ಹತ್ತು ದಿನಗಳ ಈ ಉತ್ಸವದಲ್ಲಿ ಪ್ರತಿದಿನವೂ ಒಂದೊಂದು ತೀರ್ಥಕ್ಕೆ ಶ್ರೀಯವರ ಪಾದುಕೆ ಬಿಜಯ ಮಾಡಿಸುತ್ತಾರೆ. ನಾಲ್ಕನೆ ದಿನ ರಾಜಮುಡಿಯನ್ನು ಸ್ವಾಮಿಗೆ ಧಾರಣೆ ಮಾಡುತ್ತಾರೆ. ಇದರಲ್ಲಿ ಧ್ವಜಾರೋಹಣ, ತೇರು ಕಳ್ಳರ ಸುಲಿಗೆ, ತೀರ್ಥಸ್ನಾನ ಎಲ್ಲವೂ ನಡೆದು ರಾತ್ರಿವೇಳೆಯಲ್ಲಿ ವಾಹನಗಳು ನಡೆದು ‘ಪಡಿಯೇತ್ತ’ ಜರುಗುತ್ತದೆ. ಈ ಜಾತ್ರೆಯನ್ನು ರಾಜ ಒಡೆಯರ್ ರವರು ಪ್ರಾರಂಭಿಸಿದ್ದು. ರಾಜಮುಡಿ, ಗಂಡುಭೇರುಂಡ ಪದಕ ಹಾಗೂ ಪದ್ಮಪೀಠ ಈ ಉತ್ಸವದಲ್ಲಿ ಗಮನ ಸೆಳೆಯುತ್ತದೆ. ಇಲ್ಲಿ ಅಷ್ಟತೀರ್ಥ ಉತ್ಸವವನ್ನು ಮುಂತಾದವನ್ನು ಏರ್ಪಡಿಸಿರುತ್ತಾರೆ. ಇದು ರಾಜಮುಡಿ ಜಾತ್ರೆ ಎಂದು ಪ್ರಸಿದ್ಧವಾಗಿದೆ.