ವೈಕುಂಠ ಚತುರ್ದಶಿ

ವೈಕುಂಠ ಚತುರ್ದಶಿಯು ಹಿಂದೂ ಪವಿತ್ರ ದಿನವಾಗಿದ್ದು ಇದು ಕಾರ್ತಿಕ ಮಾಸದ (ನವೆಂಬರ್-ಡಿಸೆಂಬರ್) ಚಾಂದ್ರಮಾನ ದಿನ (ಶುಕ್ಲ ಪಕ್ಷ) ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನವು ವಿಷ್ಣು ಮತ್ತು ಶಿವನಿಗೆ ಪವಿತ್ರವಾಗಿದೆ. ವಾರಣಾಸಿ, ಹೃಷಿಕೇಶ, ಗಯಾ ಮತ್ತು ಮಹಾರಾಷ್ಟ್ರದ ವಿವಿಧ ದೇವಾಲಯಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಪೂಜಿಸಲಾಗುತ್ತದೆ.

ಈ ಸಂದರ್ಭದಲ್ಲಿ ಶಿವಾಜಿ ಮತ್ತು ಅವರ ತಾಯಿ ಜೀಜಾಬಾಯಿ ಅವರ ಸಂಪ್ರದಾಯದಂತೆ ಮಹಾರಾಷ್ಟ್ರದಲ್ಲಿ ವೈಕುಂಠ ಚತುರ್ದಶಿಯ ಪವಿತ್ರ ದಿನವನ್ನು ಮರಾಠರು ಆಚರಿಸುತ್ತಾರೆ.

ಪುರಾಣ

ಶಿವ ಪುರಾಣದ ಪ್ರಕಾರ, ವೈಕುಂಠದ ಅಧಿಪತಿಯಾದ ವಿಷ್ಣುವು ತನ್ನ ವಾಸವನ್ನು ತೊರೆದು ಈ ದಿನದಂದು ಶಿವನನ್ನು ಪೂಜಿಸಲು ವಾರಣಾಸಿಗೆ ಹೋದನು. ಒಂದು ಸಾವಿರ ಕಮಲಗಳಿಂದ ಶಿವನನ್ನು ಪೂಜಿಸಲು ಪ್ರತಿಜ್ಞೆ ಮಾಡಿದನು. ಶಿವನ ಮಹಿಮೆಯನ್ನು ವೈಭವೀಕರಿಸುವ ಭಗವಾನ್ ವಿಷ್ಣುವು ಕೊನೆಯ ಅಥವಾ ಸಾವಿರದ 'ಕಮಲ' ಕಾಣೆಯಾಗಿರುವುದನ್ನು ಕಂಡುಕೊಂಡನು.

ವಿಷ್ಣುವಿನ ಕಣ್ಣುಗಳನ್ನು ತಾವರೆಗೆ ಹೋಲಿಸಲಾಗುತ್ತದೆ. ಅವುಗಳಲ್ಲಿ ಒಂದನ್ನು ಕಿತ್ತು ಶಿವನಿಗೆ ಅರ್ಪಿಸುತ್ತಾನೆ. ಶಿವನು ವಿಷ್ಣುವಿನ ಕಣ್ಣುಗಳನ್ನು ಪುನಃ ಸ್ಥಾಪಿಸಿ, ಸುದರ್ಶನ ಚಕ್ರ ಮತ್ತು ಪವಿತ್ರ ಆಯುಧವನ್ನು ಬಹುಮಾನವಾಗಿ ನೀಡಿದನು.

ಪೂಜಾ ವಿಧಿಗಳು

ವಿಷ್ಣುವಿನ ಭಕ್ತರು ವಿಷ್ಣುಸಹಸ್ರನಾಮವನ್ನು ಪಠಿಸುವಾಗ ಒಂದು ಸಾವಿರ ಕಮಲಗಳನ್ನು ಅರ್ಪಿಸುತ್ತಾರೆ(ವಿಷ್ಣುವಿನ ಸಾವಿರ ನಾಮಗಳು). ವಿಷ್ಣುವಿನ ಹೆಜ್ಜೆ ಗುರುತುಗಳನ್ನು ಹೊಂದಿರುವ ವಿಷ್ಣುಪಾದ ದೇವಾಲಯವು ಈ ಅವಧಿಯಲ್ಲಿ ಪ್ರಮುಖ ಉತ್ಸವವನ್ನು ಆಚರಿಸುತ್ತದೆ. ಈ ಹಬ್ಬವನ್ನು ವಿಷ್ಣು ಭಕ್ತರಿಂದ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಹೃಷಿಕೇಶದಲ್ಲಿ ಈ ದಿನವನ್ನು ವಿಷ್ಣುವು ಗಾಢನಿದ್ರೆಯಿಂದ ಎಚ್ಚರಗೊಂಡ ದೀಪ ದಾನ ಮಹೋತ್ಸವವೆಂದು ಆಚರಿಸಲಾಗುತ್ತದೆ. ಪರಿಸರ ಜಾಗೃತಿಯ ಸಂಕೇತವಾಗಿ, ದೀಪಗಳನ್ನು ಹಿಟ್ಟಿನಿಂದ (ನೀರಿನಲ್ಲಿ ಕರಗುವ) ಬದಲಿಗೆ, ಮಣ್ಣಿನ ದೀಪಗಳನ್ನು ತಯಾರಿಸಲಾಗುತ್ತದೆ. ಸಂಜೆ ಪವಿತ್ರ ಗಂಗಾ ನದಿಯಲ್ಲಿ ದೀಪಗಳನ್ನು ತೇಲಿಸಲಾಗುತ್ತದೆ. ಇದರ ಜೊತೆಗೆ ಹಲವಾರು ಸಾಂಸ್ಕೃತಿಕ ಉತ್ಸವಗಳು ಜರುಗುತ್ತವೆ.

ಈ ಸಂದರ್ಭದಲ್ಲಿ, ವಾರಣಾಸಿಯ ಪ್ರಮುಖ ಶಿವ ದೇವಾಲಯವಾದ ಕಾಶಿ ವಿಶ್ವನಾಥ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ವಿಷ್ಣುವಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ. ಈ ದಿನದಂದು ದೇವಾಲಯವನ್ನು ‘ವೈಕುಂಠ’ ಎಂದು ವರ್ಣಿಸಲಾಗುತ್ತದೆ. ಎರಡೂ ದೇವತೆಗಳನ್ನು ಪರಸ್ಪರ ಪೂಜಿಸುತ್ತಾರೆ. ಭಕ್ತರು ಸ್ನಾನ ಮಾಡಿ, ಇಡೀ ದಿನ ಉಪವಾಸ ವ್ರತವನ್ನು ಕೈಗೊಂಡ ನಂತರ ಪೂಜೆಗಳನ್ನು ಪ್ರಾರಂಭಿಸುತ್ತಾರೆ.