ಶ್ರೀ ವಿಧುಶೇಖರ ಭಾರತಿ ಎಂದು ಜನಪ್ರಿಯರಾಗಿರುವ'ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ' ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿಗಳು. 27ನೇ ಶುಕ್ರವಾರ, ಜನವರಿ, 2015 ರಂದು, ಸನ್ಯಾಸ ದೀಕ್ಷೆ ಅವರಿಗೆ ನೀಡಲಾಗಿದ್ದು, ಶ್ರೀ ವಿಧುಶೇಖರ ಭಾರತಿಯವರಿಗೆ 'ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ತಮ್ಮ ಶಿಷ್ಯನಿಗೆ ಮರು ನಾಮಕರಣ ಮಾಡಿ, 'ವಿಧುಶೇಖರ'ರನ್ನು ತಮ್ಮ 37ನೆಯ ಉತ್ತರಾಧಿಕಾರಿ ಎಂದು ಘೋಷಿಸಿದರು. ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ, 'ಕುಪ್ಪಾ ಶಿವ ಸುಬ್ರಹ್ಮಣ್ಯ ಅವಧಾನಿ', ಮತ್ತು 'ಸೀತಾ ನಾಗಲಕ್ಷ್ಮಿ' ದಂಪತಿಗಳ ಪುತ್ರನಾಗಿ ಜುಲೈ, 24, 1993 ರಂದು, ತಿರುಪತಿಯಲ್ಲಿ ಜನಿಸಿದರು. ಮೊದಲು, ಶರ್ಮಾ ಪರಿವಾರ ಸಿಕಂದರಾಬಾದಿನ 'ಸೈನಿಕ್ ಪುರಿ'ಯಲ್ಲಿ ವಾಸಿಸುತ್ತಿದ್ದರು. ನಂತರ 'ಎ.ಎಸ್.ರಾವ್' ನಗರಕ್ಕೆ ಹೋಗಿ
ನೆಲೆಸಿದರು. ಸಿಕಂದರಾಬಾದಿನ ಸೈನಿಕ್ ಪುರಿಯ 'ಭವಾನ್ಸ್ ಸ್ಕೂಲ್' ನಲ್ಲಿ ಎರಡನೆಯ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದರು. ಮನೆಯಲ್ಲಿಯೇ ತಂದೆಯವರ
ಬಳಿ ವೇದಾಧ್ಯಯನವನ್ನು ಅಭ್ಯಾಸಮಾಡಿದರು. ಅಜ್ಜ 'ಕುಪ್ಪಾ ರಾಮಗೋಪಾಲ ವಜ್ಪೇಯಾಜಿ' ಮತ್ತು ಅಜ್ಜಿ, 'ಕಲ್ಪಕಾಂಬ', ವೆಂಕಟೇಶ್ವರ ಶರ್ಮರಿಗೆ ವೇದ,ಉಪನಿಷತ್,ಮತ್ತು ಪುರಾಣಗಳ ಪಠನವಾಗುತ್ತಿತ್ತು.
ವೆಂಕಟೇಶ್ವರ ಶರ್ಮ, ೨೦೦೯ ರಲ್ಲಿ 'ಶೃಂಗೇರಿ ಮಠ'ಕ್ಕೆ ಸೇರಿದರು. 'ಕುಪ್ಪಾ ಶಿವ ಸುಬ್ರಹ್ಮಣ್ಯ ಅವಧಾನಿ'ಯವರಿಗೆ, ಇಬ್ಬರು ಮಕ್ಕಳು. ಹಿರಿಮಗ, 'ವೆಂಕಟ ಕೊಂಡಿನಿಯ',ಮುಂಬೈನ 'ಆರ್.ಐ.ಎಲ್.ಸಂಸ್ಥೆ' ಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.