ಈ ದಿನವನ್ನು ‘ರಾಷ್ಟ್ರೀಯ ಏಕ್ತಾ ದಿವಸ್’ ಎಂದೂ ಕರೆಯುತ್ತಾರೆ.
ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ,
"ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಇರುವ ನಿಜವಾದ ಮತ್ತು ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ನಮ್ಮ ದೇಶದ ಅಂತರ್ಗತ ಶಕ್ತಿ ಮತ್ತು ದೃಢತೆಯನ್ನು ಮರುದೃಢೀಕರಿಸಲು ಈ ದಿನವು ಅವಕಾಶ ನೀಡುತ್ತದೆ"
ಎಂದು ಹೇಳಿದ್ದಾರೆ.
ಭಾರತ ವೈವಿಧ್ಯಮಯ ದೇಶವಾಗಿದ್ದು,
ಏಕತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಭಾರತದ ಉಕ್ಕಿನ ಮನುಷ್ಯನ ನೆನಪಿಗಾಗಿ ಭಾರತ ಸರ್ಕಾರ ಗುಜರಾತ್ನ ನರ್ಮದಾ ನದಿಯ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಿದೆ.
ಆಚರಣೆ
2019ರಲ್ಲಿ ರಾಷ್ಟ್ರೀಯ ಏಕತಾ ದಿವಸ್ ದಿನದಂದು ಪ್ರಧಾನಿಯವರು ಕೇವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಪ್ರತಿಜ್ಞೆಯನ್ನು ಬೋಧಿಸಿದರು.
ದೇಶದ ನಾನಾ ಭಾಗಗಳಿಂದ ವಿವಿಧ ಪೊಲೀಸ್ ಸಿಬ್ಬಂದಿ ಪ್ರಸ್ತುತಪಡಿಸಿದ ರಾಷ್ಟ್ರೀಯ ಏಕತಾ ದಿವಾ ಪರೇಡ್ ಅನ್ನು ಅವರು ಪರಿಶೀಲಿಸಿದರು.
ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಧ್ಯೇಯವನ್ನು ಉತ್ತೇಜಿಸಲು ಗಮನಾರ್ಹ ಮತ್ತು ಸ್ಫೂರ್ತಿದಾಯಕ ಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ಬಲಿಷ್ಠ ಮತ್ತು ಏಕೀಕೃತ ಭಾರತದ ಮೌಲ್ಯವನ್ನು ಬಲಪಡಿಸುತ್ತದೆ.
ರಾಷ್ಟ್ರೀಯ ಏಕತಾ ದಿನದ (ಅಕ್ಟೋಬರ್ 31)
ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗುವುದು.
ಈ ದಿನದಂದು ವಿವಿಧ ಶಾಲಾ ಕಾಲೇಜುಗಳಲ್ಲಿ ಬ್ಯಾನರ್, ಪೋಸ್ಟರ್ ತಯಾರಿಕೆ, ಪ್ರಬಂಧ ಸ್ಪರ್ಧೆ, ಭಾಷಣ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲೆ ಮತ್ತು ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.