ಸಂಪದ್ಗೌರಿ ವ್ರತ

ಶ್ರಾವಣ ಮಾಸ ಶುಕ್ಲಪಕ್ಷದ ತೃತೀಯದಂದು ಸಂಪದ್ಗೌರೀ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ವ್ರತಾಚರಣೆಯಿಂದ ಸಕಲ ಇಷ್ಟಾರ್ಥಗಳನ್ನು ಈಡೇರಿವುವು ಎಂಬುದು ಭಕ್ತರ ನಂಬಿಕೆ.. ಪ್ರಾತಃ ಕಾಲದಲ್ಲಿ ಎದ್ದು ಮಂಗಳ ಸ್ನಾನವನ್ನಾಚರಸಿ ಶುಚಿರ್ಭೂತರಾಗಬೇಕು.. ಮಣ್ಣಿನ ಇಲ್ಲವೆ ತಾಮ್ರದ ಅಥವಾ ಬೆಳ್ಳಿಯ ತಂಬಿಗೆಯೋಂದರ ಹೊರಭಾಗದಲ್ಲಿ ಸರಿಯಾಗಿ ಐದು ಭಾಗ ಮಾಡಿ, ಮಧ್ಯಭಾಗದಲ್ಲಿ ಮಂಗಳಸೂತ್ರ ಬರೆದು ಕೆಳಗೆ ಲಕ್ಷ್ಮೀ-ನಾರಾಯಣ ಚಿತ್ರ, ಆನೆ, ಆಕಳು, ಚಕ್ರ-ಶಂಖ, ಗದ-ಪದ್ಮ ಚಿತ್ರಗಳನ್ನು ಕ್ರಮವಾಗಿ ಬರೆಯಬೇಕು.. ಸಂಪದ್ಗೌರಿ ಗಡಿಗೆ ಎಂದು ಕರೆಯಲ್ಪಡುವ ಈ ತಂಬಿಗೆಗೆ ಅಕ್ಕಿ, ಅರಿಷಿಣ, ಕುಂಕುಮ, ಖರ್ಜೂರ, ಬಟ್ಟಲು ಅಡಿಕೆ, ಅರಿಷಿಣ ಕೊಂಬುಗಳನ್ನು ಹಾಕಿ ಮುಚ್ಚಳದಿಂದ ಮುಚ್ಚಬೇಕು.. ಸೂಕ್ತ ಸ್ಥಳದಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಪದ್ಮ ಬರೆದು ಮಂಗಳ ಸೂತ್ರವನ್ನು ಕಟ್ಟಿ, ಶೃಂಗರಿಸಿದ ಗೌರಿಯನ್ನು ಸಂಕಲ್ಪ ಸಹಿತ ಸ್ಥಾಪಿಸಬೇಕು. ದೂಪ, ದೀಪ, ನೈವೇದ್ಯಗಳೇ ಮುಂತಾದ ಷೋಡಶೋಪಚಾರಗಳಿಂದ ದೇವಿಯನ್ನು ಅರ್ಚಿಸಬೇಕು.ಹೂರಣದಿಂದ ಮಾಡಿದ ದೀಪದ ಆರತಿಯನ್ನು ಮಾಡಿ, ಗೌರಿಗೆ ಉಡಿ ತುಂಬುವುದು ವಾಡಿಕೆ.ಸುಮಂಗಲಿಯರನ್ನು ಆಹ್ವಾನಿಸಿ, ಸತ್ಕರಿಸಿ, ಹೂರಣದ ದೀಪವನ್ನು ಪ್ರಸಾವನ್ನಾಗಿ ನೀಡಬೇಕು.