ಪ್ರದೋಷ

ಪ್ರದೋಷ ಪದವು ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹದಿಮೂರನೇ ದಿನ ನಡೆಯುವ ಅರ್ಧಮಾಸಿಕ ಘಟನೆಯನ್ನು ಸೂಚಿಸುತ್ತದೆ. ಇದು ಶಿವನ ಪೂಜೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ ಮಂಗಳಕರವಾದ ೩ ಗಂಟೆಯ ಅವಧಿ, ಅಂದರೆ ಸೂರ್ಯಾಸ್ತಕ್ಕೆ ಒಂದೂವರೆ ಗಂಟೆ ಮೊದಲು ಮತ್ತು ನಂತರದ ಅವಧಿಯು ಶಿವನ ಪೂಜೆಗಾಗಿ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ಮಾಡಲಾದ ಉಪವಾಸ ಅಥವಾ ವ್ರತವನ್ನು "ಪ್ರದೋಷ ವ್ರತ"ವೆಂದು ಕರೆಯಲಾಗುತ್ತದೆ. ಭಕ್ತನು ರುದ್ರಾಕ್ಷಿ, ವಿಭೂತಿಗಳನ್ನು ಧರಿಸಿ ಶಿವನನ್ನು ಅಭಿಷೇಕ, ಗಂಧದ ಲೇಪನ ದ್ರವ್ಯ, ಬಿಲ್ವಪತ್ರೆ, ಸುಗಂಧ ದ್ರವ್ಯ, ದೀಪ ಮತ್ತು ನೈವೇದ್ಯದಿಂದ ಪೂಜಿಸಬೇಕು.

ವ್ಯುತ್ಪತ್ತಿ

ಪ್ರದೋಷ ಪದದ ವ್ಯುತ್ಪತ್ತಿ ಹೀಗಿದೆ - ಪ್ರದೋಷನು ಕಲ್ಪ ಮತ್ತು ದೋಷ ಇವರ ಮಗನಾಗಿದ್ದಾನೆ. ಅವನಿಗೆ ನಿಶಿತ ಮತ್ತು ವ್ಯುಸ್ಥ ಎಂಬ ಹೆಸರಿನ ಇಬ್ಬರು ಸೋದರರಿದ್ದಾರೆ. ಈ ಮೂರು ಹೆಸರುಗಳ ಅರ್ಥ ರಾತ್ರಿಯ ಆರಂಭ, ಮಧ್ಯಭಾಗ ಮತ್ತು ಅಂತ್ಯ ಎಂಬುದಾಗಿದೆ. ಪ್ರತಿ ತಿಂಗಳಲ್ಲಿ ಮತ್ತು ಪ್ರತಿ ಪಕ್ಷದ ಅವಧಿಯಲ್ಲಿ, ತ್ರಯೋದಶಿಯು ದ್ವಾದಶಿಯ ಅಂತ್ಯವನ್ನು ಸೇರುವಾಗಿನ ಸಮಯ ಬಿಂದುವನ್ನು ಪ್ರದೋಷ ಎಂದು ಕರೆಯಲಾಗುತ್ತದೆ.

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ ಮತ್ತು ಮಹತ್ವ

ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.

ಪ್ರಥಮ ವಿಶ್ವ ಆರೋಗ್ಯ ದಿನ

1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.

ವಿಶ್ವ ಆರೋಗ್ಯ ದಿನದ ಆಚರಣೆ

ಈ ಆಚರಣೆಯಲ್ಲಿ ಆಯಾ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ಲಾಭರಹಿತ ಕಾರ್ಯನಿರ್ವಹಿಸುವ ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸುತ್ತವೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ವಿವಿಧ ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ ಹೆಚ್ಚು ಹೆಚ್ಚು ಜನರಿಗೆ ಈ ಮಾಹಿತಿ ಲಭ್ಯವಾಗಲು ನೆರವಾಗುತ್ತವೆ.

ಕೆಲವು ಪ್ರಮುಖ ಧ್ಯೇಯೋದ್ದೇಶಗಳು

§  ಅಧಿಕ ರಕ್ತದೊತ್ತಡಕ್ಕೆ ಕಾರಣ ಮತ್ತು ತಡೆಯುವ ನಿಟ್ಟಿನಲ್ಲಿ ಜನಸಾಮಾನ್ಯರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

§  ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಮತ್ತು ಅದರಿಂದ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿಗಳು

§  ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಿರಲು ಕೈಗೊಳ್ಳಬೇಕಾದ ಕ್ರಮಗಳು

§  ಕುಡಿಯುವ ನೀರಿದ ಸದ್ಬಳಕೆ, ಬಯಲು ಶೌಚಾಲಯದ ಅಪಾಯಗಳು

ಮೃಗವಧೆ ಮಲ್ಲಿಕಾರ್ಜುನ ರಥ

ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ

ಮೃಗವಧೆ (ಮಿಗವನ್ನು ವಧಿಸಿದ ಸ್ಥಳ) ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ೨೫ ಕಿ ಮಿ ಹಾಗೂ ಕೊಪ್ಪದಿಂದ ೨೨ ಕಿಮಿ ದೂರದಲ್ಲಿದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ.

ಐತಿಹ್ಯ

ವನವಾಸ ಸಂದರ್ಭದಲ್ಲಿ ಶ್ರೀ ರಾಮನು, ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ್ದು ಈ ಸ್ಥಳದಲ್ಲೆಂದು ಪ್ರತೀತಿ. ಇದರಿಂದುಂಟಾದ ಬ್ರಹ್ಮಹತ್ಯ ದೋಷದಿಂದ ಪಾರಾಗಲು ಶ್ರೀರಾಮನು ಮಾರೀಚನ ದೇಹದಲ್ಲಿದ್ದ ಬಾಣವನ್ನು ಹೊರತೆಗೆದು ಬ್ರಾಹ್ಮೀ ನದಿಯ ದಂಡೆಯ ಮೇಲೆ ಶಿವಲಿಂಗವೊಂದನ್ನು ಸ್ಥಾಪಿಸಿದನು. ಇದೇ ಇಂದಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ. ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಈಶ್ವರನ ಸಮಸ್ತ ಗಣಗಳು ನೆಲೆಸಿವೆ ಎನ್ನುತ್ತಾರೆ.

ನಿರ್ಮಾಣ

ಈ ದೇವಾಲಯವನ್ನು ಚಾಲುಕ್ಯರ ಅರಸನಾದ ತ್ರಿಭುವನಮಲ್ಲನು ೧೦೬೦ ರಲ್ಲಿ ನಿರ್ಮಿಸಿದನು. ಕಾಲಾಂತರದಲ್ಲಿ ಕೆಳದಿ ಸೋಮಶೇಖರನ ಕಾಲದಲ್ಲಿ ದೇವಾಲಯವನ್ನು ಪುನರುತ್ಥಾನ ಮಾಡಲಾಯಿತು. ನಾಲ್ಕೂವರೆ ಅಡಿ ಎತ್ತರದ ಶಿವಲಿಂಗ ಇಲ್ಲಿನ ವೈಶಿಷ್ಟ್ಯ.

ಇಲ್ಲಿನ ಇತರ ಪ್ರಮುಖ ದೇವಾಲಯಗಳು

ಶನೈಶ್ಚರ ದೇವಾಲಯ

ಈ ದೇವಸ್ಥಾನದಲ್ಲಿರುವ ಶನೈಶ್ಚರ ದೇವಾಲಯವೂ ಮಲೆನಾಡಿನಲ್ಲಿ ಪ್ರಸಿದ್ಧಿ ಹೊಂದಿದೆ ಹಾಗೂ ಅತಿ ಹೆಚ್ಚು ಭಕ್ತರು ಈ ದೇವರ ದರ್ಶನಕ್ಕೆ ಬರುತ್ತಾರೆ. ಇದಲ್ಲದೇ ಈ ದೇವಸ್ಥಾನದಲ್ಲಿ ಶಂಕರೇಶ್ವರ, ಉಗ್ರ ನರಸಿಂಹ, ಆಂಜನೇಯ ಮತ್ತು ಪಂಜುರ್ಲಿ ದೇವಾಲಯಗಳೂ ಇವೆ.

ಹಿಮವಿದ್ಗೋಪಾಲಸ್ವಾಮಿ ರಥ

ನಯನ ಮನೋಹರ

ಗೋಪಾಲಸ್ವಾಮಿ ಬೆಟ್ಟ (ಸಮುದ್ರ ಮಟ್ಟದಿಂದ ಸುಮಾರು ೪೮೦೦ ಅಡಿ ಎತ್ತರ ಇದೆ) ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪ್ರಕೃತಿ ಚೆಲುವಿನಿಂದ ಇದು ಪ್ರಸಿದ್ಧವಾಗಿದೆ. ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಹಿಮ ಕವಿದಿರುವುದರಿಂದ "ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಎಂಬ ಹೆಸರೂ ಇದೆ.

ಮಾರ್ಗ

ಈ ಬೆಟ್ಟವನ್ನು ತಲುಪಲು ಅರಮನೆಗಳ ನಗರ ಮೈಸೂರಿನಿಂದ ಗುಂಡ್ಲುಪೇಟೆ (೬೭ ಕಿ.ಮೀ) - ಊಟಿ ಮಾರ್ಗದಲ್ಲಿ ಬರುವ ಹಂಗಳ ಎಂಬ ಹಳ್ಳಿಯಿಂದ ಬಲಕ್ಕೆ ಸುಮಾರು ೧೦ ಕಿ.ಮೀ ಕ್ರಮಿಸಬೇಕು. ಬೆಟ್ಟದ ಮೇಲೆ ತಲುಪಲು ರಸ್ತೆ ಅನುಕೂಲ ಇದೆ. ಈ ದೇವಾಲಯವನ್ನು ಕ್ರಿ.ಶ. ೧೩೧೫ ರಲ್ಲಿ ರಾಜ ದಂಡ ನಾಯಕ ಎನ್ನುವವನು ಕಟ್ಟಿಸಿದನು. ನಂತರ ಮೈಸೂರು ಮಹಾರಾಜರು ಈ ದೇವಾಲಯದ ಅಭಿವೃದ್ಧಿ ಮಾಡಿದರು.

ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ೩೬೫ ದಿನಗಳೂ ನೀರು ಜಿನುಗುತ್ತಿರುತ್ತದೆ. ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು. ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ. ಒಂದು ಐತಿಹ್ಯದ ಪ್ರಕಾರ ಕಾಗೆಗಳು ಇಲ್ಲಿರುವ ತೀರ್ಥ ಸ್ಥಳಗಳಲ್ಲಿ ಮಿಂದು ಹಂಸಗಳಾಗಿ ಹಾರಿ ಹೋದವು ಎನ್ನುತ್ತಾರೆ.

ಈ ಪವಿತ್ರ ದಿನದಂದು ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿಯ ರಥೋತ್ಸವ ನೆರವೇರುತ್ತದೆ.

ಈಸ್ಟರ್ ಸಂಡೇ

ಈಸ್ಟರ್ ಕ್ರೈಸ್ತಧರ್ಮೀಯರ ಹಬ್ಬ. ಈಸ್ಟರ್ ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳು ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ನಲಿಯುತ್ತಾರೆ. ವಿವಿಧ ರೀತಿಯಲ್ಲಿ ಅಲಂಕರಣಗೊಂಡ ಮೊಟ್ಟೆಗಳನ್ನು ಪರಸ್ಪರ ವಿನಿಮಯ ಮಾಡುವುದು ಒಂದು ರೂಢಿ.

ಈಸ್ಟರ್ ಹಬ್ಬ ಪೂರ್ವದ ಉಪವಾಸ

ಹಬ್ಬಕ್ಕೆ ಹಿಂದಿನ ನಲವತ್ತು ದಿನಗಳ ವ್ರತೋಪವಾಸಗಳಿಗೆ (ಲೆಂಟ್) ಕ್ರೈಸ್ತರಲ್ಲಿ ಹೆಚ್ಚಿನ ಪ್ರಾಮುಖ್ಯವಿದೆ. ಲೆಂಟ್ ಎಂದರೆ ಇಂಗ್ಲಿಷ್‍ನಲ್ಲಿ ವಸಂತವೆಂದು ಅರ್ಥ. ಈ ಕಟ್ಟಳೆ ಅದೇ ಋತುವಿನಲ್ಲಿ ಬರುತ್ತದೆ. ಈ ವ್ರತ ಬಹಳ ಪ್ರಾಚೀನವಾದುದು. ಕ್ರಿಸ್ತ ತನ್ನ ಬಹಿರಂಗ ಜೀವನವನ್ನು ಆರಂಭಿಸುವುದಕ್ಕೆ ಮುನ್ನ ನಲವತ್ತು ದಿನಗಳು ಜಪ, ಧ್ಯಾನ, ಉಪವಾಸಗಳಲ್ಲಿ ಕಳೆದಿದೆನೆಂಬ ಹೊಸ ಒಡಂಬಡಿಕೆಯ ವರದಿಯೇ ಈ ಸಂಪ್ರದಾಯಕ್ಕೆ ಮುಖ್ಯ ಹಿನ್ನಲೆ. ಈ ಅವಧಿಯಲ್ಲಿ ಕ್ರೈಸ್ತರು ಪ್ರಾಯಶ್ಚಿತ್ತ ಮನೋಭಾವದಿಂದ ಉಪವಾಸ, ದೇಹದಂಡನೆ, ಮಾಂಸಾಹಾರ ವರ್ಜನೆ ಇತ್ಯಾದಿಗಳನ್ನು ಕೈಕೊಳ್ಳಬೇಕೆಂದು ರೋಮನ್ ಚರ್ಚ್ ಬೋಧಿಸುತ್ತದೆ. ಪ್ರಾಚೀನ ಕಾಲದಲ್ಲಿ ಈ ವ್ರತದ ವಿಧಿಗಳು ತುಂಬ ಕಟ್ಟುನಿಟ್ಟಾಗಿದ್ದವು; ಇತ್ತೀಚೆಗೆ ಆಧುನಿಕ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ, ಅವನ್ನು ಸಡಿಲಿಸಲಾಗಿದೆ. ಈಗ ಉಪವಾಸ ಕೇವಲ ವಿಭೂತಿ ಬುಧವಾರ (ಆಷ್ ವೆಡ್‍ನೆಸ್‍ಡೆ) ಮತ್ತು ಶುಭ ಶುಕ್ರವಾರಗಳಿಗಷ್ಟೇ (ಗುಡ್‍ಫ್ರೈಡೆ) ಸೀಮಿತವಾಗಿದೆ. ಈ ವ್ರತದ ಅವಧಿಯ ಕೊನೆಯ ವಾರವನ್ನು ಪವಿತ್ರವಾರವೆಂದು ಪರಿಗಣಿಸಲಾಗಿದೆ.ಈಸ್ಟರ್ ಕುರಿತು ತಿಳಿಯುವುದಕ್ಕೂ ಮುನ್ನ ತಿಳಿಯಬೇಕಾದ ಮತ್ತೊಂದು ಮುಖ್ಯವಾದ ದಿನವೆಂದರೆ ಗುಡ್ ಫ್ರೈಡೆ ಇದು ಸೃಷ್ಟಿ ಡ್ರ್ಯಾಗನ್ ಸೃಷ್ಟಿ ಕೊಲ್ಲುವ ಮೂಲಕ ಹಾಲಿ ಜಾರ್ಜ್ ಸೃಷ್ಟಿಸಿದೆ ಮುಖ್ಯ ಸೃಷ್ಟಿಯ ಕಾಸ್ಮಿಕ್ ಮ್ಯಾನ್ ಇದು ಒಳಗೆ ಸೃಷ್ಟಿಸಿದೆ ದೇವರ ಜನ್ಮ ನೀಡುವ ಮಹಿಳೆ ಮತ್ತು ಗಂಡು ಮ್ಯಾನ್ ಮತ್ತು ಸ್ತ್ರೀ ವುಮನ್ ಮಕ್ಕಳನ್ನು ಸೃಷ್ಟಿಸುತ್ತದೆ ಮಹಿಳೆ ಗಿಫ್ಟ್ ಸೂರ್ಯಾಸ್ತದ ಆಗಮನವು ಚಂದ್ರನ ಕತ್ತಲೆಯ ರಾತ್ರಿ ಮತ್ತು ದೇಹದ ತ್ಯಾಗ ಆತ್ಮಹತ್ಯೆ ಆತ್ಮಹತ್ಯೆಗೆ ಪುರುಷ ಮತ್ತು ಹೆಣ್ಣುಮಕ್ಕಳು ಮತ್ತು ಗಾಡ್ ಜಾರ್ಜಿಯೊ ಸನ್ - ಮೂನ್ ಮಾನವರ ಆತ್ಮದ ಮತ್ತು ನಿದ್ರೆ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರಕೃತಿಯಿಂದ ಮತ್ತು ಪರಿಸರದಿಂದ ಸಂವಹನ ನಡೆಸುತ್ತಾರೆ ಮತ್ತು ಮಾನವರ ಮತ್ತು ಇತರ ಪ್ರಾಣಿಗಳ ಜೀವಿಗಳ ನಡುವಿನ ಇತರ ಆಯಾಮಗಳಲ್ಲಿ ಆತ್ಮವನ್ನು ಸುತ್ತಾಡುತ್ತಾರೆ ಮತ್ತು ಸೂರ್ಯನ ಬೆಳಗಿನ ದಿನದ ಮುಂಜಾನೆ ಎಚ್ಚರಗೊಳ್ಳುವುದು. ಜೀವನ ನಾವು ನಮ್ಮ ದಿನಗಳನ್ನು ಹೊಂದಿರುವವರಾಗಿದ್ದೇವೆ ನಾವು ದೇವರ ಜಾರ್ಜ್ ಸನ್ - ಮೂನ್.

ಗುಡ್ ಫ್ರೈಡೆ

ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ಗುಡ್ ಫ್ರೈಡೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ಕಾರಣ ಹಿಂದಿನಿಂದಲೂ ಪಾಪಪ್ರಾಯಶ್ಚಿ ತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿ ರೂಢಿಯಲ್ಲಿತ್ತು. ಆದರೆ ಮಾನವನ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಮಾತ್ರ ಸಾಲದು. ಅದಕ್ಕೆ ಪರಿಶುದ್ಧವಾದ ರಕ್ತ ಸುರಿಯಬೇಕಿತ್ತು. ಅದೇ ತಂದೆಯಾದ ದೇವರ ಚಿತ್ತವಾಗಿತ್ತು. ಹಾಗೆ ತಂದೆಯ ಚಿತ್ತವನ್ನು ನೆರವೇರಿಸಲೆಂದೇ ದೇವರ ಒಬ್ಬನೇ ಮಗನಾದ ಯೇಸುಕ್ರಿಸ್ತನು ಭೂಮಿಗೆ ಮನುಷ್ಯಕುಮಾರನಾಗಿ ಬಂದನು. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದನು. ಅಂದು ನಡೆದ ಈ ಕಾರ್ಯದಿಂದ ಮನು‍ಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಅಂದರೆ ಯಾರ್ಯಾರು ಯೇಸು ಮಾಡಿದ ಈ ವಿಶೇಷ ಕಾರ್ಯವನ್ನು ನಂಬುತ್ತಾರೋ ಅವರೆಲ್ಲರೂ ಪಾಪಗಳಿಂದ ವಿಮೋಚಿಸಲ್ಪಟ್ಟು ದೇವರಿಗೆ ಮಕ್ಕಳಾಗುವ ಅಧಿಕಾರವನ್ನು ಯೇಸುಕ್ರಿಸ್ತನು ಕೊಟ್ಟಿದ್ದಾನೆ. ನಿಜವಾಗಿ ಆತನು ಶಿಲುಬೆಗೆ ಏರಿಸಲ್ಪಟ್ಟಿದ್ದರಿಂದಲೇ ಮನುಷ್ಯರ ಪಾಪವಿಮೋಚನೆಯಾಯಿತು. ಆದ್ದರಿಂದಲೇ ಈ ದಿನವನ್ನು ಗುಡ್ ಫ್ರೈಡೆ (ಶುಭ ಶುಕ್ರವಾರ) ಎನ್ನಲಾಗಿದೆ.

ಈಸ್ಟರ್ ಹಬ್ಬದ ವಿಶೇಷತೆ

ತಂದೆಯಾದ ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನು ಮನುಷ್ಯರೊಂದಿಗೆ ಸದಾ ಕಾಲ ಜೀವಿಸುವುದಕ್ಕಾಗಿ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ದೇವರಾದ ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ದಿನ ದೇಹವನ್ನು ಗುಹೆಯಲ್ಲಿ ನಿರ್ಮಿಸಿದ ಸಮಾಧಿಯಲ್ಲಿರಿಸಲಾಗಿತ್ತು, ಆದರೆ ಇಂದು ಖಾಲಿ ಸಮಾಧಿಯನ್ನು ಕಾಣಬಹುದು ಕಾರಣ ಯೇಸು ಮರಣವನ್ನು ಜಯಿಸಿ ಎದ್ದುಬಂದ ಯೂದಾ ರಾಜಸಿಂಹ. ಮರಣವು ಯೇಸುಕ್ರಿಸ್ತನನ್ನು ಕೊಲ್ಲಲಿಲ್ಲ, ಬದಲಾಗಿ ಯೇಸುಕ್ರಿಸ್ತನು ಮರಣವನ್ನು ಕೊಂದನು. ಅಂದರೆ ಮೂರು ದಿನಗಳ ಕಾಲ ಸಮಾಧಿಯಲ್ಲಿದ್ದ ಯೇಸುಕ್ರಿಸ್ತನು ತನ್ನ ತಂದೆಯಾದ ದೇವರ ಪ್ರಭಾವದಿಂದ ಎದ್ದುಬಂದನು. ಏಕೆಂದರೆ ಯೇಸುಕ್ರಿಸ್ತನ ದೇಹವನ್ನು ತಂದೆಯಾದ ದೇವರು ಪರಲೋಕದಲ್ಲಿಯೇ ಉಂಟು ಮಾಡಿದ್ದನು ಹಾಗೂ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿಯನ್ನಾಗಿ ಭೂಮಿಗೆ ಕಳುಹಿಸಿದ್ದನು. ಯೇಸುಕ್ರಿಸ್ತನು ತಂದೆ ವಹಿಸಿದ ಕಾರ್ಯವನ್ನು ಶಿಲುಬೆಯಲ್ಲಿ ಸಂಪೂರ್ಣ ಮಾಡಿದ ನಂತರ ಲೋಕಪಾಪವನ್ನು ತನ್ನೊಂದಿಗೆ ಸಮಾಧಿ ಮಾಡಿ ಪುನರುತ್ಥಾನ ಶಕ್ತಿಯೊಂದಿಗೆ ಎದ್ದು ಬಂದನು. ಯಾರ್ಯಾರು ಈ ಸಂಗತಿಗಳನ್ನು ಹೃದಯದಲ್ಲಿ ನಂಬಿ ಯೇಸುಕ್ರಿಸ್ತನನ್ನು ಅಂಗೀಕರಿಸುತ್ತಾರೋ ಅವರೇ ದೇವರ ಮಕ್ಕಳು. ಅವರನ್ನೇ ನಿಜವಾದ ಅರ್ಥದಲ್ಲಿ ಕ್ರೈಸ್ತರು ಎನ್ನಲಾಗುತ್ತದೆ.

ಗುಡ್ ಫ್ರೈಡೇ,

ಶುಭ ಶುಕ್ರವಾರವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತೆಯೋ ಹಾಗೆ ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ಪವಿತ್ರ ಸಪ್ತಾಹದ ಅಂಗವಾದ ಶುಭ ಶುಕ್ರವಾರವು ಯೆಹೂದ್ಯರ ಆಚರಣೆಯಾದ ಪಾಸ್ಕದೊಂದಿಗೆ ತಳುಕು ಹಾಕಿಕೊಳ್ಳುತ್ತ

ಅಧಿಕೃತ ಶುಭಸಂದೇಶಗಳ ಪ್ರಕಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದು ಶುಕ್ರವಾರವೆನ್ನಲಾಗಿದೆ.  ಶುಭ ಶುಕ್ರವಾರ ಕ್ರಿಸ್ತಶಕ ೩೩ ರಲ್ಲಿ ಸಂಭವಿಸಿತೆಂದು ಇತ್ತಂಡಗಳು ಅಂದಾಜಿಸಿವೆ, ಆದರೆ ಪವಿತ್ರ ಬೈಬಲ್ ಮತ್ತು ಜೂಲಿಯನ್ ಕ್ಯಾಲೆಂಡರ್ಗಳ ನಡುವಿನ ವ್ಯತ್ಯಾಸಗಳು ಹಾಗೂ ಚಂದ್ರನ ಚಲನೆಯನ್ನು ಅಭ್ಯಸಿಸಿದ ಐಸಾಕ್ ನ್ಯೂಟನ್ ಪ್ರಕಾರ ಅದು ಕ್ರಿಸ್ತಶಕ ೩೪. ಮೂರನೇ ವಿಧಾನದಲ್ಲಿ ಚಂದ್ರಚಲನೆಯ ವೀಕ್ಷಣೆಯನ್ನು ಪರಿಗಣಿಸಿ (ಶಿಲುಬೆಗೇರಿಸಿದ ಸಂದರ್ಭದ ಸಂಪೂರ್ಣ ಸೂರ್ಯಗ್ರಹಣ ಆಧರಿಸಿ) ಹಾಗೂ ಪವಿತ್ರ ಬೈಬಲ್ಲಿನ ಪ್ರೇಷಿತರ ಕಾರ್ಯಕಲಾಪಗಳು ಭಾಗದಲ್ಲಿ ಯೇಸುವಿನ ಶಿಷ್ಯ ಪೇತ್ರನು ದಾಖಲಿಸಿದ ರಕುತ ಚಂದ್ರಮನ ಪ್ರಸ್ತಾಪವನ್ನು ಅನುಸರಿಸಿ ಶುಭಶುಕ್ರವಾರವು ಕ್ರಿಸ್ತಶಕ ೩೩ನೇ ವರ್ಷದ ಏಪ್ರಿಲ್ ೩ಕ್ಕೆ ಸರಿಹೊಂದುವುದೆನ್ನಲಾಗಿದೆ.

ಶುಭ ಶುಕ್ರವಾರ ಆಚರಿಸಲು ಹೇಗೆ ಗುಡ್ ಶುಕ್ರವಾರ 40 ದಿನಗಳ ಮುಂಚಿತವಾಗಿ ಪ್ರಾರಂಭವಾಯಿತು. ಈ ಸಮಯದಲ್ಲಿ, ಚರ್ಚುಗಳು ಮತ್ತು ಮನೆಗಳಿಂದ ಅಲಂಕಾರಿಕ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ. ಈ ಉತ್ಸವವನ್ನು ಪವಿತ್ರ ವಾರದ ಆಚರಿಸಲಾಗುತ್ತದೆ ಮತ್ತು ಲಾರ್ಡ್ ಜೀಸಸ್ ಕೊನೆಯ ಪದಗಳನ್ನು ನೆನಪಿಸಿಕೊಂಡ ನಂತರ ನೆನಪಿಸಿಕೊಳ್ಳಲಾಗುತ್ತದೆ. ಇದಲ್ಲದೆ ಚರ್ಚ್ ನಲ್ಲಿ ಪವಿತ್ರ ಜಲವನ್ನು ಖಾಲಿ ಮಾಡಲಾಗುತ್ತದೆ. ಜೊತೆಗೆ ಧರ್ಮ ಗ್ರಂಥ ಹಾಗೂ ಶಿಲುಬೆಯನ್ನು ಪೂಜಿಸಲಾಗುತ್ತದೆ.

ಈಸ್ಟರ್ ಭಾನುವಾರ ಶಿಲುಬೆಯ ಮೇಲೆ ನೇತು ಮೂರು ದಿನಗಳ ನಂತರ ಪುನರುತ್ಥಾನಗೊಂಡಿದೆ ಎಂದು ನಂಬಲಾಗಿದೆ, ಲಾರ್ಡ್ ಜೀಸಸ್ ಪುನರುತ್ಥಾನಗೊಂಡ ನಂತರ, ನಂತರ 40 ದಿನಗಳು ಲಾರ್ಡ್ ತನ್ನ ಅನುಯಾಯಿಗಳು ಕಾಣಿಸಿಕೊಂಡರು ಮತ್ತು ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ತೋರಿಸಲು ಬೋಧಿಸಿದರು. ಅಂದಿನಿಂದ, ಈಸ್ಟರ್ ಭಾನುವಾರದಂದು ಲಾರ್ಡ್ಸ್ ಪುನರುತ್ಥಾನದ ಆನಂದದಲ್ಲಿ ಆಚರಿಸಲಾಯಿತು. ಈ ದಿನ ಜನರು ಲಾರ್ಡ್ ಮರೆಯದಿರಿ ಮತ್ತು ಪವಿತ್ರ ಔತಣಕೂಟವನ್ನು ಸಂಘಟಿಸುತ್ತಾರೆ.

ಮೂರ್ಖರ ದಿನಾಚರಣೆ

ಇತಿಹಾಸ

ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ ೨೫ ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ಏಪ್ರಿಲ್ ೧ ರಂದು ಮುಕ್ತಾಯಗೊಳಿಸುತ್ತಿದ್ದರು. ಫ್ರಾನ್ಸಿನ ದೊರೆ ಒಂಭತ್ತನೆಯ ಚಾರ್ಲ್ಸ್ ೧೫೮೨ ರಲ್ಲಿ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ ಜನವರಿ ೦೧, ನೂತನ ವರ್ಷದ ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ ಏಪ್ರಿಲ್ ೧ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.