ಇದು ಮಾಧ್ವ ಆಚರಣೆ. ಚಾತುಮಾರ್ಸದ ಸಂದರ್ಭದಲ್ಲಿ ದಂಪತಿಗಳು ಆಚರಿಸುವ ವ್ರತ ಇದಾಗಿದೆ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಇದು ನಿವಾರಿಸುತ್ತದೆ. ಚಂದ್ರೋದಯ ಕಾಲದಲ್ಲಿ ಆಷಾಢ ಬಹುಳ ಪಾಡ್ಯದ ತಿಥಿ ಒದಗುವ ದಿನದಂದು ಷೋಡಷೋಪಚಾರಗಳಲ್ಲಿ ಒಂದಾದ ವಿಷ್ಣು ಶಯನೋತ್ಸವವನ್ನು ಅವರು ಆಚರಿಸುತ್ತಾರೆ.