ತುಳಸಿ ದಾಸರ ಆರಾಧನೆ

ತುಳಸಿದಾಸ್ (1532-1623) ಭಕ್ತಿ ಪಂಥದ ಪ್ರಮುಖ ಬರಹಗಾರ. ತತ್ವಜ್ಞಾನಿ ವಾಗ್ಗೇಯಕಾರರುರಾಮಚರಿತಮಾನಸ ಎಂಬ ಕಾವ್ಯದ ಕತೃ .ತಾಯಿ ಹುಲಸಿ  ಹಾಗೂ ತಂದೆ ಆತ್ಮಾರಾಮ್ ದುಬೆ. ತುಳಸಿ ದಾಸರು  ಜನಿಸಿದ್ದು ಶ್ರಾವಣ ಶುಕ್ಲ ಸಪ್ತಮಿ, ವಿಕ್ರಮ ಸಂವತ್ಸರದಲ್ಲಿ  (ಕ್ರಿ.ಶ. 1532)ರಲ್ಲಿ  ಜನಿಸಿದರು. ಇವರ ರಾಮಚರಿತಮಾನಸವು ವಾಲ್ಮೀಕಿ ರಾಮಾಯಣದ ನೇರ  ಅನುವಾದವಲ್ಲದಿದ್ದರೂ ಅದನ್ನು ಅನುಸರಿಸಿದಂತಹ ಕೃತಿ. ಇದು ಪದ್ಯದ ರೂಪದಲ್ಲಿ ಚೌಪಾಯಿ ಎಂದು ಕರೆಯಲ್ಪಡುವ ದ್ವಿಪದಿಗಳನ್ನು ಹೊಂದಿದೆ.ಉತ್ತರ ಭಾರತದ ಬಹುತೇಕ ಮನೆಗಳಲ್ಲಿ ನಿತ್ಯವೂ ಇದರ ಪಾರಾಯಣ ನಡೆಯುತ್ತಿದ್ದು ಅದರ ಪದ್ಯಗಳು ನುಡಿಮುತ್ತುಗಳಾಗಿ   ಪ್ರಸಿದ್ಧವಾಗಿವೆ.

ತುಲಸಿದಾಸರು ನರಹರಿ ದಾಸರ ಶಿಷ್ಯರಾಗಿದ್ದು ಅವರಿಂದ ಕೃತಿ ರಚನೆಗೆ  ಪ್ರೇರಣೆಯನ್ನು ಪಡೆದರು. ತುಲಸಿದಾಸರ ರಾಮಚರಿತಮಾನಸ ಹಾಗೂ ವಾಲ್ಮೀಕಿ ರಾಮಾಯಣದ ನಡುವೆ ಅನೇಕ ಭಿನ್ನತೆಗಳಿವೆ. ತುಲಸಿದಾಸರ ಕೃತಿಯಲ್ಲಿ ದೀರ್ಘ ಹಾಗೂ ಹೆಚ್ಚು ಮಾನಸಿಕತೆ, ಜೊತೆಗೆ ತೀವ್ರ ಪಾತ್ರಚಿತ್ರಣ ಮತ್ತು ಅದ್ಭುತ ಉಪಮಾಲಂಕಾರಗಳನ್ನು ಕಾಣಬಹುದು.ರಾಮಚರಿತಮಾನಸ ವಲ್ಲದೆ, ತುಲಸಿದಾಸರು ಐದು ದೀರ್ಘ ಮತ್ತು ಆರು ಲಘುವಾದ ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಬಹುತೇಕ ಕೃತಿಗಳು ರಾಮನ ವಿಚಾರ, ಆತನ ಕಾರ್ಯಗಳು ಹಾಗೂ ಅವನೆಡೆಗಿನ ಭಕ್ತಿಯ ಕುರಿತಾಗಿವೆ.