ಮಹತ್ವ, ಪ್ರಯೋಜನಗಳು ಮತ್ತು ಆಚರಣೆ
ಗೋವತ್ಸ ದ್ವಾದಶಿ ಒಂದು ಹಿಂದೂ ಸಾಂಸ್ಕೃತಿಕ
ಮತ್ತು ಧಾರ್ಮಿಕ ಹಬ್ಬವಾಗಿದ್ದು, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ದೀಪಾವಳಿಯ ಆರಂಭವನ್ನು ಸೂಚಿಸುತ್ತದೆ,
ಇದನ್ನು ‘ವಸು ಬಾರಾಸ್’ ಎಂದು ಕರೆಯಲಾಗುತ್ತದೆ. ಗುಜರಾತ್ ನಲ್ಲಿ ಇದನ್ನು ‘ವಾಘ್ ಬಾರಸ್’ ಎಂದು ಮತ್ತು
ಶ್ರೀಪಾದವಲ್ಲಭ ಆರಾಧನಾ ಉತ್ಸವ ಎಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋವುಗಳನ್ನು ಅತ್ಯಂತ
ಪವಿತ್ರ ವೆಂದು ಪರಿಗಣಿಸಲಾಗಿದೆ ಮತ್ತು ಮನುಕುಲಕ್ಕೆ ಪೋಷಣೆಯನ್ನು ನೀಡುವುದರಿಂದ ತಾಯಂದಿರಿಗೆ ಸಮಾನವಾಗಿದೆ.
ಉತ್ತರದ ಕೆಲವು ರಾಜ್ಯಗಳಲ್ಲಿ, ಗೋವತ್ಸಾ ದ್ವಾದಶಿಯನ್ನು
ವಾಘ್ ಎಂದು ಉಲ್ಲೇಖಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಆರ್ಥಿಕ ಸಾಲವನ್ನು ಮರುಪಾವತಿಸುವ ದಿನವೂ ಹೌದು.
ಆದ್ದರಿಂದ ವ್ಯಾಪಾರಿಗಳು ತಮ್ಮ ಖಾತೆಗಳ ಪುಸ್ತಕಗಳನ್ನು ಕ್ಲಿಯರ್ ಮಾಡುವ ಮತ್ತು ತಮ್ಮ ಹೊಸ ಲೆಡ್ಜರ್
ಗಳಲ್ಲಿ ಹೆಚ್ಚಿನ ವಹಿವಾಟುಗಳನ್ನು ಮಾಡದಿರುವ ದಿನವಾಗಿದೆ.
ಗೋವತ್ಸ ದ್ವಾದಶಿಯನ್ನು ನಂದಿನಿ ವ್ರತವೆಂದು
ಸಹ ಆಚರಿಸಲಾಗುತ್ತದೆ, ಏಕೆಂದರೆ ನಂದಿನಿ ಮತ್ತು ನಂದಿ (ಗೂಳಿ) ಎರಡೂ ಶೈವ ಸಂಪ್ರದಾಯದಲ್ಲಿ ಪವಿತ್ರವೆಂದು
ಪರಿಗಣಿಸಲಾಗಿದೆ. ಗೋವುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದ್ದು, ಗೋವುಗಳಿಗೆ ಹಾಗೂ ಕರುಗಳಿಗೆ
ಗೋಪೂಜೆ ಮಾಡಿ, ಅವುಗಳಿಗೆ ಗೋಧಿಯ ಉತ್ಪನ್ನಗಳನ್ನು ನೀಡಿ ಪೋಷಿಸಲಾಗುತ್ತಿದೆ. ಈ ದಿನದಂದು ಭಕ್ತರು
ಯಾವುದೇ ಗೋಧಿ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಈ ಆಚರಣೆಗಳು ಮತ್ತು ಪೂಜೆಗಳಿಂದ
ಭಕ್ತರ ಎಲ್ಲಾ ಬಯಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಗೋವತ್ಸ ದ್ವಾದಶಿಯ ಮಹತ್ವವನ್ನು ಭವಿಷ್ಯ
ಪುರಾಣದಲ್ಲಿ ಹೇಳಲಾಗಿದೆ.
ಈ ದಿನದಂದು ಹಬ್ಬ ಆಚರಿಸುವವರು ಹಸು, ಕರುಗಳಿಗೆ ಸ್ನಾನ ಮಾಡಿಸಿ, ಬಟ್ಟೆ, ಹೂವಿನ ಹಾರ ಹಾಕಿ, ನಂತರ ಸ್ನಾನ ಮಾಡುತ್ತಾರೆ. ಮತ್ತು ಅವರ ಹಣೆಗೆ ಅರಿಶಿನದಪುಡಿಯನ್ನು ಹಚ್ಚಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಜನರು ಹಸು, ಕರುಗಳನ್ನು ಮಣ್ಣಿನಿಂದ ಮಾಡಿ, ಅವುಗಳಿಗೆ ಬಟ್ಟೆ ಹಾಕಿ, ಸಾಂಕೇತಿಕವಾಗಿ ಅಲಂಕರಿಸುತ್ತಾರೆ. ಆರತಿ ಮಾಡಲಾಗುತ್ತದೆ. ಗೋಧಿಯ ಉತ್ಪನ್ನಗಳು, ಕಡಲೆ ಮೊಳಕೆಗಳನ್ನು ಹಸುಗಳಿಗೆ ತಿನ್ನಿಸಲಾಗುತ್ತದೆ. ಇದು ಕಾಮಧೇನುವಿನ ಮಗಳಾದ ಮತ್ತು ವಸಿಷ್ಠರ ಆಶ್ರಮದಲ್ಲಿ ವಾಸಿಸುತ್ತಿದ್ದ ಪವಿತ್ರ ಹಸು ನಂದಿನಿಯ ಸಂಕೇತವಾಗಿದೆ. ಭಕ್ತರು ಗೋವುಗಳಿಗೆ ಶ್ರೀಕೃಷ್ಣ ಪರಮಾತ್ಮನ ಪ್ರೀತಿಯನ್ನು ಕೊಂಡಾಡುತ್ತ, ತಮ್ಮ ಪ್ರಿಯತಮ ಎಂದು ಹಾಡಿಕೊಳ್ಳುತ್ತಾರೆ. ಮಹಿಳೆಯರು ತಮ್ಮ ಮಕ್ಕಳ ಹಿತಕ್ಕಾಗಿ ನಂದಿನಿ ವ್ರತ/ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಂದು ನೀರು ಮತ್ತು ಆಹಾರ ಸೇವನೆಯನ್ನು ತ್ಯಜಿಸುತ್ತಾರೆ. ಭಾರತದ ಅನೇಕ ಹಳ್ಳಿಗಳಲ್ಲಿ ಹಸುಗಳು ತಾಯ್ತನದ ಸಂಕೇತವಾಗಿದ್ದು, ಜೀವನಾಧಾರದ ಮುಖ್ಯ ಮೂಲವಾಗಿರುವ ಕಾರಣ, ಅವು ದೀಪಾವಳಿ ಪೂಜೆಯ ಕೇಂದ್ರಬಿಂದುವಾಗಿವೆ.