ಕ್ಷೀರ ವ್ರತಾರಂಭ

ಶಾಕವ್ರತ

ಚಾತುರ್ಮಾಸದ ಮೊದಲನೇ ತಿಂಗಳಿನಲ್ಲಿ ಆಷಾಢ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಶಾಕವ್ರತ. ಶಾಕವೆಂದರೆ ಎಲ್ಲಾ ವಿಧವಾದ ತರಕಾರಿ, ಕಾಯಿಪಲ್ಲೆ, ಸೊಪ್ಪು (ಆದರೆ ಅಗಸೇ ಸೊಪ್ಪು, ಹೊನ್ನಂಗಣಿ ಸೊಪ್ಪು ಬ್ರಾಹ್ಮೀ ಅಥವಾ ಒಂದೆಲಗ ಸೊಪ್ಪು, ತುಳಸಿ ಸ್ವೀಕರಿಸಬಹುದು), ಹಣ್ಣುಗಳನ್ನು (ಆದರೆ ಮಾವಿನ ಹಣ್ಣು ನಿಷಿದ್ಧವಲ್ಲ) ಬೇಳೆ ಕಾಳುಗಳು (ಆದರೆ ಉದ್ದು ,ಹೆಸರು ಕಾಳು, ಹೆಸರು ಬೇಳೆ ನಿಷಿದ್ಧವಲ್ಲ), ಚಕ್ಕೆ, ಬೇರು, ಗೆಡ್ಡೆ-ಗೆಣಸು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ದಧಿ ವ್ರತ

ಚಾತುರ್ಮಾಸದ ಎರಡನೇ ತಿಂಗಳಿನಲ್ಲಿ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತ. ದಧಿವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಕ್ಷೀರ ವ್ರತ

ಚಾತುರ್ಮಾಸದ ಮೂರನೇ ತಿಂಗಳಿನಲ್ಲಿ ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ (ಹಾಲಿನ ) ವ್ರತ . ಕ್ಷೀರ ವ್ರತದಲ್ಲಿ ಹಾಲು ಹಾಗೂ ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ವ್ರತಾಚರಣೆಯಲ್ಲಿ ತೊಡಗಿರುವವರು ಸ್ವೀಕರಿಸಬಾರದು.

ದ್ವಿದಳ ವ್ರತ

ಚಾತುರ್ಮಾಸದ ನಾಲ್ಕನೇ ತಿಂಗಳಿನಲ್ಲಿ ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತ. ದ್ವಿದಳ ವ್ರತದಲ್ಲಿ, ದ್ವಿದಳ ಧಾನ್ಯಗಳು, ಬಹುಬೀಜಗಳು, ಬಹುಬೀಜವುಳ್ಳ ತರಕಾರಿ, ಹಣ್ಣುಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ವ್ರತಾಚರಣೆಯಲ್ಲಿ ತೊಡಗಿರುವವರು ಸ್ವೀಕರಿಸಬಾರದು. 

ಚಾತುರ್ಮಾಸ್ಯ ವ್ರತದ ಆರಂಭದಲ್ಲಿ ವ್ರತದ ಸಂಕಲ್ಪವನ್ನು ಮಾಡಬೇಕು, ಅಂತ್ಯದಲ್ಲಿ ದಾನವನ್ನು ಕೊಟ್ಟು ಭಗವಂತನಿಗೆ ಅರ್ಪಿಸಬೇಕು. ಇವೆಲ್ಲ ಶಾಸ್ತ್ರದಲ್ಲಿನ ನಿಯಮ ಎನ್ನುತ್ತಾರೆ.