ಸಂತ ನಾಮದೇವರು ಮಹಾರಾಷ್ಟ್ರದಲ್ಲಿ ಮೂಡಿ ಬಂದ ಪ್ರಮುಖ ಸಂತರಲ್ಲಿ ಪ್ರಮುಖರು. ಕ್ರಿ.ಶ 1270ರ ಅಕ್ಟೋಬರ್ 26ರಂದು ನಾರಸಿಯಲ್ಲಿ ಅವರು ಜನಿಸಿದರು. ತಂದೆ ಗಾಮಶೇಠ್ ಮತ್ತು ತಾಯಿ ಗೋನಾಯ್. ನಾಮದೇವರು ರಜೇಕರ್ ಅಥವಾ ಸಿಂಪಿ ಜಾತಿಗೆ ಸೇರಿದ್ದು ಅನೇಕ ಸಾಮಾಜಿಕ ಸಂಕಷ್ಟಗಳನ್ನು ಎದುರಿಸಿದರು. ಮಡದಿ ರಾಜಯ್ ಮತ್ತು ಮಗ ವಿಧಿ. ಪಂಡರಾಪುರದ ವಿಠಲ ಪಂಥವನ್ನು ಸೇರಿದ ನಾಮದೇವರು ವಾಕರಿ ಚಳುವಳಿಯನ್ನು ಬೆಳೆಸಿದರು ಲೀಲಾಚರಿತ ಮತ್ತು ಮಹಾನುಭವ ಎನ್ನುವ ಅವರ ಕುರಿತು ಜೀವನ ಚರಿತ್ರೆ ಎನ್ನ ಬಲ್ಲ ಎರಡು ಕೃತಿಗಳು ಬಂದಿವೆ. ನಾಮದೇವರ ಭಜನ್ ಮತ್ತು ಅಭಂಗ್‍ಗಳು ಇಂದಿಗೂ ಸಾಕಷ್ಟು ಜನಪ್ರಿಯವಾಗಿವೆ. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದ ಅವರು ಸಿಖ್ ಧರ್ಮದಲ್ಲಿ ಕೂಡ ಜಾಗೃತಿ ಉಂಟು ಮಾಡಿದವರು. ಹೀಗಾಗಿ ಸಿಖ್ಖರಿಗೂ ಅವರು ಪರಮಪೂಜ್ಯರು. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‍ನಲ್ಲಿ ಕೂಡ ಅವರ ಕುರಿತ ಉಲ್ಲೇಖಿವಿದೆ. ಸಿಖ್ ಧರ್ಮದವರು ಅವರ ಸಮಾದಿ ಪಂಜಾಬಿನ ಗುಮಾನ್‍ನಲ್ಲಿ ಇದೆ ಎಂದು ನಂಬುತ್ತಾರೆ. ವಾಕರಿ ಪಂಥದವರು ಅದು ಮಹಾರಾಷ್ಟ್ರದಲ್ಲಿಯೇ ಇದೆ ಎಂದು ನಂಬುತ್ತಾರೆ. ಅವರು 1350ರ ಜುಲೈ 3ರಂದು ಸಮಾಧಿಸ್ಥರಾದರು.