ಹಿಜರಿ ಶಕೆಯ ಪ್ರಕಾರ ಶಾಬಾನು ತಿಂಗಳ 14 ಮತ್ತು 15ನೇ ದಿನಗಳ ನಡುವಿನ ರಾತ್ರಿಯಂದು ಷಬ್-ಎ.ಬರಾತ್ಹಬ್ಬವು ಆಚರಿಸಲ್ಪಡುತ್ತದೆ. ಶಿಯಾ ಪಂಗಡದವರು ಇದೇ ದಿನ ಮಿದ್-ಶಾಬಾನ್ ಎಂಬ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಅವರಿಗೆ ಇದು ಮಹಮದ್-ಉಲ್-ಮಹದಿ ಎಂಬ ಸಂತರ ಸ್ಮರಣೆಯ ದಿನ. ದಕ್ಷಿಣ ಏಷ್ಯದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಿರಿಯ ಸ್ಮರಣೆ ಮತ್ತು ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುವುದು ಈ ಆಚರಣೆಯ ಮುಖ್ಯ ಉದ್ದೇಶ.