ಮೇಲ್ಕೋಟೆ ಕೃತ್ತಿಕೋತ್ಸವ

ಇದು ಕಾರ್ತಿಕ ಮಾಸದ ಶುದ್ಧ ಪೌರ್ಣಿಮೆಯಂದು ನಡೆಯುತ್ತದೆ. ಅಂದು ಯಾಗಶಾಲೆಯಲ್ಲಿ ದೀಪಗಳ ಪ್ರತಿಷ್ಠೆ. ಆ ನಂತರ ದೇವಾಲಯಕ್ಕೆ ದೀಪಾಲಂಕಾರ. ನಾರಾಯಣಸ್ವಾಮಿ, ಅಮ್ಮನವರು, ಶ್ರೀ ಚಲುವರಾಯಸ್ವಾಮಿ ಎಲ್ಲರಿಗೂ ವೇದಮಂತ್ರದಿಂದ ‘ಪುಟ್ಟಾರ್ತಿ’ (ಇದು ಕುಂದು ಮಾಡಿ ತುಪ್ಪದಿಂದ ಉರಿಸುವ ಒಂದು ದೀಪ). ನಂತರ ಒಳ ಪ್ರಾಕಾರದಲ್ಲಿ ಉತ್ಸವ (ನಾಲ್ಕನೇ ಅರ್ಚನೆಯಿಂದ). ನಂತರ ಹೊರಗೆ ಗರುಡ ಗಂಬದ ಮೇಲೆ ದೀಪ ಸ್ಥಾಪನೆ ಹಾಗೂ ಎಣ್ಣೆ ಬಟ್ಟೆಯನ್ನು ದೇವರೆದುರಿಗೆ ಸುತ್ತುವುದು (ಕರಗ). ನಂತರ ಮಂಟಪ ವಾಹನ ಹಾಗೂ ಸ್ವಾಮಿಗೆ ಎಣ್ಣೆ ಅಲಂಕಾರ. ಇದರ ನಂತರ ಒಂದು ತಿಂಗಳ ಕಾಲ ಉತ್ಸವವಿಲ್ಲ. ಶ್ರೀ ಚಲುವರಾಯನಿಗೆ ಕೈಶಿಕ ದ್ವಾದಶಿ - ಅಂದು ಬೆಳಗಿನ ಜಾವಕ್ಕೆ ಶ್ರೀ ಚಲುವರಾಯನಸ್ವಾಮಿಗೆ ಹನ್ನೆರಡು ಅವತಾರ ಸೇವೆ ಮತ್ತು ಮಂಗಳಾರತಿ, ಶ್ರೀಭಟ್ಟರ್‍ರವರಿಗೆ ವಿಶೇಷ ಮರ್ಯಾದೆ,

ಕೈಶಿಕ ಪುರಾಣ ಮತ್ತು ಶಾತ್ತುಮೊರೈ.  ಈ ಕೃತ್ತಿಕೋತ್ಸವವನ್ನು ‘ಕಾರ್ತಿಕ ದೀಪ’ ವೆಂದೂ ಕರೆಯುವರು.