಾರತಿ ಮಾಡಿ ಮನೆಯಲ್ಲಿ ದೀಪವನ್ನು ಹಚ್ಚಿಟ್ಟು ಹರಿವಾಣದ(ತಟ್ಟೆ) ದೀಪವನ್ನು ಘಂಟಾನಾದದ ಮೂಲಕ ಎಲ್ಲಾ ಕಡೆಗೂ ತೋರಿಸಬೇಕು. ಇದು ರೂಢಿಯಲ್ಲಿರುವ ಪದ್ಧತಿ.

ಮೇಲ್ಕೋಟೆ ಅಷ್ಟತೀರ್ಥ ಉತ್ಸವ

ಹತ್ತು ದಿನಗಳ ಈ ಉತ್ಸವದಲ್ಲಿ ಪ್ರತಿದಿನವೂ ಒಂದೊಂದು ತೀರ್ಥಕ್ಕೆ ಶ್ರೀಯವರ ಪಾದುಕೆ ಬಿಜಯ ಮಾಡಿಸುತ್ತಾರೆ. ನಾಲ್ಕನೆ ದಿನ ರಾಜಮುಡಿಯನ್ನು ಸ್ವಾಮಿಗೆ ಧಾರಣೆ ಮಾಡುತ್ತಾರೆ. ಇದರಲ್ಲಿ ಧ್ವಜಾರೋಹಣ, ತೇರು ಕಳ್ಳರ ಸುಲಿಗೆ, ತೀರ್ಥಸ್ನಾನ ಎಲ್ಲವೂ ನಡೆದು ರಾತ್ರಿವೇಳೆಯಲ್ಲಿ ವಾಹನಗಳು ನಡೆದುಪಡಿಯೇತ್ತ’ ಜರುಗುತ್ತದೆ. ಜಾತ್ರೆಯನ್ನು ರಾಜ ಒಡೆಯರ್ ರವರು ಪ್ರಾರಂಭಿಸಿದ್ದು.  ರಾಜಮುಡಿ, ಗಂಡುಭೇರುಂಡ ಪದಕ ಹಾಗೂ ಪದ್ಮಪೀಠ ಉತ್ಸವದಲ್ಲಿ ಗಮನ ಸೆಳೆಯುತ್ತದೆ. ಇಲ್ಲಿ ಅಷ್ಟತೀರ್ಥ ಉತ್ಸವವನ್ನು ಮುಂತಾದವನ್ನು ಏರ್ಪಡಿಸಿರುತ್ತಾರೆ. ಇದು ರಾಜಮುಡಿ ಜಾತ್ರೆ ಎಂದು ಪ್ರಸಿದ್ಧವಾಗಿದೆ.

ಶೃಂಗೇರಿ ವಿದ್ಯಾತೀರ್ಥ ಜಯಂತಿ

ಪ್ರಾತಃಸ್ಮರಣೀಯರಾದ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ 35ನೇ ಪೀಠಾಧೀಶರಾಗಿದ್ದವರು. ವಿಶ್ವವಿಖ್ಯಾತರಾಗಿದ್ದ ಈ ಪರಮಪೂಜ್ಯರ ಜೀವನವು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ.

ಅವರು ಜನಿಸಿದ್ದು ಪಿಂಗಳ ಸಂವತ್ಸರದ ಆಶ್ವಯುಜ ಬಹುಳ ಚತುರ್ದಶಿಯಂದು (12 ನವೆಂಬರ್ 1917). ತಂದೆ ಕೈಪು ರಾಮಶಾಸ್ತ್ರೀ, ತಾಯಿ ವೆಂಕಟಲಕ್ಷ್ಮೀ. ಶ್ರೀನಿವಾಸನೆಂದು ನಾಮಕರಣ. ಬಾಲ್ಯದಿಂದಲೇ ದೈವಭಕ್ತಿ, ಇಂದ್ರಿಯ ವಿಷಯಗಳಲ್ಲಿ ವೈರಾಗ್ಯ, ಸಜ್ಜನರಲ್ಲಿ ಪ್ರೀತಿ ಹಾಗೂ ಸಚ್ಚಾರಿತ್ರ್ಯ - ಇವುಗಳಿಂದ ಕೂಡಿದ್ದರು.

ಆಗ ಶೃಂಗೇರಿ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಕರುಣೆಗೆ ಪಾತ್ರರಾದ ಶ್ರೀನಿವಾಸ ಎಂಬ ಬಾಲಕನ ಉಪನಯನ ಶೃಂಗೇರಿಯಲ್ಲೇ ನೆರವೇರಿತು. ನಂತರ ತಮ್ಮೊಡನೆ ಬೆಂಗಳೂರಿಗೆ ಹಿಂದಿರುಗಲು ಒಪ್ಪದ ಪುತ್ರನನ್ನು ರಾಮಶಾಸ್ತ್ರಿಗಳು ಶೃಂಗೇರಿಯ ಪಾಠಶಾಲೆಗೆ ಸೇರಿಸಿದರು. ಅಲ್ಲಿ ವಿದ್ವಾಂಸರಿಂದ ವೇದ-ಸಂಸ್ಕೃತ ಸಾಹಿತ್ಯದ ಅಧ್ಯಯನ ಮಾಡಿದರು.

ಸಂನ್ಯಾಸ ಸ್ವೀಕಾರ

ಗುರುವರ್ಯರು ಈ  ಬಾಲಬ್ರಹ್ಮಚಾರಿಯನ್ನು ಒಂದು ವರ್ಷ ಕಾಲ ಪರೀಕ್ಷಿಸಿ ಒಂದು ಶುಭದಿನ (1931ರ ಮೇ 22ರಂದು) ಸಂನ್ಯಾಸಾಶ್ರಮವನ್ನಿತ್ತು, 'ಅಭಿನವ ವಿದ್ಯಾತೀರ್ಥ' ಎಂಬ ಆಶ್ರಮನಾಮವನ್ನು ಅನುಗ್ರಹಿಸಿ, ಪೀಠಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯಮಿಸಿದರು.

ಕಿರಿಯ ಸ್ವಾಮಿಗಳು ಯೋಗವನ್ನು ಕಲಿತು ಅಭ್ಯಾಸ ಮಾಡುತ್ತಿದ್ದರು. ಮುಂದೆ ನ್ಯಾಯಶಾಸ್ತ್ರದ ವಿಶಿಷ್ಟ ಪ್ರೌಢಿಮೆಯನ್ನು ಗಳಿಸಿ, ವೇದಾಂತಶಾಸ್ತ್ರದ ಅಧ್ಯಯನ ಮಾಡಿ, ಅದರಲ್ಲೂ ಪಾಂಡಿತ್ಯವನ್ನು ಗಳಿಸಿದರು. ಸಂಸ್ಕೃತಸಾಹಿತ್ಯದಲ್ಲಿ ಪ್ರೌಢಿಮೆಯನ್ನು ಹೊಂದಿದ್ದರು.

ಶ್ರೀ ಅಭಿನವ ವಿದ್ಯಾತೀರ್ಥರ ಗುರುಗಳು ಬಹಳ ಅಂತಮುಖಿಗಳಾಗಿದ್ದರು. ಮಠದ ಎಲ್ಲ ಕಾರ್ಯಗಳನ್ನೂ ಗಮನಿಸಿ, ಅದರ ಸೂಕ್ತ ನಿರ್ವಹಣೆಯನ್ನು ಸಾಧಿಸಿ, ಹಾಗೂ ಭಕ್ತರಿಗೆ ದರ್ಶನವನ್ನು ನೀಡಿ ಮತ್ತು ಅವರೊಂದಿಗೆ ಸಂವಾದವನ್ನು ನಡೆಸಿ, ವಿದ್ಯಾತೀರ್ಥರು ಮಠದ ಕೀರ್ತಿಯನ್ನು ಕಾಪಾಡಿದರು. ಮಹಾಸ್ವಾಮಿಗಳು ಧರ್ಮಶಾಸ್ತ್ರಗ್ರಂಥಗಳನ್ನು ಆಳವಾಗಿ ಪರಿಶೀಲಿಸಿ, ಧರ್ಮಕ್ಕೆ ಸಂಬಂಧಪಟ್ಟ ಶಿಷ್ಯರ ಸಂದೇಹಗಳನ್ನು, ಪ್ರಮಾಣವಚನ ಮತ್ತು ಉದಾಹರಣೆಗಳ ಸಹಿತವಾಗಿ ಪರಿಹರಿಸುತ್ತಿದ್ದರು; ಇದಕ್ಕೆ ಗುರುಗಳ ಮೆಚ್ಚುಗೆಯೂ ಲಭಿಸಿತ್ತು.

ಸಂಸ್ಕೃತ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಲು ಸಮರ್ಥರಾದ ಅವರು ಹಿಂದಿಭಾಷೆಯಲ್ಲೂ ಪ್ರಾವೀಣ್ಯವನ್ನು ಸಂಪಾದಿಸಿದ್ದರು.

1954ರ ಆಗಸ್ಟ್ 24ರಂದು ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ದರ್ಶನಕ್ಕಾಗಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಶೃಂಗೇರಿಗೆ ಆಗಮಿಸಿದರು. ಆ ಸಂದರ್ಭದಲ್ಲಿ ಅವರಿಗೆ ಗುರುಗಳ ದರ್ಶನ-ಸಂಭಾಷಣೆಗೆ ವ್ಯವಸ್ಥೆಯನ್ನು ಮಾಡಿ, ಗುರುಗಳ ಸಂಸ್ಕೃತಭಾಷೆಯ ಸಂದೇಶವನ್ನು ವಿದ್ಯಾತೀರ್ಥರು ಹಿಂದಿಯಲ್ಲಿ ತಿಳಿಸಿದರು ಮತ್ತು ಅವರು ಹಿಂದಿಯಲ್ಲಿ ಮಾತನಾಡಿದ್ದನ್ನು ತಮ್ಮ ಗುರುಗಳಿಗೆ ಸಂಸ್ಕೃತದಲ್ಲಿ ನಿವೇದಿಸಿದರು.

ಪಟ್ಟಾಭಿಷೇಕ ಮತ್ತು ಯಾತ್ರೆಗಳು

ಜಯಸಂವತ್ಸರದ ಆಶ್ವಯುಜ ಕೃಷ್ಣ ಪಂಚಮಿಯಂದು (16.10.1954) ಶ್ರೀ ಅಭಿನವ ವಿದ್ಯಾತೀರ್ಥರು ಶೃಂಗೇರಿ ಶಾರದಾಪೀಠದಲ್ಲಿ ಪಟ್ಟಾಭಿಷಿಕ್ತರಾದರು. 1956ರಲ್ಲಿ ಶೃಂಗೇರಿಯಿಂದ ಯಾತ್ರೆಯನ್ನು ಪ್ರಾರಂಭಿಸಿ, ಕಾಲಟೀ ಕ್ಷೇತ್ರವನ್ನು ತಲುಪಿ, ಅಲ್ಲಿ ಚಾತುರ್ಮಾಸ ವ್ರತವನ್ನು ಕೈಗೊಂಡು, ನವರಾತ್ರಿ ಉತ್ಸವಗಳನ್ನು ನೆರವೇರಿಸಿದರು. ದಕ್ಷಿಣಭಾರತದಲ್ಲಿ ಆರು ವರ್ಷ ಸತತವಾಗಿ ಯಾತ್ರೆ ಹಾಗೂ ನಂತರದಲ್ಲಿ ಹಿಮಾಲಯದತ್ತ ವ್ಯಾಪಕವಾಗಿ ಯಾತ್ರೆ ನಡೆಸಿದರು.

ಗಂಭೀರವಾದ ವೇದಾಂತತತ್ತ್ವಗಳೂ ಜನಸಾಮಾನ್ಯರಿಗೆ ಸುಲಭವಾಗಿ ತಿಳಿಯುವಂತೆ ಬೋಧಿಸುತ್ತಿದ್ದರು. ವ್ಯರ್ಥ ಹರಟೆಗೆ ಅವಕಾಶ ಕೊಡುತ್ತಿರಲಿಲ್ಲ. ಅವರಲ್ಲಿ ಕರುಣೆಯು ತುಂಬಿ ತುಳುಕುತ್ತಿತ್ತು. ಜೀವನವು ಇತರರಿಗೆ ಒಳಿತನ್ನು ಮಾಡುವುದಕ್ಕಾಗಿ ಎಂದು ಅವರು ಪರಿಗಣಿಸಿದರು. ಅನ್ಯರು ಅವರಿಗೆಸಗಿದ ತಪ್ಪನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಅವರು ಶೃಂಗೇರಿಯಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು. ಅವರ ಪೀಠಾಧಿಪತ್ಯದ ಅವಧಿಯಲ್ಲಿ ಮಠದಿಂದ ಅನೇಕ ಗ್ರಂಥಗಳು ಪ್ರಕಟವಾದವು.

ಭಾರತೀಯ ಸಂಸ್ಕೃತಿಯಂತೂ ಸಂಸ್ಕೃತವನ್ನೇ ಆಶ್ರಯಿಸಿದೆ. ಸಂಸ್ಕೃತವನ್ನು ಕಲಿಯಲು ಜಾತಿ-ಮತ-ಲಿಂಗ-ವಯಸ್ಸು ಇತ್ಯಾದಿ ಯಾವ ಭೇದವೂ ಇಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ನೀರು ತುಂಬುವ ಹಬ್ಬ

ದೇಶದಾದ್ಯಂತ ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಮೂರು ದಿನ ಮಾತ್ರ ‘ಹಟ್ಟಿ ಹಬ್ಬ’ ಎಂದು ಆಚರಿಸಲಾಗುತ್ತದೆ.

ಪೌರಾಣಿಕ ಸ್ಪರ್ಶ

ಪೌರಾಣಿಕ ಮಹತ್ವವಿದ್ದರೂ ದೀಪಾವಳಿಗೆ ಸಂಬಂಧಿಸಿದ ಅನೇಕ ಜನಪದ ಆಚರಣೆಗಳಿವೆ. ಪಾಂಡವರು ತಮ್ಮ ವನವಾಸವನ್ನು ಮುಗಿಸಿ, ಒಂದು ವರ್ಷ ಅಜ್ಞಾತವಾಸವನ್ನು ಮುಗಿಸಿ ಮರಳಿ ಬಂದ ಪಾಂಡವರ ನೆನಪಿಗಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದರ ನಂತರ ಪಾಂಡವರ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯ ರೂಢಿಗೆ ಬಂತು.  ತಮ್ಮ ಹೆಜ್ಜೆಗುರುತುಗಳನ್ನು ಚಿತ್ರಿಸುವ ಸಂಪ್ರದಾಯವೂ ಇದೆ. ಅದು ಪಾಂಡವರ ಹಸ್ತಿನಾವತಿಯ ಪ್ರವೇಶವನ್ನು ಚಿತ್ರಿಸುತ್ತದೆ.

ಹೆಸರೇ ಹೇಳುವಂತೆ ಇದು ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು.

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?

1) ಹಂಡೆ ತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ.

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ, ಇತ್ಯಾದಿ  ಸಿದ್ಧಪಡಿಸಿ.

4) ಮಂತ್ರಾಕ್ಷತೆ, ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಸ್ಮರಿಸಿ ಕಲಶದಲ್ಲಿ ಹೂವು ಅಕ್ಷತೆ ಹಾಕಿ.

ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ (ಸ್ಮರಿಸಿ).

ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ|

ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||

ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ, ಪುಷ್ಪ ಅರ್ಪಿಸಿ.

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ

ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ

7) ಧೂಪವನ್ನು ತೋರಿಸಿ, ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ. ಹಣ್ಣು, ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ತೋರಿಸಿ ಭಾಗೀರಥಿಗೆ ತೋರಿಸಿ. ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ. ಅಕ್ಷತೆ ಹಾಕಿ ನಮಸ್ಕರಿಸಿ. ಈಗ ಆ ಕಲಶದ ನೀರನ್ನು ಹಂಡೆಯಲ್ಲಿ ಹಾಕಿ.

15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.

ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.

ಇದನ್ನು ಒಂದು ತಿಂಗಳು ಹಚ್ಚಬೇಕು. ಇವೆಲ್ಲವೂ ಸಂಪ್ರದಾಯಗಳಾಗಿದ್ದು ಆಯಾ ಪ್ರದೇಶಕ್ಕೆ ತಕ್ಕಂತೆ ಆಚರಣೆಯಲ್ಲಿದೆ.

ಧನ್ವಂತರಿ ಜಯಂತಿ

ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯನ್ನು (ದೇವರ ವೈದ್ಯ) ಪೂಜಿಸುತ್ತಾರೆ. ಬೇವಿನ ಎಲೆಯ ಮತ್ತು ಸಕ್ಕರೆಯನೈವೇದ್ಯವನ್ನು ತಯಾರಿಸಿ, ಪ್ರಸಾದವೆಂದು ಕೊಡುತ್ತಾರೆ. ಇದಕ್ಕೆ ಬಹಳ ಅರ್ಥವಿದೆ. ಸಮುದ್ರ ಮಂಥನದ ಸಮಯದಲ್ಲಿ ಬೇವಿನ ಉತ್ಪತ್ತಿಯು ಅಮೃತದಿಂದಲೇ ಆಯಿತು ಎಂದು ಹೇಳುತ್ತಾರೆ. ಧನ್ವಂತರಿಯು ಅಮೃತತ್ತ್ವವನ್ನು ಕೊಡುವವನಾಗಿದ್ದಾನೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಈ ದಿನ ಬೇವನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ.

ಧನ್ವಂತರಿ ಜಯಂತಿ

ಸುಶ್ರುತಪ್ರಕಾರ, ವಾರಣಾಸಿಯ ರಾಜನಾದ ಹಿಂದೂ ವೈದ್ಯದೇವರು ವಿಷ್ಣುವಿನ ಅವತಾರ. ಪುರಾಣಗಳಲ್ಲಿ ಇವನು ಆಯುರ್ವೇದದ ದೇವರು ಎಂದು ಉಲ್ಲೇಖಿಸಲಾಗಿದೆ. ಅವನು, ಸಮುದ್ರಮಂತನ ಕಾಲದಲ್ಲಿ ಅಮೃತಅಮೃತದಿಂದ ಹಾಲಿನ ಸಾಗರದಿಂದ ಉದ್ಭವಿಸಿದನು. ಧನ್ವಂತರಿ ಅಥವಾ ಧನ್ವಂತರಿ ತ್ರಯೋದಶಿಯ ಮೇಲೆ, ತಮ್ಮ ಮತ್ತು/ಅಥವಾ ಇತರರ ಆರೋಗ್ಯಕ್ಕಾಗಿ ಧನ್ವಂತರಿ ಯನ್ನು ಪ್ರಾರ್ಥಿಸುವುದು ಹಿಂದೂ ಧರ್ಮದಲ್ಲಿ ಸಾಮಾನ್ಯ. ಧನ್ವಂತರಿ ತ್ರಯೋದಶಿಯನ್ನು ಪ್ರತಿ ವರ್ಷ ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಭಾರತ ಸರ್ಕಾರ ಘೋಷಿಸಿದೆ.

ಹುಟ್ಟುಹಬ್ಬ ಆಚರಣೆ

ದೀಪಾವಳಿಗೆ ಎರಡು ದಿನ ಮೊದಲು, ದೀಪಾವಳಿಗೆ ಎರಡು ದಿನ ಮುಂಚೆ, ಹಿಂದೂ ದೀಪದ ಹಬ್ಬವಾದ ಧನ್ ತೇರಸ್ ನಲ್ಲಿ ಪ್ರತಿವರ್ಷ ಆಯುರ್ವೇದ ದ ವೈದ್ಯರು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಇದನ್ನು ಭಾರತದಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಸಹ ಆಚರಿಸಲಾಗುತ್ತದೆ.

ಭಾರತದಲ್ಲಿನ ದೇವಾಲಯಗಳು

ಕೊಂಕಣದಲ್ಲಿ, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ದಾಪೋಲಿಯಲ್ಲಿ ಧನ್ವಂತರಿ ದೇವಾಲಯವಿದೆ. ಕೊಂಕಣ ಮತ್ತು ಮಹಾರಾಷ್ಟ್ರದ ಉಳಿದ ಭಾಗಗಳಿಂದ ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಧನ್ವಂತರಿಗೆ ಸಮರ್ಪಿತವಾದ ಕೆಲವು ದೇವಾಲಯಗಳಿವೆ, ಇಲ್ಲಿ ಆಯುರ್ವೇದವು ಹೆಚ್ಚು ಅಭ್ಯಾಸ ಮತ್ತು ಪೋಷಣೆಯನ್ನು ಹೊಂದಿದೆ.

ಶೃಂಗೇರಿ ಚಂದ್ರಶೇಖರ ಭಾರತೀ ಜಯಂತಿ

ಜನನ-ಬಾಲ್ಯ

ಲಕ್ಷ್ಮಮ್ಮ-ಗೋಪಾಲಶಾಸ್ತ್ರಿ ದಂಪತಿಗೆ ಹದಿಮೂರು ಮಕ್ಕಳು ಆದರೂ ಒಂದೂ ಜೀವಂತವಾಗಿ ಉಳಿಯಲಿಲ್ಲ. ಅವರು ಗೋಕರ್ಣಕ್ಷೇತ್ರಕ್ಕೆ ಹೋಗಿ, 'ನಿನ್ನ ಕೃಪೆಯಿಂದ ಮಕ್ಕಳಾಗಿ ಜೀವಂತವಾಗಿ ಉಳಿದರೆ ಆ ಮಗುವನ್ನು ಶ್ರೀ ಶಾರದಾಂಬೆಗೆ ಅರ್ಪಿಸುವೆ' ಎಂದು ಶ್ರೀ ಮಹಾಬಲೇಶ್ವರನ ಮುಂದೆ ನಿಂತು ಪ್ರಾರ್ಥಿಸಿದರು. ಆ ಪ್ರಾರ್ಥನೆಯ ಫಲದಿಂದ ನಂದನ ಸಂವತ್ಸರದ ಆಶ್ವಯುಜಮಾಸದ ಬಹುಳ ಏಕಾದಶಿಯಂದು (16-10-1892) ಗಂಡುಮಗು ಜನಿಸಿತು. ಆ ಮಗುವಿಗೆ ನರಸಿಂಹ ಎಂದು ನಾಮಕರಣ ಮಾಡಲಾಯಿತು.

ಪರಮ ವಿರಾಗಿ

ತಂದೆ-ತಾಯಿಗೆ ಅಚ್ಚುಮೆಚ್ಚಿನ ಮಗನಾದ ನರಸಿಂಹನ ಮನಸ್ಸು ಸಣ್ಣ ವಯಸ್ಸಿನಲ್ಲೇ ಭಗವಂತನ ಕಡೆ ಹೋಗಲು ಪ್ರಾರಂಭಿಸಿತು. ಶೃಂಗೇರಿಯಲ್ಲಿದ್ದುದರಿಂದ ಪ್ರತಿನಿತ್ಯ ಮಠಕ್ಕೆ ಹೋಗಿ ಜಗದ್ಗುರು ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ದರ್ಶನ ಪಡೆಯುತ್ತಿದ್ದ. ನರಸಿಂಹನನ್ನು ನೋಡಿದ ಜಗದ್ಗುರುಗಳು ಈ ಪೀಠಕ್ಕೆ ಈ ಬಾಲಕನೇ ಯೋಗ್ಯನಿರುವನೆಂದು ನಿರ್ಧಾರ ಮಾಡಿದರು. ಗುರುಗಳ ಅಪ್ಪಣೆಯಂತೆ ನರಸಿಂಹ ಶ್ರೀಮಠದ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಂಸ್ಕೃತ ಸಾಹಿತ್ಯ ಅಧ್ಯಯನ ಮಾಡಿದ.

ನಂತರ ಜಗದ್ಗುರುಗಳ ಅಪ್ಪಣೆಯ ಮೇರೆಗೆ ಹೆಚ್ಚಿನ ಶಾಸ್ತ್ರಾಧ್ಯಯನಕ್ಕಾಗಿ ಬೆಂಗಳೂರಿಗೆ ಬಂದ. ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಅಲ್ಲಿ ವೆಳ್ಳೂರು ಸುಬ್ರಹ್ಮಣ್ಯ ಶಾಸ್ತ್ರಿಗಳು, ವೈದ್ಯನಾಥ ಶಾಸ್ತ್ರಿಗಳು, ಹಾನಗಲ್ ವಿರೂಪಾಕ್ಷ ಶಾಸ್ತ್ರಿಗಳು ಮೊದಲಾದ ಪಂಡಿತರಿಂದ ತರ್ಕಶಾಸ್ತ್ರ, ಪೂರ್ವಮೀಮಾಂಸಾ ಹಾಗೂ ವೇದಾಂತ ಶಾಸ್ತ್ರಗಳನ್ನು ಕಲಿತರು. ಇತ್ತ ಶೃಂಗೇರಿಮಠದಲ್ಲಿ ಜಗದ್ಗುರುಗಳಿಗೆ ದೇಹಾರೋಗ್ಯ ಕ್ಷೀಣಿಸುತ್ತಿತ್ತು. ಗುರುಗಳು ಮಠದ ಆಡಳಿತಾಧಿಕಾರಿ ಶ್ರೀಕಂಠಶಾಸ್ತ್ರಿಗಳನ್ನು ಕರೆದು ನರಸಿಂಹಶಾಸ್ತ್ರಿಗಳಿಗೆ ಸಂನ್ಯಾಸಾಶ್ರಮ ಕೊಡಿಸಿ ಅವರನ್ನೇ ಉತ್ತರಾಧಿಕಾರಿಯಾಗಿ ಮಾಡಲು ನಿರ್ಧಾರ ಮಾಡಿರುವೆ, ನರಸಿಂಹನನ್ನು ಕರೆಸಿ ಎಂದರು. ಈ ವಿಷಯ ನರಸಿಂಹ ಮತ್ತು ಅವರ ತಂದೆ-ತಾಯಿಗೆ ತಿಳಿಯಿತು. ಅವರು ಮಗ ಸಂನ್ಯಾಸಿಯಾಗಲು ಒಪ್ಪಿದರು.

ನಿತ್ಯಕರ್ಮ, ಪೂಜೆ ಇತ್ಯಾದಿಗಳನ್ನು ಮಾಡಲು ಸಮಯವಿಲ್ಲವೆಂದು, ಬೇರೆಯವರ ಅಥವಾ ಅರ್ಚಕರ ಮೂಲಕ ಪೂಜೆ ಮಾಡಿಸುವುದು ಸರಿಯಲ್ಲವೆಂದು ತಿಳಿಹೇಳಿ, ತನ್ನ ಹಸಿವಿಗೆ ತಾನೇ ಊಟ ಮಾಡಬೇಕು. ಬೇರೆಯವರಲ್ಲ ಎಂದು ಹೇಳುತ್ತಿದ್ದರು ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು.

ಸಂನ್ಯಾಸ ಸ್ವೀಕಾರ

ಜಗದ್ಗುರುಗಳ ಆಜ್ಞೆಯಂತೆ ಪರಿಧಾವಿ ಸಂವತ್ಸರದ ಚೈತ್ರ ಬಹುಳ ಷಷ್ಠಿಯಂದು (7-4-1912) ನರಸಿಂಹಶಾಸ್ತ್ರಿಗಳು ಸಂನ್ಯಾಸ ಸ್ವೀಕರಿಸಿದರು. ಆಗ ಅವರಿಗೆ ಕೇವಲ ಇಪ್ಪತ್ತು ವರ್ಷ. ಶ್ರೀ ಚಂದ್ರಶೇಖರ ಭಾರತೀ ಎಂಬ ನಾಮಾಂಕಿತ ಕೊಡಲಾಯಿತು ಹಾಗೂ ಶ್ರೀಮಠದ ಮೂವತ್ನಾಲ್ಕನೇ ಪೀಠಾಧಿಪತಿಗಳಾದರು. ಹೆಚ್ಚು ಸಮಯ ತಪಸ್ಸಿನಲ್ಲಿಯೇ ಕಳೆಯುತ್ತಿದ್ದ ಅವರು ಸದಾ ಸಮಾಧಿಸ್ಥಿತಿಯಲ್ಲಿರುತ್ತಿದ್ದರು. ಅಂತರ್ದೃಷ್ಟಿ ಮತ್ತು ದಿವ್ಯಜ್ಞಾನ ಹೊಂದಿದ್ದ ಅವರು ಅಪೇಕ್ಷಿತ ಭಕ್ತಜನಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಆರ್ತಜನಕ್ಕೆ ಸಾಂತ್ವನ ಹೇಳುತ್ತಿದ್ದರು. ಮಠದಲ್ಲಿ ನಡೆಯುತ್ತಿದ್ದ ಕೆಲಸಕಾರ್ಯಗಳಲ್ಲಿ ಕೆಲವು ನ್ಯೂನತೆಗಳು ದಿವ್ಯದೃಷ್ಟಿಗೆ ಗೋಚರವಾಗಿ ನೌಕರರನ್ನು ಎಚ್ಚರಿಸುತ್ತಿದ್ದರು.

ಕೃತಿಗಳ ರಚನೆ

ಜಗದ್ಗುರುಗಳು ಅನೇಕ ಗ್ರಂಥಗಳನ್ನು ಶ್ಲೋಕಗಳನ್ನು ರಚಿಸಿದ್ದಾರೆ. ಗುರುಸ್ತುತಿ, ಪಾದಾವಲಂಬನ ಸ್ತುತಿ, ದೇಶಿಕನವರತ್ನಮಾಲ, ದತ್ತನವರತ್ನಮಾಲಿಕಾ, ಸಾಂಬಾಷ್ಟಕ, ಶಾರದಾಭುಜಂಗ, ವಿವೇಕ ಚೂಡಾಮಣಿಗೆ ಸಂಸ್ಕೃತ ವ್ಯಾಖ್ಯಾನ - ಹೀಗೆ ಅನೇಕ ಕೃತಿಗಳನ್ನು ರಚಿಸಿರುವರು. ಶೃಂಗೇರಿಮಠದಲ್ಲಿ ಶ್ರೀ ಶಾರದಾ ದೇವಾಲಯದ ನವೀಕರಣ ಮತ್ತು ನರಸಿಂಹವನದಲ್ಲಿ ಗುರುಗಳ ಅಧಿಷ್ಠಾನನಿರ್ವಣ ಹಾಗೂ ಈ ಎರಡರ ಕುಂಭಾಭಿಷೇಕವನ್ನು 1916ರಲ್ಲಿ ನೆರವೇರಿಸಿದರು. ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜನ್ಮಸ್ಥಳ ಕಾಲಟಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದರು.

1931ರಲ್ಲಿ ಶ್ರೀನಿವಾಸ ಎಂಬ ಬ್ರಹ್ಮಚಾರಿಗೆ ಸಂನ್ಯಾಸಾಶ್ರಮವನ್ನು ಅನುಗ್ರಹಿಸಿ 'ಅಭಿನವ ವಿದ್ಯಾತೀರ್ಥ' ಎಂಬ ಯೋಗಪಟ್ಟವನ್ನು ನೀಡಿ ತಮ್ಮ ಉತ್ತರಾಧಿಕಾರಿ ಶಿಷ್ಯರಾಗಿ ಸ್ವೀಕರಿಸಿದರು.

26-9-1954ರ ಮಹಾಲಯ ಅಮಾವಾಸ್ಯೆಯಂದು ಜಗದ್ಗುರುಗಳು ಎಂದಿನಂತೆ ಬೆಳಗಿನ ಜಾವ ತುಂಗಾನದಿಗೆ ಬಂದು ಸ್ನಾನಾದಿಗಳನ್ನು ಮಾಡಿ ಅಲ್ಲಿಯೇ ಧ್ಯಾನಾವಸ್ಥೆಯಲ್ಲಿಯೇ ತುಂಗಾನದಿಯಲ್ಲಿ ಜಲಸಮಾಧಿ ಹೊಂದಿ ದೇಹತ್ಯಾಗ ಮಾಡಿದರು.

ಜನ್ಮ ದಿನ

ಆಶ್ವಯುಜಮಾಸದ ಬಹುಳ ಏಕಾದಶಿಯ ಈ ಶುಭ ದಿನವನ್ನು ಈ ಮಹಾತಪಸ್ವಿಯ ಜನ್ಮ ದಿನವನ್ನಾಗಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ ಮತ್ತು ಆ ದಿನ ಅಧಿಷ್ಠಾನಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಹಿಂದೂ, ಕ್ರೈಸ್ತ, ಮುಸಲ್ಮಾನ, ಶ್ರೀವೈಷ್ಣವ, ಸ್ಮಾರ್ತ - ಹೀಗೆ ಯಾವ ಮತದವರೇ ಆಗಿರಲಿ, ಅವರವರ ಮತದ ತತ್ತ್ವಗಳನ್ನು ಅವರವರು ಶ್ರದ್ಧೆಯಿಂದ ಪಾಲಿಸಬೇಕೆಂದು ಮಹಾಸ್ವಾಮಿಗಳು ಹೇಳುತ್ತಿದ್ದರು.

ಶಾಂತಿ ಮತ್ತು ನೆಮ್ಮದಿಯನ್ನು ಶ್ರದ್ಧೆಯಿಂದ ನಿಮ್ಮಲ್ಲೇ ಕಂಡುಕೊಳ್ಳಿ ಎನ್ನುತ್ತಿದ್ದರು. ಬೆಂಗಳೂರಿನ ಶಂಕರಮಠದ ಆವರಣದಲ್ಲಿ ಶಾರದಾಂಬಾ ದೇವಾಲಯವನ್ನು ಸ್ಥಾಪಿಸಿದ್ದೂ ಅವರೇ.          

ಗೋವತ್ಸ ದ್ವಾದಶಿ

ಮಹತ್ವ, ಪ್ರಯೋಜನಗಳು ಮತ್ತು ಆಚರಣೆ

ಗೋವತ್ಸ ದ್ವಾದಶಿ ಒಂದು ಹಿಂದೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿದ್ದು, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ದೀಪಾವಳಿಯ ಆರಂಭವನ್ನು ಸೂಚಿಸುತ್ತದೆ, ಇದನ್ನು ‘ವಸು ಬಾರಾಸ್’ ಎಂದು ಕರೆಯಲಾಗುತ್ತದೆ. ಗುಜರಾತ್ ನಲ್ಲಿ ಇದನ್ನು ‘ವಾಘ್ ಬಾರಸ್’ ಎಂದು ಮತ್ತು ಶ್ರೀಪಾದವಲ್ಲಭ ಆರಾಧನಾ ಉತ್ಸವ ಎಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋವುಗಳನ್ನು ಅತ್ಯಂತ ಪವಿತ್ರ ವೆಂದು ಪರಿಗಣಿಸಲಾಗಿದೆ ಮತ್ತು ಮನುಕುಲಕ್ಕೆ ಪೋಷಣೆಯನ್ನು ನೀಡುವುದರಿಂದ ತಾಯಂದಿರಿಗೆ ಸಮಾನವಾಗಿದೆ.

ಉತ್ತರದ ಕೆಲವು ರಾಜ್ಯಗಳಲ್ಲಿ, ಗೋವತ್ಸಾ ದ್ವಾದಶಿಯನ್ನು ವಾಘ್ ಎಂದು ಉಲ್ಲೇಖಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಆರ್ಥಿಕ ಸಾಲವನ್ನು ಮರುಪಾವತಿಸುವ ದಿನವೂ ಹೌದು. ಆದ್ದರಿಂದ ವ್ಯಾಪಾರಿಗಳು ತಮ್ಮ ಖಾತೆಗಳ ಪುಸ್ತಕಗಳನ್ನು ಕ್ಲಿಯರ್ ಮಾಡುವ ಮತ್ತು ತಮ್ಮ ಹೊಸ ಲೆಡ್ಜರ್ ಗಳಲ್ಲಿ ಹೆಚ್ಚಿನ ವಹಿವಾಟುಗಳನ್ನು ಮಾಡದಿರುವ ದಿನವಾಗಿದೆ.

ಗೋವತ್ಸ ದ್ವಾದಶಿಯನ್ನು ನಂದಿನಿ ವ್ರತವೆಂದು ಸಹ ಆಚರಿಸಲಾಗುತ್ತದೆ, ಏಕೆಂದರೆ ನಂದಿನಿ ಮತ್ತು ನಂದಿ (ಗೂಳಿ) ಎರಡೂ ಶೈವ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಗೋವುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದ್ದು, ಗೋವುಗಳಿಗೆ ಹಾಗೂ ಕರುಗಳಿಗೆ ಗೋಪೂಜೆ ಮಾಡಿ, ಅವುಗಳಿಗೆ ಗೋಧಿಯ ಉತ್ಪನ್ನಗಳನ್ನು ನೀಡಿ ಪೋಷಿಸಲಾಗುತ್ತಿದೆ. ಈ ದಿನದಂದು ಭಕ್ತರು ಯಾವುದೇ ಗೋಧಿ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಈ ಆಚರಣೆಗಳು ಮತ್ತು ಪೂಜೆಗಳಿಂದ ಭಕ್ತರ ಎಲ್ಲಾ ಬಯಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಗೋವತ್ಸ ದ್ವಾದಶಿಯ ಮಹತ್ವವನ್ನು ಭವಿಷ್ಯ ಪುರಾಣದಲ್ಲಿ ಹೇಳಲಾಗಿದೆ.

ಈ ದಿನದಂದು ಹಬ್ಬ ಆಚರಿಸುವವರು ಹಸು, ಕರುಗಳಿಗೆ ಸ್ನಾನ ಮಾಡಿಸಿ, ಬಟ್ಟೆ, ಹೂವಿನ ಹಾರ ಹಾಕಿ, ನಂತರ ಸ್ನಾನ ಮಾಡುತ್ತಾರೆ. ಮತ್ತು ಅವರ ಹಣೆಗೆ ಅರಿಶಿನದಪುಡಿಯನ್ನು ಹಚ್ಚಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಜನರು ಹಸು, ಕರುಗಳನ್ನು ಮಣ್ಣಿನಿಂದ ಮಾಡಿ, ಅವುಗಳಿಗೆ ಬಟ್ಟೆ ಹಾಕಿ, ಸಾಂಕೇತಿಕವಾಗಿ ಅಲಂಕರಿಸುತ್ತಾರೆ. ಆರತಿ ಮಾಡಲಾಗುತ್ತದೆ. ಗೋಧಿಯ ಉತ್ಪನ್ನಗಳು, ಕಡಲೆ ಮೊಳಕೆಗಳನ್ನು ಹಸುಗಳಿಗೆ ತಿನ್ನಿಸಲಾಗುತ್ತದೆ. ಇದು ಕಾಮಧೇನುವಿನ ಮಗಳಾದ ಮತ್ತು ವಸಿಷ್ಠರ ಆಶ್ರಮದಲ್ಲಿ ವಾಸಿಸುತ್ತಿದ್ದ ಪವಿತ್ರ ಹಸು ನಂದಿನಿಯ ಸಂಕೇತವಾಗಿದೆ. ಭಕ್ತರು ಗೋವುಗಳಿಗೆ ಶ್ರೀಕೃಷ್ಣ ಪರಮಾತ್ಮನ ಪ್ರೀತಿಯನ್ನು ಕೊಂಡಾಡುತ್ತ, ತಮ್ಮ ಪ್ರಿಯತಮ ಎಂದು ಹಾಡಿಕೊಳ್ಳುತ್ತಾರೆ. ಮಹಿಳೆಯರು ತಮ್ಮ ಮಕ್ಕಳ ಹಿತಕ್ಕಾಗಿ ನಂದಿನಿ ವ್ರತ/ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಂದು ನೀರು ಮತ್ತು ಆಹಾರ ಸೇವನೆಯನ್ನು ತ್ಯಜಿಸುತ್ತಾರೆ. ಭಾರತದ ಅನೇಕ ಹಳ್ಳಿಗಳಲ್ಲಿ ಹಸುಗಳು ತಾಯ್ತನದ ಸಂಕೇತವಾಗಿದ್ದು, ಜೀವನಾಧಾರದ ಮುಖ್ಯ ಮೂಲವಾಗಿರುವ ಕಾರಣ, ಅವು ದೀಪಾವಳಿ ಪೂಜೆಯ ಕೇಂದ್ರಬಿಂದುವಾಗಿವೆ.

ರಾಷ್ಟ್ರೀಯ ಏಕೀಕರಣ ದಿನ

ಮಹತ್ವ

ದಿನವನ್ನುರಾಷ್ಟ್ರೀಯ ಏಕ್ತಾ ದಿವಸ್’ ಎಂದೂ ಕರೆಯುತ್ತಾರೆ. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, "ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಇರುವ ನಿಜವಾದ ಮತ್ತು ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ನಮ್ಮ ದೇಶದ ಅಂತರ್ಗತ ಶಕ್ತಿ ಮತ್ತು ದೃಢತೆಯನ್ನು ಮರುದೃಢೀಕರಿಸಲು ದಿನವು ಅವಕಾಶ ನೀಡುತ್ತದೆ" ಎಂದು ಹೇಳಿದ್ದಾರೆ.

ಭಾರತ ವೈವಿಧ್ಯಮಯ ದೇಶವಾಗಿದ್ದು, ಏಕತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಭಾರತದ ಉಕ್ಕಿನ ಮನುಷ್ಯನ ನೆನಪಿಗಾಗಿ ಭಾರತ ಸರ್ಕಾರ ಗುಜರಾತ್ನ ನರ್ಮದಾ ನದಿಯ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಿದೆ.

ಆಚರಣೆ

2019ರಲ್ಲಿ ರಾಷ್ಟ್ರೀಯ ಏಕತಾ ದಿವಸ್ ದಿನದಂದು ಪ್ರಧಾನಿಯವರು ಕೇವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಪ್ರತಿಜ್ಞೆಯನ್ನು ಬೋಧಿಸಿದರು. ದೇಶದ ನಾನಾ ಭಾಗಗಳಿಂದ ವಿವಿಧ ಪೊಲೀಸ್ ಸಿಬ್ಬಂದಿ ಪ್ರಸ್ತುತಪಡಿಸಿದ ರಾಷ್ಟ್ರೀಯ ಏಕತಾ ದಿವಾ ಪರೇಡ್ ಅನ್ನು ಅವರು ಪರಿಶೀಲಿಸಿದರು.

ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಧ್ಯೇಯವನ್ನು ಉತ್ತೇಜಿಸಲು ಗಮನಾರ್ಹ ಮತ್ತು ಸ್ಫೂರ್ತಿದಾಯಕ ಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ಬಲಿಷ್ಠ ಮತ್ತು ಏಕೀಕೃತ ಭಾರತದ ಮೌಲ್ಯವನ್ನು ಬಲಪಡಿಸುತ್ತದೆ. ರಾಷ್ಟ್ರೀಯ ಏಕತಾ ದಿನದ (ಅಕ್ಟೋಬರ್ 31) ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗುವುದು.

ದಿನದಂದು ವಿವಿಧ ಶಾಲಾ ಕಾಲೇಜುಗಳಲ್ಲಿ ಬ್ಯಾನರ್, ಪೋಸ್ಟರ್ ತಯಾರಿಕೆ, ಪ್ರಬಂಧ ಸ್ಪರ್ಧೆ, ಭಾಷಣ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲೆ ಮತ್ತು ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.