ಅಂತಾರಾಷ್ಟ್ರೀಯ ಪುರುಷರ ದಿನ

ಮಹತ್ವ

ನವೆಂಬರ್ 19, ಇದು ವಿಶ್ವದ ಪುರುಷರ ಸಂಭ್ರಮದ ದಿನ. ಯಾಕೆಂದರೆ, ಈ ದಿನವನ್ನು ಅಂತಾರಾಷ್ಟ್ರೀಯ ಪುರುಷರ ದಿನ ಎಂದು ಆಚರಿಸಲಾಗುತ್ತದೆ. ಯುವಕರು, ಹಿರಿಯರು ರಾಷ್ಟ್ರ, ಸಮಾಜ, ಕುಟುಂಬ ಹೀಗೆ ಜೀವನದ ಪ್ರತಿಯೊಂದು ಸ್ತರದಲ್ಲೂ ಮಾಡಿರುವ ಸಾಧನೆ, ಕೊಟ್ಟಿರುವ ಉತ್ತಮ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಪುರುಷರ ದಿನವನ್ನಾಗಿ ಆಚರಿಸಲಾಗುತ್ತದೆ. ಪುರುಷರು ವಹಿಸುವ ಪ್ರಮುಖ ಪಾತ್ರಗಳನ್ನು, ನಿರ್ವಹಿಸುವ ಜವಾಬ್ದಾರಿಯನ್ನು, ತೋರಿಸುವ ಅಕ್ಕರೆಯನ್ನು ನೆನಪಿಸಿಕೊಳ್ಳುವ ದಿನ ಕೂಡಾ ಇದಾಗಿದೆ.

ಅನುಮೋದನೆ ಮತ್ತು ಆಚರಣೆ

ಅಂತಾರಾಷ್ಟ್ರೀಯ ಪುರುಷರ ದಿನವನ್ನು 1992ರ ಫೆಬ್ರವರಿ 7ರಂದು ಥಾಮಸ್ ಓಸ್ಟರ್ ಉದ್ಘಾಟಿಸಿದರು. ಓಸ್ಟರ್ ಅವರ ಈ ಪ್ರಯತ್ನದ ಜೊತೆಗೆ ಪುರುಷರ ಕೊಡುಗೆಗಳನ್ನು ಆಚರಿಸುವ ಅನೇಕ ಪ್ರಯತ್ನಗಳು ನಡೆದವು. ಇದಾದ ಬಳಿಕ ಬಳಿಕ ನವೆಂಬರ್ 19ರಂದು ಪುರುಷರ ದಿನವನ್ನು ಆಚರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. 1999 ರಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ನವೆಂಬರ್ 19ರಂದು ಈ ದಿನ ಆಚರಣೆ ನಡೆಯಿತು. ಇದಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಬೇರೆ ಬೇರೆ ದೇಶಗಳು ಈ ದಿನವನ್ನೇ ಪುರುಷರ ದಿನವನ್ನಾಗಿ ಆಚರಿಸಲು ಆರಂಭಿಸಿದವು. ಅಂದಿನಿಂದ ಇಂದಿನ ತನಕ ಈ ದಿನ ಆಚರಣೆ ನಡೆಯುತ್ತಿದೆ. ಪುರುಷರು ಮತ್ತು ಅವರ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸುವುದು ಹಾಗೂ ಜಾಗೃತಿ ಮೂಡಿಸುವುದು, ಸುರಕ್ಷಿತ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವುದು ಹೀಗೆ ಹಲವು ಧ್ಯೇಯೋದ್ದೇಶದಿಂದ ಈ ದಿನದ ಆಚರಣೆ ಆರಂಭವಾಗಿತ್ತು.

ಅಂತಾರಾಷ್ಟ್ರೀಯ ಪುರುಷರ ದಿನವನ್ನು ವಿವಿಧ ಎಂಬ ಧ್ಯೇಯವಾಕ್ಯಗಳೊಂದಿಗೆ ಆಚರಿಸಲಾಗುತ್ತದೆ.