ದುರ್ಗಾಷ್ಟಮಿ

ಅಷ್ಟಮಿ ಅತ್ಯಂತ ಶುಭಕರವಾದ ದಿನಗಳಲ್ಲಿ ಒಂದಾಗಿದೆ ಮತ್ತು ಎಲ್ಲಾ ಒಂಬತ್ತು ನವರಾತ್ರಿಯ ದಿನಗಳಲ್ಲಿ ಉಪವಾಸ ಮಾಡಲು ಸಾಧ್ಯವಾಗದ ಅನೇಕ ಜನರು, ಅಷ್ಟಮಿಯಂದು ವ್ರತದೊಂದಿಗೆ ಉಪವಾಸ ಕೈಗೊಳ್ಳುತ್ತಾರೆ.

ದುರ್ಗಾಷ್ಟಮಿ ಮಹತ್ವ

ಒಂಬತ್ತು ನವರಾತ್ರಿ ದಿನಗಳಲ್ಲಿ ದುರ್ಗಾಷ್ಟಮಿ ವಿಶೇಷವಾದದ್ದು.

ಅಷ್ಟಮಿಯ ದಿನ ಹಲವಾರು ಪೂಜಾ ವಿಧಿಗಳು ಇರುತ್ತವೆ. ಐದರಿಂದ ಒಂಬತ್ತು ವರ್ಷದ ಒಂಬತ್ತು ಪುಟ್ಟ (ದುರ್ಗಾ ಮಾತೆಯ ಸಹಚರರಾಗಿ ಅಷ್ಟಮಾತೃಕೆಯರ ಸ್ವರೂಪ) ವಿಶೇಷವಾಗಿ ಕೌಮಾರಿಯರನ್ನು ಆಹ್ವಾನಿಸಿ, ಅವರನ್ನು ದುರ್ಗಾ ಮಾತೆಯಾಗಿ ಭಾವಿಸಿ ಪೂಜಿಸಿ, ಸಿಹಿ ತಿಂಡಿಯ ವಿಶೇಷ ಭೋಜನವನ್ನು ಬಡಿಸಲಾಗುತ್ತದೆ. ದಂತಕಥೆಗಳ ಪ್ರಕಾರ ಒಂಬತ್ತು ಪುಟ್ಟ ಹುಡುಗಿಯರು ದುರ್ಗಾ (ನವದುರ್ಗಾ) ದೇವಿಯ ಅವತಾರಗಳನ್ನು ಸಂಕೇತಿಸ್ತಾರೆ.

ಆಚರಣೆ

ಕನ್ಯಾ ಪೂಜೆಯ ಸಮಯದಲ್ಲಿ, ಕನ್ನಿಕೆಯರು (ಹುಡುಗಿಯರು) ದೇವಿಯ ವಿಗ್ರಹದ ಅಥವಾ ದೇವಿಯ ಫೋಟೋದ ಬಳಿ ಯಲ್ಲಿ ಆಸೀನರಾಗಿರುತ್ತಾರೆ. ಅವರ ಪಾದಗಳನ್ನು ತೊಳೆಯಲಾಗುತ್ತದೆ ಮತ್ತು ಅವರ ಮಣಿಕಟ್ಟಿನಲ್ಲಿ ಕೆಂಪು ದಾರವನ್ನು ಕಟ್ಟಲಾಗುತ್ತದೆ. ಹಣೆಗೆ ಕೆಂಪು ಬಿಂಡಿ ಅಥವಾ ಕುಂಕುಮ ತಿಲಕವನ್ನು ಇಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಆಹಾರ, ನಾಣ್ಯ ಮತ್ತು ಸಣ್ಣ ಉಡುಗೊರೆಗಳಿಂದ ಅಲಂಕೃತ ತಟ್ಟೆಗಳನ್ನು ನೀಡಲಾಗುತ್ತದೆ.

ದುರ್ಗಾಪೂಜೆಯನ್ನು ‘ದುರ್ಗೋತ್ಸಸವ’ ಎಂದೂ ಸಹ ಕರೆಯಲಾಗುತ್ತದೆ. ಉತ್ಸವದ ತಯಾರಿಗಳು ಬಹಳ ಮುಂಚಿತವಾಗಿಯೇ ಪ್ರಾರಂಭವಾಗುತ್ತವೆ. ದುರ್ಗಾದೇವಿಯನ್ನು ಭಕ್ತರು ಸ್ವಾಗತಿಸುತ್ತಾರೆ. ಜನರು ಭಕ್ತಿಯಲ್ಲಿ ಮುಳುಗುತ್ತಾರೆ ಹಾಗೂ ಮೋಜಿಗಾಗಿ ಆನಂದಿಸುತ್ತಾರೆ ಸಹ. ಬಂಗಾಳಿಗರು ದುರ್ಗೆಯನ್ನು ಕಾಳಿ ಮಾತೆಯ ರೂಪದಲ್ಲಿ ಆರಾಧಿಸುತ್ತಾರೆ.

ತ್ರಿಕರಣಪೂರ್ವಕ ಆವಾಹನೆ, ಪೂಜೆ ಮತ್ತು ಜಪ ದುರ್ಗಾಷ್ಟಮಿಯ ಪ್ರಮುಖ ಉದ್ದೇಶ. ಅಷ್ಟಮಿಯನ್ನೂ ಸೇರಿಕೊಂಡು ನವರಾತ್ರಿಯಿಡೀ ‘ಲಲಿತಾಸಹಸ್ರನಾಮ’ ಪಠನೆ ಅತಿ ಪ್ರಶಸ್ತವಾದುದು.