ಶಿಶು ಸಂರಕ್ಷಣಾ ದಿನ

ನವೆಂಬರ್ 7ರಂದು ಶಿಶು ಸಂರಕ್ಷಣಾ ದಿನ ಆಚರಿಸಲಾಗುತ್ತದೆ. ಶಿಶುಗಳ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶಿಶುಗಳ ಸೂಕ್ತ ಆರೈಕೆಯನ್ನು ಮಾಡುವುದರ ಮೂಲಕ ಅವರ ಜೀವವನ್ನು ರಕ್ಷಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. ಸರಿಯಾದ ಸುರಕ್ಷತೆ ಮತ್ತು ಸೂಕ್ತ ಆರೈಕೆಯ ಕೊರತೆಯಿಂದಾಗಿ ನವಜಾತ ಶಿಶುಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಉದ್ದೇಶ

ಶಿಶುಗಳನ್ನು ರಕ್ಷಿಸುವುದು, ಉತ್ತೇಜಿಸುವುದು ಮತ್ತು ಅಭಿವೃದ್ಧಿಮಾಡುವುದು.

ನುಡಿಗಟ್ಟುಗಳು

  • ಮಕ್ಕಳು ಜಗತ್ತಿನ ಅತ್ಯಂತ ಅಮೂಲ್ಯ ಸಂಪನ್ಮೂಲ ಮತ್ತು ಭವಿಷ್ಯದ ಅತ್ಯುತ್ತಮ ಭರವಸೆ. (ಜಾನ್ ಎಫ್. ಕೆನಡಿ)
  • ಮಗುವನ್ನು ರಕ್ಷಿಸುವ ತಾಯಿಗಿಂತ ದೊಡ್ಡ ಯೋಧ ಬೇರೆ ಯಾರೂ ಇಲ್ಲ. (ಎನ್.ಕೆ.)
  • ಹಿಂಸೆಯಿಂದ ಮಕ್ಕಳನ್ನು ರಕ್ಷಿಸುವ ವಿಷಯಕ್ಕೆ ಬಂದಾಗ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ಶಾಲೆಗೆ ಹೋಗದೇ ಇರುವುದು ಹಿಂಸೆಗೆ ಪ್ರಮುಖ ಕಾರಣವಾಗಿದೆ. ಶಾಲೆ ಬಿಡುವ ಪ್ರಮಾಣವೂ ಆತಂಕಕಾರಿಯಾಗಿದೆ. (ಶಕೀರಾ)
  • ನಿಮ್ಮ ಮಕ್ಕಳಿಗೆ ನಿಮ್ಮ ಉಡುಗೊರೆಗಳಿಗಿಂತ ನಿಮ್ಮ ಸನಿಹದ ಅವಶ್ಯಕತೆ ಹೆಚ್ಚು. (ಜೆಸ್ಸಿ ಜಾಕ್ಸನ್)
  • ಮಕ್ಕಳನ್ನು ಪರಭಕ್ಷಕಗಳಿಂದ ರಕ್ಷಿಸಲು ಲಭ್ಯವಿರುವ ಎಲ್ಲ ಸಲಕರಣೆಗಳನ್ನು ನಮ್ಮ ಕಾನೂನು ಜಾರಿಯಲ್ಲಿ ನೀಡಬೇಕು ಮತ್ತು ಪೋಷಕರು ತಮ್ಮ ಸಮುದಾಯದಲ್ಲಿ ಯಾರು ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. (ರಾಬಿನ್ ಹೇಯ್ಸ್)