ಹಿಮವಿದ್ಗೋಪಾಲಸ್ವಾಮಿ ರಥ

ನಯನ ಮನೋಹರ

ಗೋಪಾಲಸ್ವಾಮಿ ಬೆಟ್ಟ (ಸಮುದ್ರ ಮಟ್ಟದಿಂದ ಸುಮಾರು ೪೮೦೦ ಅಡಿ ಎತ್ತರ ಇದೆ) ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪ್ರಕೃತಿ ಚೆಲುವಿನಿಂದ ಇದು ಪ್ರಸಿದ್ಧವಾಗಿದೆ. ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಹಿಮ ಕವಿದಿರುವುದರಿಂದ "ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಎಂಬ ಹೆಸರೂ ಇದೆ.

ಮಾರ್ಗ

ಈ ಬೆಟ್ಟವನ್ನು ತಲುಪಲು ಅರಮನೆಗಳ ನಗರ ಮೈಸೂರಿನಿಂದ ಗುಂಡ್ಲುಪೇಟೆ (೬೭ ಕಿ.ಮೀ) - ಊಟಿ ಮಾರ್ಗದಲ್ಲಿ ಬರುವ ಹಂಗಳ ಎಂಬ ಹಳ್ಳಿಯಿಂದ ಬಲಕ್ಕೆ ಸುಮಾರು ೧೦ ಕಿ.ಮೀ ಕ್ರಮಿಸಬೇಕು. ಬೆಟ್ಟದ ಮೇಲೆ ತಲುಪಲು ರಸ್ತೆ ಅನುಕೂಲ ಇದೆ. ಈ ದೇವಾಲಯವನ್ನು ಕ್ರಿ.ಶ. ೧೩೧೫ ರಲ್ಲಿ ರಾಜ ದಂಡ ನಾಯಕ ಎನ್ನುವವನು ಕಟ್ಟಿಸಿದನು. ನಂತರ ಮೈಸೂರು ಮಹಾರಾಜರು ಈ ದೇವಾಲಯದ ಅಭಿವೃದ್ಧಿ ಮಾಡಿದರು.

ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ೩೬೫ ದಿನಗಳೂ ನೀರು ಜಿನುಗುತ್ತಿರುತ್ತದೆ. ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು. ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ. ಒಂದು ಐತಿಹ್ಯದ ಪ್ರಕಾರ ಕಾಗೆಗಳು ಇಲ್ಲಿರುವ ತೀರ್ಥ ಸ್ಥಳಗಳಲ್ಲಿ ಮಿಂದು ಹಂಸಗಳಾಗಿ ಹಾರಿ ಹೋದವು ಎನ್ನುತ್ತಾರೆ.

ಈ ಪವಿತ್ರ ದಿನದಂದು ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿಯ ರಥೋತ್ಸವ ನೆರವೇರುತ್ತದೆ.