ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಪುರಾಣ ಹಿನ್ನೆಲೆ

  • ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.
  • ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆಉಡುಪಿಯಲ್ಲಿ  ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
  • ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು.
  • ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ]]) ಯಾದವ ಕುಲದ ರಾಜಧಾನಿಯಾಗಿತ್ತು.
  • ಕಂಸ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣ ಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.
  • ಇದನ್ನು ಕೇಳಿದ ಕಂಸನು ದೇವಕಿಯನ್ನು ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು.
  • ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

ಸೌರ/ಚಾಂದ್ರ ಶ್ರೀರಾಮನವಮಿ

ಅನುಕರಣೀಯ ಆದರ್ಶಗಳ ಪ್ರತೀಕ - ಶ್ರೀರಾಮ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನ ಶ್ರೀರಾಮಚಂದ್ರ ದೇವರ ಜನುಮದಿನ. ಹಾಗಾಗಿ ಹಿಂದೂಗಳು ಈ ದಿನವನ್ನು ವಿಶೇಷ ಶ್ರದ್ಧಾ ಭಕ್ತಿಯಿಂದ ದೇಶದಾದ್ಯಂತ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ದಿನವನ್ನು ಕೆಲವೆಡೆ ರಾಮ ಸೀತೆಯರ ಕಲ್ಯಾಣ ದಿನವನ್ನಾಗಿಯೂ ಆಚರಿಸುವುದುಂಟು.

ಶ್ರದ್ಧೆ ಭಕ್ತಿಗಳ ಸಂಗಮ - ರಾಮೋತ್ಸವ

ಶ್ರೀ ರಾಮನನ್ನು ಮನೆ ದೇವರನ್ನಾಗಿ ಆರಾಧಿಸುವವರ ಪಾಲಿಗೆ ಈ ಹಬ್ಬ ರಾಮೋತ್ಸವವಾಗಿ ಬಹಳ ವಿಶೇಷವಾಗಿರುತ್ತದೆ. ಪಾಡ್ಯ ದಿನದಿಂದ ನವಮಿಯವರೆಗೆ ಸತತ ಒಂಬತ್ತು ದಿನಗಳ ಕಾಲ ಶ್ರೀರಾಮನನ್ನು ಪೂಜಿಸುತ್ತಾ ಪಾರಾಯಣ ಮಾಡುತ್ತಾ ಒಂಬತ್ತನೇ ದಿನ ಪ್ರಧಾನ ಪೂಜೆಯೊಂದಿಗೆ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಹಾಗೆ ನೋಡಿದರೆ ರಾಮ ನವಮಿಯಲ್ಲಿ ಭಕ್ತರ ಶ್ರದ್ಧೆ ಭಕ್ತಿಗಳೇ ಪ್ರಧಾನ. ಆಚರಣೆಯಲ್ಲಿ ಇದು ಸರಳವಾದ ಹಬ್ಬ ಎನಿಸಿಕೊಂಡಿದೆ. ವಿಶೇಷವಾಗಿ ರಾಮನ ಜನ್ಮ ಸ್ಥಳವಾದ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಕೆಲವೆಡೆಗಳಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಆಚರಣೆ

ರಾಮದೇವರು ಸೂರ್ಯ ವಂಶದ ರಾಜನೆಂಬ ನಂಬಿಕೆ ಇದೆ. ಹಾಗಾಗಿ ರಾಮ ನವಮಿಯಂದು ಮೊದಲನೆಯದಾಗಿ ಸೂರ್ಯದೇವನಿಗೆ ಪ್ರಾರ್ಥನೆಯನ್ನು ಮಾಡುವ ಮೂಲಕ ಆಚರಣೆಗಳನ್ನು ಆರಂಭಿಸಲಾಗುತ್ತದೆ. ಹನುಮಂತ , ಸಪತ್ನಿ, ಸಹೋದರ ಸಹಿತ ಶ್ರೀರಾಮಚಂದ್ರನಿಗೆ ನೈವೇದ್ಯದ ಜೊತೆಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಹೆಚ್ಚಿನೆಲ್ಲೆಡೆ ಪಾನಕ ಮತ್ತು ಕೋಸಂಬರಿಯ ನೈವೇದ್ಯವನ್ನು ಮಾಡಿ ಅದನ್ನೇ ಪ್ರಸಾದದ ರೂಪದಲ್ಲಿ ಸೇವಿಸುವುದು ವಾಡಿಕೆ. ಕೋಸಂಬರಿ ಹಾಗೂ ಬೆಲ್ಲ, ಬೇಲದ ಹಣ್ಣು, ಲಿಂಬೆ, ಕಾಳು ಮೆಣಸು, ಪುನರ್ಪುಳಿ ಇತ್ಯಾದಿಗಳಿಂದ ತಯಾರಿಸಿದ ಪಾನಕ ಆರೋಗ್ಯದಾಯಕವೂ ಆಗಿದೆ.

ನಾಮ ಸಂಕೀರ್ತನೆ

ರಾಮ ನವಮಿಯಂದು ರಾಮ ಜಪ, ರಾಮ ಧ್ಯಾನ, ರಾಮನ ಭಜನೆ, ಹಾಡು, ಕುಣಿತ ಎಲ್ಲವೂ ಇರುತ್ತದೆ. ಈ ದಿನ ಮಂದಿರಗಳಲ್ಲಿ ವಿಶೇಷ ಭಕ್ತಿ ಗಾಯನ ಕಾರ್ಯಕ್ರಮಗಳನ್ನು, ಸಂಗೀತ ಕಚೇರಿಗಳನ್ನು, ರಾಮ ನಾಮ ಸಂಕೀರ್ತನೆಗಳನ್ನು ,ಮೆರವಣಿಗೆ, ಉತ್ಸವಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕೂಡ ವಾರಗಟ್ಟಲೆ ಅಲ್ಲಲ್ಲಿ ನಡೆಯುತ್ತಿರುತ್ತವೆ.

ಈ ಹಬ್ಬದ ಇನ್ನೊಂದು ವಿಶೇಷತೆಯೆಂದರೆ ರಾಮ ನಾಮವನ್ನು ಪುಸ್ತಕಗಳಲ್ಲಿ ಬರೆಯುವುದು. ರಾಮ ನಾಮವನ್ನು ತಾರಕ ನಾಮ ಎಂದು ಕೂಡ ಕರೆಯಲಾಗುತ್ತದೆ. ತಾರಕ ಎಂದರೆ ಕಾಪಾಡುವವನು 'ರಕ್ಷಕನು' ಎನ್ನುವ ಅರ್ಥವಿದೆ. ರಾಮ ಧ್ಯಾನದ ಪ್ರತೀಕವಾಗಿಯೇ ರಾಮನಾಮವನ್ನು ಬರೆಯಲಾಗುತ್ತದೆ. ಇದು ಏಕಾಗ್ರತೆಯನ್ನು ಮೂಡಿಸಲು ನೆರವಾಗುತ್ತದೆ ಎಂಬ ನಂಬಿಕೆಯೂ ಇದೆ.

ಮೆರವಣಿಗೆ

ಈ ದಿನ ಹಮ್ಮಿಕೊಳ್ಳುವ ಮೆರವಣಿಗೆಯಲ್ಲಿ ರಾಮನ ಆದರ್ಶಗಳನ್ನು ರಾಮನ ಕಾಲದ ಆಡಳಿತದ ಸೊಬಗನ್ನು ಜನರಿಗೆ ತಿಳಿಸುವ ಆಶಯವಿರುತ್ತದೆ. ಶ್ರೀರಾಮ ಅಷ್ಟೋತ್ತರಗಳು, ರಾಮ ರಕ್ಷಾ ಸ್ತೋತ್ರ, ರಾಮಾಷ್ಟಕ ಸೇರಿದಂತೆ ದಿನವಿಡಿ ಶ್ರೀರಾಮನ ಸ್ಮರಣೆಯೊಂದಿಗೆ ವ್ರತಾಚರಣೆಯನ್ನು ಮಾಡಲಾಗುತ್ತದೆ. ಇಂತಹ ವ್ರತಾಚರಣೆ ನಮ್ಮಲ್ಲಿನ ದುಷ್ಟ ಆಲೋಚನೆಗಳನ್ನು ತೊಡೆದು ಹಾಕಿ ಉತ್ತಮ ವಿಚಾರಗಳನ್ನು ಉದ್ದೀಪನಗೊಳಿಸಲು ನೆರವು ನೀಡುತ್ತದೆ.

ಒಟ್ಟಿನಲ್ಲಿ ರಾಮ ನವಮಿಯ ಆಚರಣೆ ಎನ್ನುವಂತಾದ್ದು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಿರದೆ ಶ್ರೀರಾಮನ ಅನುಕರಣೀಯ ಆದರ್ಶಗಳನ್ನು ನಮ್ಮ ಜೀವನದಲ್ಲೂ ಆಳವಡಿಸಿಕೊಳ್ಳುವತ್ತ ನಮ್ಮನ್ನು ನಿರಂತರವಾಗಿ ಪ್ರೇರೇಪಿಸಲಿ ಎನ್ನುವುದು ಹಬ್ಬದ ಆಶಯ.

ರಾಮಾನುಜಾಚಾರ್ಯ ಜಯಂತಿ

ಜ್ಞಾನ ಭಕ್ತಿ ಸಮನ್ವಯದ ವೇದಾಂತಿ

ಇಂದು ರಾಮಾನುಜ ಜಯಂತಿ. ರಾಮಾನುಜರು  ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು ಮತ್ತು ಅಲ್ಲಿ ಜಾತಿ, ಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಂದಾಗಿ ಕಂಡರು. ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು.

ಹನ್ನೊಂದನೇ ಶತಮಾನದಲ್ಲಿ ಜನಿಸಿದ ರಾಮಾನುಜಾಚಾರ್ಯರು ಭಾರತೀಯ (ಹಿಂದೂ) ತತ್ತ್ವಜ್ಞಾನಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು. ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಪ್ರವರ್ತಕರಾಗಿ ಗುರುತಿಸಲ್ಪಡುವ ರಾಮಾನುಜಾಚಾರ್ಯರು, ಭಕ್ತಿ ಚಳವಳಿಗೆ ಪ್ರೇರೇಪಣೆ ನೀಡಿದ ‘ವಿಶಿಷ್ಟಾದ್ವೈತ’ವನ್ನು ಪ್ರಚುರಪಡಿಸಿದರು. ರಾಮಾನುಜಾಚಾರ್ಯರ ಜೀವನವೂ ಬಹಳ ವಿಶಿಷ್ಟ. ಶ್ರೀರಂಗಂನಿಂದ ಮಧುರೈಗೆ ಬಂದ ಅವರನ್ನು ಕೊನೆಗೂ ಗೋಷ್ಟಿಪೂರ್ಣರು ಅವರನ್ನು ಶಿಷ್ಯರನ್ನಾಗಿ ಒಪ್ಪಿಕೊಂಡು, ‘ಅಷ್ಟಾಕ್ಷರಿ ಮಂತ್ರ’ ದೀಕ್ಷೆ ನಿಡಿದರು.

ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು. ಮತ್ತು ಅಲ್ಲಿ ಜಾತಿ ಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರು. ರಾಮಾನುಜರ ಈ ನಡೆ ಅತ್ಯಂತ ಕ್ರಾಂತಿಕಾರಕ ನಡೆ. ರಾಮಾನುಜರು ಭಕ್ತಿಯ ಪರಾಕಾಷ್ಠೆಯ ಆ ಔನ್ನತ್ಯವನ್ನು ತಲುಪಿದ್ದರು. ಸದಾ ಒಂದು ಊರು ಬಿಟ್ಟು ಮತ್ತೊಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ – ಹೀಗೆ ಸಂಚರಿಸುತ್ತಲೇ ಇರುತ್ತಿದ್ದರು.

ಸಂಸಾರವನ್ನು ಬಹಳ ಹಿಂದೆಯೇ ತೊರಿದ್ದ ರಾಮಾನುಜರು ಗುರು ಮಹಾಪೂರ್ಣರಿಂದ ತಮ್ಮ ಮೂವತ್ತನೇ ವಯಸ್ಸಿನಲ್ಲಿ ದೀಕ್ಷೆ ಪಡೆದರು. ನಮ್ಮ ಕನ್ನಡ ನಾಡಿನ ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯಾಗಿ ‘ರಾಮಪ್ರಿಯ’ನನ್ನೂ ತಂದು ವೈರಮುಡಿ ಉತ್ಸವಕ್ಕೆ ಚಾಲನೆ ನೀಡಿದರು. ಹೊಯ್ಸಳ ದೊರೆ ಬಿಟ್ಟಿದೇವನಿಗೆ ಶ್ರೀವೈಷ್ಣವ ದೀಕ್ಷೆಯನ್ನಿತ್ತು, ಆತನನ್ನು ‘ವಿಷ್ಣುವರ್ಧನ’ ಎಂದು ಕರೆದರು. ಅವನಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿದರು. ಹೀಗೆ ರಾಮಾನುಜರು ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದಲ್ಲೆಲ್ಲಾ ಸಂಚರಿಸಿದರು.

ಶ್ರೀ ರಾಮಾನುಜಾಚಾರ್ಯರ ವೇದಗಳ ಅರ್ಥ ಮತ್ತು ಸಾರವನ್ನೊಳಗೊಂಡ ವೇದಾರ್ಥ ಸಂಗ್ರಹ,  ಭಗವದ್ಗೀತೆಯ ಟೀಕೆ ಮತ್ತು ವ್ಯಾಖ್ಯಾನವನ್ನೊಳಗೊಂಡ ‘ಭಗವದ್ಗೀತಾ ಭಾಷ್ಯ’ ಹಾಗೂ ಬ್ರಹ್ಮ ಸೂತ್ರಗಳಿಗೆ ವ್ಯಾಖ್ಯಾನವಾಗಿರುವ ‘ಶ್ರೀ ಭಾಷ್ಯ’ –   ಇವು ಹೆಚ್ಚು ಜನಪ್ರಿಯವಾಗಿವೆ.

ವಿಶಿಷ್ಟಾದ್ವೈತ ಮತ್ತು ರಾಮಾನುಜರ ಉಪದೇಶ

“ಈಶ್ವರನದು ಶುದ್ಧ ಸತ್ವ ಗುಣ. ಪ್ರಳಯದಲ್ಲಿ ಜೀವ, ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಅವನದು ಶುದ್ಧ ಸತ್ವಗುಣ. ಪ್ರಳಯ ಕಾಲದಲ್ಲಿ ಜೀವ -ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಜಗತ್ತು ವ್ಯಕ್ತವಾದಾಗ ಕರ್ಮಾನುಸಾರವಾಗಿ ದೇಹಗಳು ಒದಗುತ್ತವೆ” ಎನ್ನುವುದು ವಿಶಿಷ್ಟಾದ್ವೈತದ ಪ್ರತಿಪಾದನೆ. “ಶ್ರೀ ಲಕ್ಷ್ಮೀನಾರಾಯಣನೇ ಪರತತ್ತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನೂ ಪಡೆಯಲು ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲಿದೆ ಬೇರೆ ಗತಿ ಇಲ್ಲ” – ಇದು ರಾಮಾನುಜರ ಉಪದೇಶ ಸಾರ.