ಮಹಿಷಾಸುರನು ಒಬ್ಬ ಅಸುರನಾಗಿದ್ದನು. ಅವನು
ತನ್ನ ದುಷ್ಟ ಮಾರ್ಗಗಳನ್ನು ಆಕಾರ-ಬದಲಾವಣೆಗಳ ಮೂಲಕ ಅನುಸರಿಸುತ್ತಿದ್ದನು. ಮಹಿಷಾಸುರನು ರಂಭಾಳ ಮಗ
ಮತ್ತು ಬ್ರಹ್ಮರ್ಷಿ ಕಶ್ಯಪನ ಮೊಮ್ಮಗ ಎಂದು ಹೇಳುತ್ತಾರೆ. ಅವನ ದುಷ್ಟ ಮಾರ್ಗವನ್ನು ಕೊನೆಗಾಣಿಸಲು
ಅಂತಿಮವಾಗಿ ದುರ್ಗಾದೇವಿಯು ಅವನನ್ನು ಕೊಂದಳು. ಹೀಗಾಗಿ ಅವಳಿಗೆ “ಮಹಿಷಾಸುರಮರ್ಧಿನಿ” ಎಂಬ ಹೆಸರು
ಬಂದಿತು. ನವರಾತ್ರಿ ಹಬ್ಬವು ಮಹಿಷಾಸುರ ಮತ್ತು ದುರ್ಗಾ ನಡುವಿನ ಯುದ್ಧದ ಸಂಕೇತವಾಗಿದೆ. ವಿಜಯ ದಶಮಿಯಯಂದು
ಆತನ ಸಂಹಾರವಾಯಿತು ಎಂದು ಹೇಳಲಾಗುತ್ತದೆ. ಇದು ಅವನ ಅಂತಿಮ ಸೋಲಿನ ಸಂಭ್ರಮಾಚರಣೆಯಾಗಿದೆ.
"ದುಷ್ಟರ ಮೇಲೆ ಒಳ್ಳೆಯ ವಿಜಯ" ಎಂಬ ಕಥೆಯು ಹಿಂದೂ ಧರ್ಮದಲ್ಲಿ, ವಿಶೇಷವಾಗಿ ಶಾಕ್ತ ಪಂಥದಲ್ಲಿ
ಗಾಢವಾದ ಸಂಕೇತವನ್ನು ಹೊಂದಿದೆ. ಅನೇಕ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಿಂದೂ ದೇವಾಲಯಗಳಲ್ಲಿರುವ
ದೇವಿ ಮಹಾತ್ಮೆಯಿಂದ ಇದು ನಿರೂಪಿತವಾಗಿದೆ.
ಪುರಾಣ
ಮಹಿಷಾಸುರ ಎಂಬ ಸಂಸ್ಕೃತ ಪದವು ‘ಮಹಿಷ’ ಎಂಬ
ಅಂದರೆ ‘ಕೋಣ’ ಎಂದರ್ಥ. ‘ಅಸುರ’ ಎಂದರೆ ‘ರಾಕ್ಷಸ’ ಎಂದರ್ಥ. ಅಸುರನಾಗಿ ಮಹಿಷಾಸುರನು ದೇವರನ್ನು ಗುರಿಯಾಗಿರಿಸಿ
ನಿರಂತರವಾಗಿ ಯುದ್ಧವನ್ನು ಮಾಡಿದನು. ಮಹಿಷಾಸುರನಿಗೆ ಯಾವ ಮನುಷ್ಯನೂ ಅವನನ್ನು ಕೊಲ್ಲಲಾರ ಎಂಬ ವರವನ್ನು
ಪಡೆದಿದ್ದನು. ದೇವರು ಮತ್ತು ರಾಕ್ಷಸರ (ಅಸುರರ) ನಡುವಿನ ಯುದ್ಧಗಳಲ್ಲಿ, ಇಂದ್ರನ ನೇತೃತ್ವದಲ್ಲಿ
ದೇವರೂ ಮಹಿಷಾಸುರನಿಂದ ಸೋಲಿಸಲ್ಪಟ್ಟರು. ಈ ಸೋಲಿನ ಹಿನ್ನೆಲೆಯಲ್ಲಿ ದೇವತೆಗಳು ತಮ್ಮ ದೈವಿಕ ಶಕ್ತಿಗಳನ್ನು
ಒಟ್ಟುಗೂಡಿಸಿ, ಪರ್ವತಗಳಲ್ಲಿ ಸೇರಿ ದುರ್ಗಾದೇವಿಯನ್ನು ಪ್ರಾಥಿಸಿದರಂತೆ. ಮಾತೆ ದುರ್ಗೆಯು ಅವರಿಗೆ
ಅಭಯವಿತ್ತು ಸಿಂಹ
ವಾಹನವನ್ನೇರಿ
ಮಹಿಷಾಸುರನ ವಿರುದ್ಧ ಹೋರಾಡಿ ಅವನ್ನನ್ನು ಕೊಲ್ಲುತ್ತಾಳೆ. ಈ ಯುದ್ಧಕ್ಕೆ ಸಂಬಂಧಿಸಿದ ದುರ್ಗಾದೇವಿಯ
ಕಲಾಕೃತಿಯನ್ನು ಭಾರತವೂ ಸೇರಿದಂತೆ, ನೇಪಾಳ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತದೆ. ಮಹಿಷಾಸುರನನ್ನು
ದುರ್ಗೆಯು ಗುಹೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಕೆತ್ತಲ್ಪಟ್ಟ ಒಂದು ಪ್ರಮುಖ ವಸ್ತುವಾಗಿದೆ. ಮಹಾಬಲಿಪುರಂನ
ಮಹಿಷಾಸುರಮರ್ದಿನಿ ಗುಹೆಗಳಲ್ಲಿ, ಎಲ್ಲೋರ ಗುಹೆಗಳಲ್ಲಿ, ರಾಣಿಯ ದ್ವಾರದಲ್ಲಿ, ಹಳೇ ಬೀಡಿನ ಹೊಯ್ಸಳೇಶ್ವರ ದೇವಾಲಯಗ ಈ ಯುದ್ಧದ ವರ್ಣನೆಯನ್ನು ಕಾಣಬಹುದು. ಬಿಹಾರ,
ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ಇತರ ಪೂರ್ವ ರಾಜ್ಯಗಳಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೇವಿಯು
ಮಹಿಷಾಸುರನನ್ನು ಕೊಲ್ಲುವಂತೆ ಚಿತ್ರಿಸುವ ವೇದಿಕೆಗಳಲ್ಲಿ ಆರಾಧಿಸುತ್ತಾರೆ.
ಮಹಿಷಾಸುರ ಮತ್ತು ಮೈಸೂರು
ಅಸುರನಾಗಿದ್ದ ಮಹಿಷಾಸುರನು ಸ್ಥಳೀಯ ಜನರನ್ನು ಭಯಭೀತಗೊಳಿಸಿದನು. ಆಗ ದುರ್ಗಾದೇವಿಯು
(ಚಾಮುಂಡೇಶ್ವರಿ) ಮಹಿಷಾಸುರನನ್ನು ಕೊಲ್ಲುತ್ತಾಳೆ. ಈ ಸಂಹಾರ-ವಿಜಯಗಳ ಸಂಕೇತವಾಗಿ ನವರಾತ್ರಿಯಲ್ಲಿ
ಮೈಸೂರಿನಲ್ಲಿ ಅಲ್ಲದೆ ಇಡೀ ನಾಡಿನಲ್ಲಿ ನಾಡ ದೇವತೆಯ ಹಬ್ಬವಾಗಿ ಆಚರಣೆಯಲ್ಲಿದೆ.
ನಗರದ ರಕ್ಷಕ ದೇವತೆ ಚಾಮುಂಡೇಶ್ವರಿಯ ದೇವಾಲಯವು ನಗರದ ಅಭಿಮುಖವಾಗಿರುವ ಬೆಟ್ಟದ ಮೇಲೆ ಇದೆ. ಹಾಗೆಯೇ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಹೊಂದಿದೆ. ಮೈಸೂರಿನ ಮೊದಲ ಉಲ್ಲೇಖವು ಸಾಮ್ರಾಟ ಅಶೋಕನ ಕಾಲದಲ್ಲಿ ‘ಮಹಿಷ ಮಂಡಲ’ ಎಂದು ಕರೆಯಲಾಗುತ್ತಿತ್ತೆಂದು ತಿಳಿಸುತ್ತದೆ.