ಮೂರ್ಖರ ದಿನಾಚರಣೆ

ಇತಿಹಾಸ

ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ ೨೫ ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ಏಪ್ರಿಲ್ ೧ ರಂದು ಮುಕ್ತಾಯಗೊಳಿಸುತ್ತಿದ್ದರು. ಫ್ರಾನ್ಸಿನ ದೊರೆ ಒಂಭತ್ತನೆಯ ಚಾರ್ಲ್ಸ್ ೧೫೮೨ ರಲ್ಲಿ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ ಜನವರಿ ೦೧, ನೂತನ ವರ್ಷದ ದಿನವಾಗಿತ್ತು. ಹಲವಾರು ಜನರಿಗೆ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ ಏಪ್ರಿಲ್ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.