ಶೃಂಗೇರಿ ಭಾರತೀತೀರ್ಥ ವರ್ಧಂತಿ

ಆಚರಣೆ

ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದವರ ವರ್ಧಂತಿಯನ್ನು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಮಹಾಸನ್ನಿಧಾನದ ಗೌರವಾರ್ಥವಾಗಿ ವಿಶೇಷ ಪೂಜೆ, ಯಾಗಗಳು, ಖ್ಯಾತ ಸಂಗೀತಗಾರರಿಂದ ಸಾಂಸ್ಕೃತಿಕ ಅರ್ಪಣೆ, ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಮಹಾಸಂಕಲ್ಪಹಾಗೂ ವಿಶೇಷ ಪೂಜೆ

ಚೈತ್ರ ಶುಕ್ಲ ಷಷ್ಠಿಯಂದು ಸಹಸ್ರ ಮೋದಕ ಗಣಪತಿ ಹೋಮ ಹಾಗೂ ಶ್ರೀ ಸನ್ನಿಧಾನದ ದಿವ್ಯ ಸನ್ನಿಧಿಯಲ್ಲಿ 5 ದಿನಗಳ ಕಾಲ ನಡೆಯುವ ಶತಚಂಡಿ ಮಹಾಯಾಗಕ್ಕೆ ಮಹಾಸಂಕಲ್ಪದೊಂದಿಗೆ ರಥೋತ್ಸವವು ಪ್ರಾರಂಭವಾಗುತ್ತದೆ. ಮರುದಿನ ಮಹಾರುದ್ರಯಾಗಕ್ಕೆ ಸಂಕಲ್ಪವನ್ನು ಶ್ರೀ ಸನ್ನಿಧಾನದ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿಸಲಾಗುತ್ತದೆ. ವರ್ಧಂತಿಯ ಹಿಂದಿನ ದಿನ ಶ್ರೀ ಮಹಾಸನ್ನಿಧಾನ ಮತ್ತು ಶ್ರೀ ಸನ್ನಿಧಾನ ಮಲಹನಿಕರೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುತ್ತಾರೆ. ಶ್ರೀ ಮಹಾಸನ್ನಿಧಾನ ಮೊದಲು ಶ್ರೀ ಗಣಪತಿಯ ಪೂಜೆಯನ್ನು ನೆರವೇರಿಸುತ್ತಾರೆ. ನಂತರ ಉಭಯ ಜಗದ್ಗುರುಗಳು ಮಲಹಾನಿಕರೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸರು. ನಂತರ ಶ್ರೀ ಮಹಾಸನ್ನಿಧಾನ ಭವಾನಿ ದೇವಿಗೆ ಪೂಜೆಯನ್ನು ನೆರವೇರಿಸುತ್ತಾರೆ.

ಭಿಕ್ಷಾ ವಂದನೆ, ಪೂರ್ಣಾಹುತಿ ಹಾಗೂ ಮಹಾಯಾಗಗಳು

ಚೈತ್ರ ಶುಕ್ಲ ಷಷ್ಠಿ ದಿನ ಶ್ರೀ ಮಹಾಸನ್ನಿಧಾನ ಬೆಳಗ್ಗೆ ಸಾವಿರಾರು ಭಕ್ತರಿಗೆ ಆಹ್ನಿಕ ದರ್ಶನವನ್ನಿತ್ತು ಆಶೀರ್ವಾದ ಮಾಡುವರು. ಹೆಚ್ಚಿನ ಸಂಖ್ಯೆಯ ಭಕ್ತರು ಭಿಕ್ಷಾ ವಂದನೆ ಮತ್ತು ವಸ್ತ್ರಾರ್ಪಣೆಗಳನ್ನು ಮಾಡುತ್ತಾರೆ ಮತ್ತು ಗುರುನಿವಾಸದ ಮುಖ್ಯ ಪ್ರಾಂಗಣದಲ್ಲಿ ಸನ್ನಿಧಾನದ ದರ್ಶನವನ್ನು ಹೊಂದುತ್ತಾರೆ ಮತ್ತು ಮಹಾಸನ್ನಿಧಾನ ಭಿಕ್ಷಾವಂದನಾ ಪ್ರಸಾದವನ್ನು ನೀಡಿ ಆಶೀರ್ವದಿ ಸುತ್ತಾರೆ. ನಂತರ ಯತಿಗಳಿಬ್ಬರೂ ಪ್ರತಿ ದೇವಸ್ಥಾನದಲ್ಲಿಯೂ ಆಲಯ ದರ್ಶನಕ್ಕಾಗಿ ತುಂಗಾನದಿಯ ಉತ್ತರ ದಂಡೆಗಳಿಗೆ ತೆರಳುತ್ತಾರೆ. ನಂತರ ಶ್ರೀ ಮಹಾಸನ್ನಿಧಾನ ವಿಶೇಷ ಪೂಜೆಯನ್ನು ಶಾರದಾಂಬ ದೇವಿಗೆ ಮಾಡುತ್ತಾರೆ. ಮಹಾರುದ್ರನ ಪೂರ್ಣಾಹುತಿಗಳು ಮತ್ತು ಶತಚಂಡಿ ಮಹಾಯಾಗಗಳು ನಡೆಯಲ್ಪಡುತ್ತವೆ.

ಆಶೀರ್ವಚನ

ಸಂಜೆ ಜಗದ್ಗುರುಗಳ ಗೌರವಾರ್ಥ ವೈದಿಕ ಪ್ರಾರ್ಥನೆಯೊಂದಿಗೆ ಆರಂಭವಾಗುವ ಗುರುವಂದನಾ ಕಾರ್ಯಕ್ರಮ ಆಯೋಜಿಸಿರುತ್ತಾರೆ. ವಿವಿಧ ದೇವಸ್ಥಾನಗಳು ಮತ್ತು ಮಠಗಳ ಪ್ರತಿನಿಧಿಗಳು ಎಲ್ಲಾ ಭಕ್ತರ ಪರವಾಗಿ ಫಲ ಸಮರ್ಪಣೆ ಮಾಡುವರು. ನಂತರ ಮಹಾಸನ್ನಿಧಾನ ತಮ್ಮ ಅನುಗ್ರಹ ದರ್ಶನದ ಮೂಲಕ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಶ್ರೀ ಮಹಾಸನ್ನಿಧಾನ ಅಂದು ರಾತ್ರಿ ಚಂದ್ರಮೌಳೀಶ್ವರ ದೇವರಿಗೆ ಪಂಚಾಮೃತ ಅಭಿಷೇಕದೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸುವರು.