ಶ್ರೀಪಾದವಲ್ಲಭ ಜಯಂತಿ

ಪರಿಪೂರ್ಣ ಅವತಾರವಾದದ ತ್ತಾತ್ರೇಯರು ಕಲಿಯುಗದಲ್ಲಿ ಮೊದಲು ಶ್ರೀಪಾದವಲ್ಲಭರಾಗಿ ಅವತಾರ ಮಾಡಿದರು. ಕ್ರಿ. 1320ರಲ್ಲಿ ಪೀಠಾಪುರಂನಲ್ಲಿ ಜನಿಸಿದ ಅವರ ತಂದೆ ಅಪ್ಪಲರಾಜು ಮತ್ತು ತಾಯಿ ಸುಮತಿ. ಅವರಿಗೆ ಶ್ರೀಪಾದರಾಜಶರ್ಮ ಮತ್ತು ರಾಮ ರಾಜಶರ್ಮ ಎಂಬ ಇಬ್ಬರು ಅಣ್ಣಂದಿರು, ವಿದ್ಯಾಧರಿ, ರಾಧಾ, ಸುರೇಖ ಎನ್ನುವ ಮೂವರು ತಂಗಿಯರೂ ಇದ್ದರು. ತಮ್ಮ 16ನೇ ವಯಸ್ಸಿನಲ್ಲಿ ಸಂನ್ಯಾಸವನ್ನು ಸ್ವೀಕಾರ ಮಾಡಿದ ಅವರು ವಾರಣಾಸಿ, ಬದರಿ, ಶ್ರೀಶೈಲಕ್ಷೇತ್ರಗಳನ್ನು ಸಂದರ್ಶನ ಮಾಡಿ ಕೊನೆಗೆ ಕುರವಪುರ ಅಥವಾ ಕುರುಗುಡ್ಡೆಯಲ್ಲಿ ನೆಲೆನಿಂತರು. ಅಲ್ಲಿಯೇ ತಮ್ಮ 30ನೇ ವಯಸ್ಸಿನಲ್ಲಿ 1351ರಂದು ನದಿಯಲ್ಲಿ ಅದೃಶ್ಯರಾದರು. ಇವರ ಮತ್ತು ನರಸಿಂಹ ಸರಸ್ವತಿಗಳ ಚರಿತೆಯನ್ನು ಗುರುಚರಿತೆಎನ್ನುವ ಹೆಸರಿನಲ್ಲಿ ದಕ್ಷಿಣ ಭಾರತದ ಹಲವು ಕಡೆ ಪಾರಾಯಣ ಮಾಡುತ್ತಾರೆ.