ವಾಮನ ಜಯಂತಿ

ಭಾದ್ರಪದ ಮಾಸದಶುಕ್ಲ ಪಕ್ಷದ ದ್ವಾದಶಿ (ಹನ್ನೆರಡನೇ) ತಿಥಿಯಂದು ವಾಮನ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಶ್ರಾವಣ ನಕ್ಷತ್ರದಲ್ಲಿ ವಾಮನ ದೇವರು ಜನಿಸಿದ ಕಾರಣ, ಶ್ರಾವಣದ ಈ ಮುಹೂರ್ತದಲ್ಲಿ ಈ ಹಬ್ಬವನ್ನು ಸಾಮಾನ್ಯವಾಗಿ ಆಚರಿಸಲಾಗುತ್ತದೆ.

ಆಚರಣೆಗಳು

ಸಾಮಾನ್ಯವಾಗಿ ಈ ದಿನದಂದು ವಿಷ್ಣು ಭಕ್ತರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಭಗವಾನ್ ವಿಷ್ಣುವಿಗೆ ಅರ್ಘ್ಯವನ್ನು ಅರ್ಪಿಸುವರು.     ವಾಮನ ದೇವರ ಪೂಜೆಯನ್ನು ಮಾಡುವ ಸ್ಥಳದಲ್ಲಿ ಕಲಶವನ್ನು ಪೂಜಾ ಕೋಣೆಯಲ್ಲಿ ಇರಿಸಿ, ವಾಮನ ದೇವರ ಮಣ್ಣಿನ ಮೂರ್ತಿ ತಯಾರಿಸಿ ವಿಷ್ಣುವಿಗೆ ಪ್ರಿಯವಾದ ಎಲ್ಲಾ ವಸ್ತುಗಳನ್ನು ಅರ್ಪಿಸುವರು. ನಂತರ ಇಡೀ ದಿನ ಕಟ್ಟುನಿಟ್ಟಿನ ಉಪವಾಸ ಆಚರಿಸುವ ನಿರ್ಣಯವನ್ನು ಮಾಡಿ ವಾಮನನನ್ನು ಒಲಿಸಿಕೊಳ್ಳುವುದಕ್ಕಾಗಿ ಹವನ ಕೈಗೊಳ್ಳುತ್ತಾರೆ. ಕೊನೆಯಲ್ಲಿ ವಾಮನನ ಕಥಾಶ್ರವಣ ಮಾಡುವರು.

ಬ್ರಾಹ್ಮಣರು ಮತ್ತು ಬಡವರಿಗೆ ಧಾನ್ಯಗಳು, ಹಣ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡುವ ಪದ್ಧತಿ ಕೆಲವೆಡೆ ಆಚರಣೆಯಲ್ಲಿದೆ.