ಕ್ಷಮಾವಾಣಿ

ಕ್ಷಮೆಯು ಜೈನ ಧರ್ಮದ ಪ್ರಮುಖ ಚಿಂತನೆ. ಮಹಾವೀರರು ಉಪದೇಶಿಸಿದ ಪ್ರಮುಖ ಚಿಂತನೆಗಳಲ್ಲಿ ಕ್ಷಮೆಕೂಡಒಂದು. ಜೈನರಲ್ಲಿ ಶ್ವೇತಾಂಬರರು ಭಾದ್ರಪದ ಶುದ್ಧ ಚತುರ್ದಶಿಯಂದು ಇದನ್ನು ಆಚರಿಸುತ್ತಾರೆ. ಅಂದು ಜಾತಿ ಮತಗಳನ್ನು ಮೀರಿ ಎಲ್ಲರಲ್ಲೂ ಕ್ಷಮೆಯಾಚಿಸಿ ಉಪವಾಸದ ಮೂಲಕ ಪರಿಶುದ್ಧರಾಗುತ್ತಾರೆ. ದಿಗಂಬರರು ಇದೇ ಆಚರಣೆಯನ್ನು ಆಶ್ವಯುಜ ಬಹಳ ಪಾಡ್ಯದಂದು ಸಂವತ್ಸರಿ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.