ಆಶ್ವಯುಜದ ಕೊನೆಯಲ್ಲಿ ದೀಪಾವಳಿಯನ್ನು ಆಚರಿಸಿದ ನಂತರ, ಜೈನರು ಕಾರ್ತಿಕ ಮಾಸದ ಮೊದಲನೆಯ ದಿನ ಹೊಸ ವರ್ಷವನ್ನು ಆಚರಿಸುತ್ತಾರೆ. ದೇವಾಲಯದಲ್ಲಿ ಶಾಸ್ತ್ರಪೂಜೆಯ ಆಚರಣೆ ನಡೆಯುತ್ತದೆ. ಮಹಾವೀರನ ಮುಖ್ಯ ಶಿಷ್ಯ ಗೌತಮ ಸ್ವಾಮಿ ಈ ದಿನದಂದು ಕೇವಲ ಜ್ಞಾನ ಪಡೆದನು ಎಂದು ಹೇಳುತ್ತಾರೆ.