ವಿಶ್ವಸಂಸ್ಥೆಯು ತನ್ನ 42/112 ನೇ ನಿರ್ಣಯದ
ಅನ್ವಯ 1987ರ ಡಿಸಂಬರ್ ನಲ್ಲಿ ಮಾದಕ ಸೇವನೆಯನ್ನು
ಜಾಗತಿಕ ಪಿಡುಗು ಎಂದು ಕರೆದು ಜೂನ್ 25ರಂದು ಅಂತರ ರಾಷ್ಟ್ರೀಯ
ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿತು. ಪ್ರತಿ ವರ್ಷವೂ
ಏರುತ್ತಿರುವ ಮಾದಕ ವಸ್ತು ಸೇವನೆಯ ಅಂಕಿ-ಅಂಶಗಳನ್ನು ಗಮನಿಸಿ
ವರ್ಷದ ವಿಷಯವನ್ನು ನಿರ್ಧರಿಸಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ಈ ದಿವಸದ ಮೂಲಕ ಪ್ರಯತ್ನವನ್ನು ಮಾಡಲಾಗುತ್ತದೆ.