ಮುಕ್ಕೋಟಿ ದ್ವಾದಶಿ

ಮುಕ್ಕೋಟಿ ದ್ವಾದಶಿ

ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ.  ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.

ವಿಷ್ಣುವಿನ ದರ್ಶನ

ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ  ಮಾಡುವುದು ಶ್ರೇಷ್ಠ.  ಅವುಗಳು – ತಿರುಮಲ, ಶ್ರೀಮೂಷ್ಣಂ, ತೋತಾದ್ರಿ,  ಶ್ರೀರಂಗ, ಇತ್ಯಾದಿ.    ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನ ಗಳಲ್ಲಿ ಕೂಡ ಮಾಡಬಹುದು.

ವೈಕುಂಠ ಏಕಾದಶಿ ಉಪವಾಸ

ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.  ಬೇರೆ ಕಾರಣಗಳಿಂದ ಉಪವಾಸ ಮಾಡಲಾಗದವರು ಹಣ್ಣೂ ಸಜ್ಜಿಗೆ  ಮುಂತಾದ ಉಪ್ಪು ರಹಿತ ಪದಾರ್ಥ  ತಿನ್ನಬಾರದು.

ಏಕಾದಶಿಯಂದು ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ.

ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲಿ ಕೆಲವರು ಸ್ವೀಕರಿಸುವುದಿಲ್ಲ.

ವೈಕುಂಠ ಏಕಾದಶಿಯ ಉಪವಾಸದ ಫಲ

ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು ಎನ್ನುತ್ತಾರೆ.

ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರು

ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.

ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ ಎಂಬ ನಂಬಿಕೆ ಇದೆ.

ಏಕಾದಶಿಯ ಮರುದಿನದಂದು ಸೂರ್ಯೋದಕ್ಕೆ ಪಾರಣೆ (ಊಟ) ಮುಗಿಸಿರಬೇಕು. ಅಂದರೆ ಬೆಳಗ್ಗೆ ಎಂಟು ಗಂಟೆಯೊಳಗೆ ಊಟ ಮಾಡಿ ಮುಗಿಸಿರಬೇಕು. ಈ ರೀತಿ ಆಚರಣೆಯಿಂದ ಮೋಕ್ಷ ಸಿಗುತ್ತದೆ. ಜತೆಗೆ ಅಂದು ದೇವರ ಸ್ಮರಣೆ ಎಷ್ಟು ಹೆಚ್ಚು ಮಾಡಿದರೆ ಅಷ್ಟು ಶುಭ ಫಲ. ಇದರಿಂದ ಮನೆಯಲ್ಲಿನ ಅಶಾಂತಿ ನಿವಾರಣೆ ಆಗುತ್ತದೆ. ಸಂಪತ್ತು ಹಾಗೂ ಸಂತಾನ ಅಪೇಕ್ಷಿತರು ತಮ್ಮ ಮನಸಿನ ಬಯಕೆಯನ್ನು ಬೇಡಿಕೊಂಡರೆ, ಆ ಭಗವಂತ ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ.

ದಾನ- ಧರ್ಮ

ಅಂದು ಒಬ್ಬ ಬ್ರಾಹ್ಮಣ ದಂಪತಿಗೆ ಊಟ ಹಾಕಿದರೂ ಒಂದು ಲಕ್ಷ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿದ ಫಲ ದೊರಕುತ್ತದೆ. ಧನುರ್ಮಾಸದಲ್ಲಿ ಹುಗ್ಗಿಯನ್ನು ದೇವರಿಗೆ ನೈವೇದ್ಯ ಮಾಡುವುದು ಬಹಳ ಶ್ರೇಷ್ಠ. ಅದೇ ರೀತಿ ಗೋದಾನ ಮಾಡಬೇಕು ಅಂದುಕೊಂಡವರಿಗೆ ಇದು ಒಳ್ಳೆ ಕಾಲ.