ಸರಸ್ವತಿ ಪೂಜೆ ಆವಾಹಾನ

ಪೂಜಾ ಮಹತ್ವ

ಸರಸ್ವತಿ ಪೂಜೆಯನ್ನು ಭಾರತದಲ್ಲಿ ಜನರು ಹೆಚ್ಚಾಗಿ ನಡೆಸುವ ಅತ್ಯಂತ ಪವಿತ್ರ ಪೂಜೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಪೂಜೆಯು ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಭಾರತ ವಲ್ಲದೆ ನೇಪಾಳ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಗಳಲ್ಲೂ ಈ ಪೂಜೆಯನ್ನು ಆಚರಿಸಲಾಗುತ್ತದೆ.

ಕಲೆ, ಸಂಸ್ಕೃತಿ, ಸಂಗೀತಗಳ ಹೊರತಾಗಿ ವಿದ್ಯೆಯ ಅಧಿದೇವತೆ ಎಂದು ಪರಿಗಣಿಸಲ್ಪಟ್ಟ ಸರಸ್ವತಿದೇವಿಯ ವರವನ್ನು ಪಡೆಯಲು ಸರಸ್ವತಿ ಪೂಜೆಯನ್ನು ನಡೆಸಲಾಗುತ್ತದೆ. ಸರಸ್ವತಿ ದೇವಿಯು ದುರ್ಗಾದೇವಿಯ ಅವತಾರಗಳಲ್ಲಿ ಒಂದು. ಸಾಮಾನ್ಯವಾಗಿ ವೀಣೆಯೊಂದಿಗೆ ಕಮಲದ ಹೂವಿನ ಮೇಲೆ ಕುಳಿತಿರುವ ಚಿತ್ರವನ್ನು ಕಾಣಬಹುದು.

ಸರಸ್ವತಿ ಪೂಜೆಯನ್ನು ವಸಂತ ಪಂಚಮಿ ಅಥವಾ ‘ಬಸಂತ್ ಪಂಚಮಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದನ್ನು ವಸಂತ ಕಾಲದ 5ನೇ ದಿನದಂದು ನವರಾತ್ರಿಯ ಸಮಯದಲ್ಲಿ ಆಚರಿಸಲಾಗುತ್ತದೆ. ಸರಸ್ವತಿ ದೇವಿಗೆ ಪೂಜೆ ಮಾಡಿದರೆ ಜ್ಞಾನ ಅಥವಾ ವಿದ್ಯೆ ಪ್ರಾಪ್ತವಾಗುವುದು ಎಂಬ ನಂಬಿಕೆ ಇದೆ. ಈ ಪೂಜೆ ಋಣಾತ್ಮಕವಾಗಿ ಅಂತ್ಯಗೊಳಿಸಿ ಇಡೀ ಕುಟುಂಬಕ್ಕೆ ಧನಾತ್ಮಕತೆಯನ್ನು ತರುತ್ತದೆ.

ಈ ಪೂಜೆಯನ್ನು ಮಾಡುವ ಜನರು ಆಲೋಚನೆಯ ಸ್ಪಷ್ಟತೆ ಮತ್ತು ಸವಾಲನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವುಗಳನ್ನು ಜಯಿಸುವ ಮೂಲಕ ವ್ಯಕ್ತಿಯ ಜೀವನದಲ್ಲಿ ಶ್ರೇಯಸ್ಸು ಉಂಟಾಗುತ್ತದೆ ಎಂದು ಹೇಳುವರು.

ಈ ದಿನವನ್ನು ಮಕ್ಕಳು ತಮ್ಮ ಕಲಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಅತ್ಯಂತ ಉತ್ತಮವೆಂದು ಪರಿಗಣಿಸಲಾಗಿದೆ ಮತ್ತು ಈ ದಿನವನ್ನು ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಲು ಅತ್ಯುತ್ತಮವಾದ ದಿನವೆಂದೂ ಸಹ ಪರಿಗಣಿಸಲಾಗಿದೆ.

ಆಚರಣೆ

ಪುಸ್ತಕ ಮತ್ತು ಸಂಗೀತ ವಾದ್ಯಗಳ ಜೊತೆ ಸರಸ್ವತಿ ವಿಗ್ರಹ ಇರಿಸಿ, ಸರಸ್ವತಿ ಮಂತ್ರಗಳನ್ನು ಪಠಿಸುವ ಮೂಲಕ ಸರಸ್ವತಿ ದೇವಿಯ ಆಮಂತ್ರಿಸುವರು ಇದನ್ನು ಸರಸ್ವತಿ ಆವಾಹನೆ ಎನ್ನುತ್ತಾರೆ. ವಿಗ್ರಹದ ಬದಲು ಭಗವದ್ಗೀತೆ, ರಾಮಾಯಣ ಅಥವಾ ಉತ್ತಮ ಆಧ್ಯಾತ್ಮಿಕ ಗ್ರಂಥಗಳನ್ನು ಇರಿಸಿ ಅವುಗಳನ್ನು ಸರಸ್ವತಿ ಮಾತೆಯನ್ನಾಗಿ ಭಾವಿಸಿ, ಅರಿಶಿನ, ಕುಂಕುಮ, ಅಕ್ಷತೆ, ಹೂವುಗಳಿಂದ ಸರಸ್ವತಿ ಶ್ಲೋಕ ಹೇಳಿಕೊಳ್ಳುತ್ತಾ ಪೂಜಿಸುತ್ತಾರೆ.  ಕೆಲವು ಪ್ರದೇಶಗಳಲ್ಲಿ ಈ ಪುಸ್ತಕಗಳನ್ನು ವಿಸರ್ಜನೆಯ ದಿನದವರೆಗೂ ಅಲ್ಲಿಯೇ ಇರಿಸುತ್ತಾರೆ ಮತ್ತು ದಿನವೂ ಪೂಜಿಸುತ್ತಾರೆ. ನೈವೇದ್ಯ, ತಂಬೂಲ ಮತ್ತು ದಕ್ಷಿಣೆಯನ್ನು ಸರಸ್ವತಿ ದೇವಿಗೆ ಅರ್ಪಿಸುತ್ತಾರೆ. ಆರತಿಯೊಂದಿಗೆ ಮುಕ್ತಾಯ ಗೊಳಿಸುವರು ಮತ್ತು ಪೂಜೆಯ ಸಮಯದಲ್ಲಿ ಮಾಡಿದ ಯಾವುದೇ ತಿಳಿಯದೆ ಎಸಗಿದ ತಪ್ಪುಗಳಿಗಾಗಿ ಸರಸ್ವತಿ ದೇವಿಯ ಕ್ಷಮೆಯನ್ನು ಕೇಳುವರು.