ಆಮಲಕಿ ಏಕಾದಶಿ

ಆಮಲಕಿ ಏಕಾದಶಿ ಅಥವಾ ಅಮಾಲಕಿ ಏಕಾದಶಿಯು ಹಿಂದೂ ಪವಿತ್ರ ದಿನವಾಗಿದ್ದು, ಇದು ಫಾಲ್ಗುಣ ಮಾಸದ (ಫೆಬ್ರವರಿ-ಮಾರ್ಚ್) ಚಾಂದ್ರಮಾನ ಮಾಸದಲ್ಲಿ ನಡೆಯುವ ಹುಣ್ಣಿಮೆಯ 11ನೇ ದಿನ (ಏಕಾದಶಿ) ಆಚರಿಸಲಾಗುತ್ತದೆ. ಇದು ಭಾರತೀಯ ನೆಲ್ಲಿಕಾಯಿಗೆ ಸಂಬಂಧಿಸಿದ ಒಂದು ಹಬ್ಬ.

ಏಕಾದಶಿಯ ದೇವರು ವಿಷ್ಣು ದೇವರು ನೆಲ್ಲಿವೃಕ್ಷದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಈ ದಿನದಂದು ನೆಲ್ಲಿಕಾಯಿ ಮರವನ್ನು ದೇವರ ಕೃಪೆಗಾಗಿ ಪೂಜಿಸಲಾಗುತ್ತದೆ.

ಮಹತ್ವ

ವೃಕ್ಷಪೂಜೆ ಹಿಂದೂ ಧರ್ಮದ ಅವಿಭಾಜ್ಯ ಅಂಗ, ಸರ್ವವ್ಯಾಪಿ ದೇವರು ಎಲ್ಲದರಲ್ಲೂ ಜೀವಿಸುತ್ತಾರೆ ಎಂದು ನಂಬುತ್ತಾರೆ.

ವಿಶೇಷವಾಗಿ ನೆಲ್ಲಿಕಾಯಿ ಮರದ ಮೇಲೆ ವಿಷ್ಣು ದೇವರಿರುವ ನಂಬಿಕೆ. ಕೆಲವು ಸಂಪ್ರದಾಯಗಳಲ್ಲಿ, ಸಂಪತ್ತಿನ ದೇವತೆಯಾದ ಅವನ ಪತ್ನಿ ಲಕ್ಷ್ಮಿಯು ಈ ವೃಕ್ಷದಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ವಿಷ್ಣುವಿನ ಅವತಾರ ಕೃಷ್ಣ ಮತ್ತು ಆತನ ಪತ್ನಿ ರಾಧಾ ಮರದ ಬಳಿ ವಾಸವಾಗಿರಬಹುದೆಂದು ನಂಬಲಾಗಿದೆ.

ವಿಧಿಗಳು

ಬೆಳಗ್ಗೆ ಸ್ನಾನ ಮಾಡಬೇಕು. ಈ ಮರಕ್ಕೆ ಪೂಜೆ ಸಲ್ಲಿಸಿ, ನಂತರ ದೇವರಿಗೆ ಪೂಜೆ ಸಲ್ಲಿಸಬೇಕು. ಸಮೃದ್ಧಿ, ಸಂಪತ್ತು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಬ್ರಾಹ್ಮಣ ಪುರೋಹಿತರಿಗೆ ಭಕ್ತರು ಕಾಣಿಕೆಗಳನ್ನು ಅರ್ಪಿಸುತ್ತಾರೆ. ಈ ದಿನದಂದು ಆಹಾರ ಮತ್ತು ದಾನವನ್ನು ಮಾಡಬೇಕು. ಈ ಆಚರಣೆ ವಾಜಪೇಯ ಹಾಗೂ ಸೋಮಯಜ್ಞ ಯಜ್ಞದ ಸಾಧನೆಗೂ ಸಮನಾದ ಗುಣವಿದೆ ಎಂದು ನಂಬಲಾಗಿದೆ.

ವಿಶ್ವ ಕ್ಷಯದಿನ

ಕ್ಷಯವು ಜಗತ್ತಿನ ಅತ್ಯಂತ ಮಾರಣಾಂತಿಕ ಮತ್ತು ಅತ್ಯಂತ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಆದರೆ ನಮ್ಮಲ್ಲಿ ಇರುವ ಅತಿ ದೊಡ್ಡ ಗುಣವೆಂದರೆ ಅದು ತಡೆಗಟ್ಟುವ ಮತ್ತು ಗುಣಪಡಿಸಬಹುದಾದ ಅಂಶವಾಗಿದೆ. ಅತಿ ದೊಡ್ಡ ಸವಾಲೆಂದರೆ ಈ ಕಾಯಿಲೆ ಹರಡುವಿಕೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು.

ಮಹತ್ವ

ನಾವು ಹೋರಾಡುವ ಜೀವನದಲ್ಲಿ ಅನೇಕ ರೋಗಗಳು ಮತ್ತು ಕಾಯಿಲೆಗಳು ಇವೆ. ಆದರೆ ಕೆಲವು ರೋಗಗಳು ರೋಗಿಯ, ಅವರ ಕುಟುಂಬದ ಜೀವನವನ್ನು ಕೆಡಿಸುತ್ತದೆ ಮತ್ತು ಇತರ ರೋಗಗಳಿಗಿಂತ ಹೆಚ್ಚು ಅವ್ಯವಸ್ಥೆಗೆ ದಾರಿ ಮಾಡಿಕೊಡಬಹುದು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಒಂದು ರೋಗವೆಂದರೆ ಕ್ಷಯ (ಟಿಬಿ). ಟಿಬಿಯು ವಿಶ್ವದಾದ್ಯಂತ ಸಾವಿನ ಪ್ರಮುಖ 10 ಕಾರಣಗಳಲ್ಲಿ ಒಂದಾಗಿದೆ, ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಇತರ ಕಾರ್ಯಕರ್ತರು ಮತ್ತು ಆರೋಗ್ಯ ಕ್ಲಿನಿಕ್ ಗಳು ಈ ರೋಗವನ್ನು ಕೊನೆಗಾಣಿಸುವ ಪ್ರತಿಜ್ಞೆಯನ್ನು ಕೈಗೊಂಡಿವೆ.

ಆಚರಣೆ

ಪ್ರತಿವರ್ಷ ಮಾರ್ಚ್ 24 ಈ ಗುರಿಯನ್ನು ನೆನಪಿಸುತ್ತದೆ ಮತ್ತು ವಿಶ್ವ ಕ್ಷಯ ದಿನವನ್ನಾಗಿ ಸ್ಮರಿಸಲಾಗುತ್ತದೆ. ಈ ದಿನದಂದು ಡಾ.ರಾಬರ್ಟ್ ಕೋಚ್ ಅವರು ಬ್ಯಾಸಿಲಸ್ (ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೊಸಿಸ್) ಎಂಬ ಬ್ಯಾಕ್ಟೀರಿಯಾ ಇರುವಿಕೆಯನ್ನು 1882ರಲ್ಲಿ ಪ್ರಕಟಿಸಿದರು. ಈ ಬ್ಯಾಕ್ಟೀರಿಯಾವು ಕ್ಷಯಕ್ಕೆ ಪ್ರಮುಖ ಕಾರಣವಾಗಿದ್ದು, ಆಗ ಮನುಕುಲಕ್ಕೆ ತಿಳಿದಿರಲಿಲ್ಲ. ಈ ಕಾಯಿಲೆಯ ವಿರುದ್ಧ ನಮ್ಮ ಹೋರಾಟದಲ್ಲಿ ಈ ಸಂಶೋಧನೆಯು ನಿರ್ಣಾಯಕ ಪಾತ್ರವಹಿಸಿದೆ. ಕ್ಷಯವನ್ನು ಭಾರತದ ಅತಿ ದೊಡ್ಡ ‘ಕಿಲ್ಲರ್’ ಎಂದು ವಿಶ್ವ ಸಂಸ್ಥೆ ಕರೆದಿದೆ.

ಈ ಭಯಾನಕ ಕಾಯಿಲೆಯ ಬಗ್ಗೆ ಹೊಸ ವ್ಯಕ್ತಿಗೆ ಶಿಕ್ಷಣ ನೀಡುವುದು ಮಾತ್ರ ನಮ್ಮ ಕೆಲಸ.

ವೈರಮುಡಿ ಬ್ರಹ್ಮೋತ್ಸವ

ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಇದು ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು (ಇನ್ನುಳಿದವು ಶ್ರೀರಂಗಂ, ತಿರುಪತಿ, ಕಂಚಿ).

ಇಂಥ ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹತ್ತು ದಿನ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಇದು ಕರ್ನಾಟಕದ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದು. ಅಷ್ಟೇ ಅಲ್ಲ, ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ಇಲ್ಲಿನ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಅತ್ಯದ್ಭುತ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ. ಒಂದು ರೀತಿ ಆಭರಣಗಳ ಹೆಸರಿನಲ್ಲಿ ನಡೆಯುವ ವೈರಮುಡಿ ಉತ್ಸವವೇ ಹಾಗೆ; ಬಹು ವೈಭವೋಪೇತ, ಹಾಗಾಗಿ ಇದು ಜಗತ್ಪ್ರಸಿದ್ಧ

ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣವಾದ ಒಂದು ಕಿರೀಟ. ಆದರೆ ಅಂತಿಂಥದ್ದಲ್ಲ, ದೈವಶಕ್ತಿಯ ಮಹಾಮಹಿಮೆಯ ಕಿರೀಟವಿದು. ಇದರ ಹಿಂದೊಂದು ಪೌರಾಣಿಕ ಕಥೆಯುಂಟು.

 ಸಮದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ.

ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.

ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು ೯ ಗಂಟೆಯಿಂದ ಬೆಳಗಿನ ಜಾವ ೩ ಗಂಟೆವರೆಗೂ ಜರುಗುತ್ತದೆ.

ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.