ಪುತ್ತೂರು ಮಹಾಲಿಂಗೇಶ್ವರ


ಸ್ಥಳ ಪುರಾಣ

ಬಹು ಪ್ರಾಚೀನ ಕಾಲದಲ್ಲಿ ವೇದ ವೇದಾಂತ ಪಾರಂಗತರಾದ ಶೈವ ಸಂಪ್ರದಾಯದ ವಿಪ್ರರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಿದ್ದರು. ಶಿವಾರ್ಚನೆಯಲ್ಲೇ ಜೀವನವನ್ನು ಧನ್ಯವನ್ನಾಗಿ ಮಾಡಿಕೊಂಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಆಗ ಈ ವೃದ್ಧ ವಿಪ್ರರನ್ನು ಭೇಟಿಯಾಗಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾದ ಗೋವಿಂದ ಭಟ್ಟರೆಂಬವರು ಅವರಲ್ಲಿ ಕುಶಲ ಪ್ರಶ್ನೆಗಳನ್ನು ಹಾಕಿದರು. ಕಾಶಿಯಿಂದ ಬಂದಿದ್ದ ವೃದ್ಧ ಬ್ರಾಹ್ಮಣರು ಪುತ್ತೂರಿಗೆ ಬರುವರೆಂದು ತಿಳಿದು ಬಂದುದರಿಂದ ಇಬ್ಬರಲ್ಲೂ ಆತ್ಮೀಯತೆ ಬೆಳೆಯಿತು. ತನ್ನ ಮಧ್ಯಾಹ್ನದ ಭೋಜನಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರರು ತನ್ನ ಸಂಪುಟದಿಂದ, ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನು ತೆಗೆದು ಗೋವಿಂದ ಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೊಂಡೇ ಪೊಜಿಸಬೇಕೆಂದು ತಿಳಿಸಿ, ತಾವು ಕುಮಾರಧಾರಾ ನದಿಗೆ ಸ್ನಾನಕ್ಕೆಂದು ಹೋದರು. ಎಷ್ಟು ಸಮಯ ಕಳೆದರೂ, ಅವರು ಹಿಂದಿರುಗದಿದ್ದುದನ್ನು ನೋಡಿ, ಬಲವಾಗಿ ಕರೆದರೂ, ಮರುತ್ತರ ಬಾರದಿರುವುದನ್ನು ಕಂಡು ಈ ಶಿವಲಿಂಗವನ್ನು ತೆಗೆದುಕೊಂಡು, ಸೂರ್ಯಸ್ತಮಾನಕ್ಕಿಂತ ಮೊದಲು ಪುತ್ತೂರನ್ನು ತಲುಪಿದರು. ಇಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು.

ಮರುದಿನ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಪುತ್ತೂರಿನಲ್ಲಿ ಅರುಣೋದಯಕ್ಕೆ ಜಾಗ್ರಾತರಾದ ಈ ದ್ವಿಜರು ಶೌಚಾದಿಗಳನ್ನು ಮುಗಿಸಿ, ಶಿವನ ಸೋಮವಾರದ ವಿಶೇಷ ಪೊಜೆಗೆ ಬೇಕಾದ ಸಾಹಿತ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬಂಗರ ಅರಮನೆಗೆ ಹೋದರು. ಜೈನ ಧರ್ಮದಲ್ಲಿ ಅತೀ ನಿಷ್ಟೆಯನ್ನು ಹೊಂದಿದ್ದ ಬಂಗರಾಯನು ಈ ವಿಪ್ರೋತ್ತಮರ ಬರವನ್ನು ಮನಸಾ ಗಮನಿಸಿಕೊಳ್ಳಲಿಲ್ಲ. ತನ್ನ ಸಹೋದರಿಯು ಪ್ರಸವ ವೇದನೆಯಿಂದ ನರಳುತ್ತಿದ್ದುದರಿಂದ ಬಂಗರಾಯನು ದುಃಖಾಕ್ರಾಂತನಾಗಿದ್ದನು. ಬಂಗರಸನ ಮಂತ್ರಿಯು ಆ ಬ್ರಾಹ್ಮಣನ ನಡವಳಿಕೆಯನ್ನೂ, ಮುಖತೇಜಸ್ಸನ್ನೂ ಕಂಡು ನಿರಾಸೆಯಲ್ಲಿದ್ದರೂ, ಏನಾದರೂ ಆಧಾರ ಸಿಗಬಹುದೋ, ಎಂಬ ಆಸೆಯಿಂದ ಆತನಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಂಡಾಗ, ದಿವ್ಯ ಜ್ಞಾನಿಯಂತಿದ್ದ, ಆ ಬ್ರಾಹ್ಮಣನು ಶಿವಲಿಂಗಕ್ಕೆ ನಮಸ್ಕರಿಸಿ, “ನಿನ್ನಿಚ್ಛೆಯಂತೆ ಆಗಲಿ, ಮಹೇಶ್ವರಾ” ಎಂದು ಪ್ರಾರ್ಥಿಸಿಕೊಂಡು ಬಂಗರಾಜನ ಸಹೋದರಿಗೆ ಪುತ್ರವತಿಯಾಗೆಂದು ಹರಸಿದನು. ಅವ್ಯಾಜ ಕರುಣಾಮೂರ್ತಿಯಾದ ಶಿವನ ದಯೆಯೋ, ಸತ್ಯನಿಷ್ಟ ಬ್ರಾಹ್ಮಣನ ಪ್ರಾರ್ಥನೆಯ ಬಲವೋ ಎಂಬಂತೆ ಬಂಗರಸನ ಸಹೋದರಿಯು ಗಂಡು ಮಗುವನ್ನು ಪ್ರಸವಿಸಿದಳು. ಬಂಗರಸನೂ, ಮಂತ್ರಿಯೂ, ಊರಿನ ಜನರೂ ಬ್ರಾಹ್ಮಣನ ತಪಸ್ ಶಕ್ತಿಗೆ ಬೆರಗಾಗಿ ಅವನಿಗೆ ಶಿರಸಾ ವಂದಿಸಿದರು. ಶಿವಾರ್ಚನೆಗೆ ಬೇಕಾದ ಸರ್ವ ವಿಧದ ಸಾಮಗ್ರಿಗಳನ್ನೂ ಕೊಟ್ಟರು.

ರಥೋತ್ಸವ

ಈ ಶುಭ ದಿನಂದಂದು ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರನ ರಥೋತ್ಸವವನ್ನು ಭಕ್ತಿ ಹಾಗೂ ಸಡಗರಗಳಿಂದ ಆಚರಿಸಲಾಗುತ್ತದೆ.