ವಿಶ್ವ ಕ್ಷಯದಿನ

ಕ್ಷಯವು ಜಗತ್ತಿನ ಅತ್ಯಂತ ಮಾರಣಾಂತಿಕ ಮತ್ತು ಅತ್ಯಂತ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಆದರೆ ನಮ್ಮಲ್ಲಿ ಇರುವ ಅತಿ ದೊಡ್ಡ ಗುಣವೆಂದರೆ ಅದು ತಡೆಗಟ್ಟುವ ಮತ್ತು ಗುಣಪಡಿಸಬಹುದಾದ ಅಂಶವಾಗಿದೆ. ಅತಿ ದೊಡ್ಡ ಸವಾಲೆಂದರೆ ಈ ಕಾಯಿಲೆ ಹರಡುವಿಕೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು.

ಮಹತ್ವ

ನಾವು ಹೋರಾಡುವ ಜೀವನದಲ್ಲಿ ಅನೇಕ ರೋಗಗಳು ಮತ್ತು ಕಾಯಿಲೆಗಳು ಇವೆ. ಆದರೆ ಕೆಲವು ರೋಗಗಳು ರೋಗಿಯ, ಅವರ ಕುಟುಂಬದ ಜೀವನವನ್ನು ಕೆಡಿಸುತ್ತದೆ ಮತ್ತು ಇತರ ರೋಗಗಳಿಗಿಂತ ಹೆಚ್ಚು ಅವ್ಯವಸ್ಥೆಗೆ ದಾರಿ ಮಾಡಿಕೊಡಬಹುದು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಒಂದು ರೋಗವೆಂದರೆ ಕ್ಷಯ (ಟಿಬಿ). ಟಿಬಿಯು ವಿಶ್ವದಾದ್ಯಂತ ಸಾವಿನ ಪ್ರಮುಖ 10 ಕಾರಣಗಳಲ್ಲಿ ಒಂದಾಗಿದೆ, ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಇತರ ಕಾರ್ಯಕರ್ತರು ಮತ್ತು ಆರೋಗ್ಯ ಕ್ಲಿನಿಕ್ ಗಳು ಈ ರೋಗವನ್ನು ಕೊನೆಗಾಣಿಸುವ ಪ್ರತಿಜ್ಞೆಯನ್ನು ಕೈಗೊಂಡಿವೆ.

ಆಚರಣೆ

ಪ್ರತಿವರ್ಷ ಮಾರ್ಚ್ 24 ಈ ಗುರಿಯನ್ನು ನೆನಪಿಸುತ್ತದೆ ಮತ್ತು ವಿಶ್ವ ಕ್ಷಯ ದಿನವನ್ನಾಗಿ ಸ್ಮರಿಸಲಾಗುತ್ತದೆ. ಈ ದಿನದಂದು ಡಾ.ರಾಬರ್ಟ್ ಕೋಚ್ ಅವರು ಬ್ಯಾಸಿಲಸ್ (ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೊಸಿಸ್) ಎಂಬ ಬ್ಯಾಕ್ಟೀರಿಯಾ ಇರುವಿಕೆಯನ್ನು 1882ರಲ್ಲಿ ಪ್ರಕಟಿಸಿದರು. ಈ ಬ್ಯಾಕ್ಟೀರಿಯಾವು ಕ್ಷಯಕ್ಕೆ ಪ್ರಮುಖ ಕಾರಣವಾಗಿದ್ದು, ಆಗ ಮನುಕುಲಕ್ಕೆ ತಿಳಿದಿರಲಿಲ್ಲ. ಈ ಕಾಯಿಲೆಯ ವಿರುದ್ಧ ನಮ್ಮ ಹೋರಾಟದಲ್ಲಿ ಈ ಸಂಶೋಧನೆಯು ನಿರ್ಣಾಯಕ ಪಾತ್ರವಹಿಸಿದೆ. ಕ್ಷಯವನ್ನು ಭಾರತದ ಅತಿ ದೊಡ್ಡ ‘ಕಿಲ್ಲರ್’ ಎಂದು ವಿಶ್ವ ಸಂಸ್ಥೆ ಕರೆದಿದೆ.

ಈ ಭಯಾನಕ ಕಾಯಿಲೆಯ ಬಗ್ಗೆ ಹೊಸ ವ್ಯಕ್ತಿಗೆ ಶಿಕ್ಷಣ ನೀಡುವುದು ಮಾತ್ರ ನಮ್ಮ ಕೆಲಸ.