ಬಲೀಂದ್ರ ಪೂಜೆ


ಬಲಿ ಪ್ರತಿಪದವು ರಾಜ ಮಹಾಬಲಿಯನ್ನು ಸ್ವಾಗತಿಸಲು ಆಚರಿಸಲಾಗುತ್ತದೆ ಮತ್ತು ಇದು ಭಗವಾನ್ ವಿಷ್ಣು ಮತ್ತು ಬಲಿರಾಜನ ದಂತಕಥೆಗೆ ಸಂಬಂಧಿಸಿದೆ. ದೀಪಾವಳಿಯ ಮೂರನೇ ದಿನ ಬಲೀಂದ್ರ ಪೂಜೆ. ಈ ದಿನದಂದು ಅನುಸರಿಸಿರುವ ಸಂಪ್ರದಾಯಗಳು ಮತ್ತು ಸಂಪ್ರದಾಯಗಳು ಉತ್ತರ ಭಾರತದಂತೆಯೇ ಇವೆ.

ಅಮಾವಾಸ್ಯೆ ದಿನ ಪಾಡ್ಯ ಇದ್ದ ರಾತ್ರಿಯಲ್ಲಿ ದೇವರ ಪೂಜೆಯನಂತರ ತುಲಸೀ ಸಮೀಪ ಇಲ್ಲವೇ ಮನೆಯಲ್ಲಿ ರಂಗವಲ್ಲಿಗಳಿಂದ ಬಲಿ ಚಕ್ರವರ್ತಿಯ ಆಕಾರ ಬರೆದು ಅದರ ಮಧ್ಯದಲ್ಲಿ ಸ್ವಸ್ತಿಕೆಯನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನನನ್ನೂ ಬಲೀಂದ್ರನನ್ನೂ ಪೂಜಿಸಬೇಕು. ದೀಪಾವಳಿ ಅಮಾವಸ್ಯೆಯ ದಿನ ದೇವರ ಪೂಜೆಯನಂತರ ಮನೆಯ ಒಳಗೆ ಅಥವಾ ಹೊರಗೆ ಬಲೀಂದ್ರನನ್ನು ರಂಗವಲ್ಲಿಗಳಿಂದ ಬಿಡಿಸಿ ಪದ್ಮಮಂದಲ ಬರೆದು, ಸ್ವಸ್ತಿಕೆಯನ್ನಿಟ್ಟು ಅದರ ಮೇಲೆ ಸಾಲಿಗ್ರಾಮವನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನ ಪೂಜೆಯನ್ನು ಮಾಡಬೇಕು.

ವಾಮನ ದೇವರನ್ನು ಪೂಜಿಸಿದನಂತರ ಬಲೀಂದ್ರನನ್ನು ಪೂಜಿಸಬೇಕು. ಆವಾಹಿಸಿ ಪೂಜಿಸಿ ನೀರಾಜನ ಮಂತ್ರಪುಷ್ಪಗಳಿಂದ ಷೋಡಶೋಪಚಾರ ಪೂಜೆ ಮಾಡಬೇಕು. ಆಮೇಲೆ ಪುಷ್ಪಾಕ್ಷತೆಗಳಿಂದ ಪ್ರಾರ್ಥಿಸಬೇಕು.

ನಮಸ್ಕರಿಸಿ ಕೃಷ್ಣಾರ್ಪಣ ಬಿಡಬೇಕು. ಅನಂತರ ಒಂದು ಹರಿವಾಣದಲ್ಲಿ ಧಾನ್ಯದ ಮೇಲೆ ೫ ದೊಡ್ಡ ದೀಪಗಳನ್ನು ಹಚ್ಚಿ ದೇವರಿಗೆ ಮಂಗಳಾರತಿ ಮಾಡಿ ಮನೆಯಲ್ಲಿ ದೀಪವನ್ನು ಹಚ್ಚಿಟ್ಟು ಹರಿವಾಣದ(ತಟ್ಟೆ) ದೀಪವನ್ನು ಘಂಟಾನಾದದ ಮೂಲಕ ಎಲ್ಲಾ ಕಡೆಗೂ ತೋರಿಸಬೇಕು. ಇದು ರೂಢಿಯಲ್ಲಿರುವ ಪದ್ಧತಿ.