ಕೇದಾರ ವ್ರತ

ಮಹತ್ವ

ಕೇದಾರ ವ್ರತವು ಶಿವ ಮತ್ತು ಪಾರ್ವತಿ ದೇವಿಗೆ ಸಂಬಂಧಿತವಾಗಿದೆ. ಇದನ್ನು ಮುಖ್ಯವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ದೀಪಾವಳಿ ದಿನದಂದು ಆಚರಿಸಲಾಗುತ್ತದೆ.

ಪುರಾಣಕಥೆಗಳ ಪ್ರಕಾರ ಗೌರಿ (ಪಾರ್ವತಿ) ದೇವಿ ಕೇದಾರ ವ್ರತವನ್ನು ಆಚರಿಸಿ ಕೊನೆಗೆ ಶಿವನೊಂದಿಗೆ ಲೀನಳಾಗಿದ್ದಳು. ಹೀಗೆ ಶಿವ ಮತ್ತು ಪಾರ್ವತಿ ಒಟ್ಟಿಗೆ ಅರ್ಧನಾರೀಶ್ವರರಾದರು.

ದಂಪತಿಗಳು ಸುಖ ಮತ್ತು ಶಾಂತಿಯ ಜೀವನಕ್ಕಾಗಿ ಈ ವ್ರತವನ್ನು ಮಾಡುತ್ತಾರೆ. ಅವಿವಾಹಿತ ಮಹಿಳೆಯರು ಉತ್ತಮ ಪತಿಗಾಗಿ ಇದನ್ನು ಮಾಡುತ್ತಾರೆ. ಪಾರ್ವತಿ ದೇವಿಯು 21 ದಿನಗಳ ಕಾಲ ವ್ರತವನ್ನು ಆಚರಿಸಿದ್ದಳೆಂದು ನಂಬಿರುವ ಕಾರಣ ಈ ಸಂಖ್ಯೆ 21ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯನ್ನು ನೀಡಲಾಗಿದೆ.

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಈ ಪೂಜೆ ಬಹಳ ಮಹತ್ವಪಡೆದಿದೆ.