ಪ್ರತಿ ವರ್ಷ
ಮಕರ ಸಂಕ್ರಮಣದ ಪುಣ್ಯ ಕಾಲದಲ್ಲಿ ಮುರುಡೇಶ್ವರ ದೇವರ ಮಹಾ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ
ಸಂಜೆ ಮುರುಡೇಶ್ವರ ದೇವರ ಮಹಾರಥೋತ್ಸವ ನಡೆಯುವುದು.
ರಥೋತ್ಸವದ ಅಂಗವಾಗಿ
ಬೆಳಗ್ಗೆ ಕಲಶ ಸ್ಥಾಪನೆ, ಅಧಿವಾಸ ಹವನ, ರಥಾಧಿವಾಸ ಹವನ ನಂತರ ದೇವರ ರಥಾರೋಹಣ ನಡೆಯುವುದು.
ನಂತರ ಊರಿನ ಮಹಾಜನತೆ
ಹಾಗೂ ಭಕ್ತರು ರಥ ಕಾಣಿಕೆ ಸಲ್ಲಿಸುವರು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮುರುಡೇಶ್ವರ ದೇವರ
ಮಹಾ ರಥೋತ್ಸವ ನಡೆಯುವುದು. ಊರಿನ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು.
ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ಅಂಕುರಾರ್ಪಣ ನಡೆಯುವ ಮೂಲಕ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಮುಕ್ತಾಯಗೊಳ್ಳುವುದು.