ವಿಶ್ವಪ್ರವಾಸೋಧ್ಯಮ ದಿನ

1970 ಸೆಪ್ಟೆಂಬರ್ 27ರಂದು ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಆಫೀಶಿಯಲ್ ಟ್ರಾವೆಲ್ ಆರ್ಗನೈಶೇಷನ್(ಐಯುಒಟಿಒ) ಮೆಕ್ಸಿಕೋ ನಗರದಲ್ಲಿ ವಿಶೇಷ ಸಭೆ ನಡೆಸಿ ವಿಶ್ವ ಪ್ರವಾಸೋದ್ಯಮ ಸಂಘಟನೆಗೆ ಮಾನ್ಯತೆ ನೀಡಿತು. ಇದರ ಹತ್ತು ವರ್ಷಗಳ ಬಳಿಕ ಅಂದರೆ 1980ರಲ್ಲಿ ಈ ದಿನವನ್ನು ಅಧಿಕೃತವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಣೆ ಮಾಡಲಾಯಿತು. ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶವೆಂದರೆ ಈ ದಿನವು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯದ ಮೇಲೆ ಪ್ರವಾಸೋದ್ಯಮವು ಯಾವ ರೀತಿ ಪರಿಣಾಮ ಬೀರುವುದು ಎಂದು ಸಾರ್ವಜನಿಕರಿಗೆ ತಿಳಿಸಿಕೊಡುವುದಾಗಿದೆ. 1997ರ ಅಕ್ಟೋಬರ್ ನಲ್ಲಿ ಅರ್ಕಿಯ ಇಸ್ತಾನಬುಲ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ವಿಶ್ವ ವ್ಯಾಪಾರ ಸಂಘಟನೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ವಿಶ್ವ ಪ್ರವಾಸೋದ್ಯಮ ದಿನದಂದು ಒಂದೊಂದು ರಾಷ್ಟ್ರಕ್ಕೆ ಆತಿಥ್ಯ ನೀಡುವುದು ಎಂದು ನಿರ್ಧಾರ ಮಾಡಲಾಯಿತು.

ವಿಶ್ವ ಪ್ರವಾಸೋದ್ಯಮ ದಿನವನ್ನು ವಿವಿಧ ವಿಧಾನಗಳಿಂದ ಆಚರಣೆ ಮಾಡಲಾಗುತ್ತದೆ. ಅಮ್ಯೂಸ್ ಮೆಂಟ್ ಪಾರ್ಕ್, ಮ್ಯೂಸಿಯಂ ಮತ್ತು ಇತರ ಕೆಲವೊಂದು ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗಳನ್ನು ಸೆಳೆಯುವುದು ಮತ್ತು ಈ ದಿನದಂದು ಉಚಿತ ಅಥವಾ ರಿಯಾಯಿತಿ ದರದಲ್ಲಿ ಪ್ರವೇಶ ನೀಡುವುದು ಇದೆ. ಅದಾಗ್ಯೂ, ಪ್ರವಾಸೋದ್ಯಮ ದಿನದಂದು ಜನರು ತಾವು ಭೇಟಿಯಾಗಲು ಬಯಸಿದಂತಹ ದೇಶಗಳಿಗೆ ಭೇಟಿ ನೀಡಲು ಹೋಗಿ. ಪ್ರವಾಸೋದ್ಯಮ ದಿನಕ್ಕೆ ಪ್ರತೀ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳನ್ನು ಬರೆಯಲಾಗುತ್ತದೆ. 1980ರಲ್ಲಿ ``ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಶಾಂತಿ ಮತ್ತು ಪರಸ್ಪರ ತಿಳುವಳಿಕೆ ಪ್ರವಾಸೋದ್ಯಮದ ಕೊಡುಗೆ''. 1991ರಲ್ಲಿ ಇದ್ದ ಧ್ಯೇಯ ವಾಕ್ಯ`` ಸಂವಹಕ, ಮಾಹಿತಿ ಮತ್ತು ಶಿಕ್ಷಣ: ಪ್ರವಾಸೋದ್ಯಮ ಬೆಳವಣಿಗೆಯ ಶಕ್ತಿಯ ಮೂಲ'' ಮತ್ತು 2016ರಲ್ಲಿ ``ಪ್ರವಾಸೋದ್ಯಮ ಸರ್ವರಿಗೆ'' ಹೀಗೆ ವರ್ಷದಿಂದ ವರ್ಷಕ್ಕೆ ಇದು ಭಿನ್ನವಿದೆ.

2019ರಲ್ಲಿ ಅಂದರೆ ಈ ವರ್ಷ ಭಾರತವನ್ನು ವಿಶ್ವ ಪ್ರವಾಸೋದ್ಯಮ ದಿನಕ್ಕೆ ಆತಿಥೇಯ ರಾಷ್ಟ್ರವನ್ನಾಗಿ ಮಾಡಲಾಗಿತ್ತು. ಇದರ ಧ್ಯೇಯ ವಾಕ್ಯ,``ಪ್ರವಾಸೋದ್ಯಮ ಮತ್ತು ಉದ್ಯೋಗ: ಸರ್ವರಿಗೂ ಒಂದು ಒಳ್ಳೆಯಭವಿಷ್ಯ.ಎನ್ನುವುದಾಗಿತ್ತು.