ಬಿಷ್ಟಪ್ಪಯ್ಯನವರ ಕಾಲ ಸುಮಾರು ಕ್ರಿ.ಶ 1600. ಇವರು ಮುಂಡರಗಿ ತಾಲ್ಲೋಕು ವಿಠಲಾಪುರದವರು. ಸಾಕ್ಷಾತ್ಹಂಪೆಯ ವಿರೂಪಾಕ್ಷನ ಅವತಾರ ಎನ್ನುವುದು ನಂಬಿಕೆ. ಹಂಪೆಯುಹಾಳು ಬಿದ್ದಾಗ ಅಲ್ಲಿನ ದೇವತೆಗಳು ತುಂಗಭದ್ರೆಯ ಜಲವನ್ನು ಹೊಕ್ಕಿದ್ದರು. ಬಿಷ್ಟಪ್ಪಯ್ಯನವರು ಆ
ದೇವತೆಗಳಿಗೆ ನೆಲೆಕಲ್ಪಿಸಿದರು. ಹಂಪೆಯ ವಿರೂಪಾಕ್ಷನ ಮುಂದಿನ ರಾಜ ಗೋಪುರವನ್ನುಇವರು ಕಟ್ಟಿಸಿದರು. ಇವರು ನಾಲ್ಕು ಅವತಾರವನ್ನು ಎತ್ತಿದರೆಂದೂ ಶಂಕರಲಿಂಗ ಭಗವಾನರೇ ನಾಲ್ಕನೇ ಅವತಾರವೆಂದೂ ನಂಬಿಕೆ ಇದೆ.