ತಲಕಾಡು ಮನೋನ್ಮಣಿ ಜಯಂತಿ

ಕಾವೇರಿ ನದಿ ತಟದ, ಲಕ್ಷಗಳ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ದೇವಸ್ಥಾನಗಳೆಂದರೆ ಶ್ರೀ ಪಂಚಲಿಂಗೇಶ್ವರ, ಶ್ರೀ ವೈದ್ಯೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮರುಳೇಶ್ವರ, ಶ್ರೀ ಅರ್ಕೇಶ್ವರ ಹಾಗು ಶ್ರೀ ಮುದುಕುತೊರೆ ಮಲ್ಲಿಕಾರ್ಜುನೇಶ್ವರ. ಕುತೂಹಲಕರ ಸಂಗತಿಯೆಂದರೆ ಐದೂ ಲಿಂಗರೂಪಿ ಶಿವನ ದೇವಸ್ಥಾನಗಳಲ್ಲಿ ಪೂಜೆಯು ಏಕಕಾಲದಲ್ಲಿ ಪ್ರಾರಂಭಗೊಳ್ಳುತ್ತದೆ. ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಇತರೆ 10 ಮಂದಿ ಅರ್ಚಕರ ಜೊತೆಗೂಡಿ ನಿಗದಿಪಡಿಸಲಾದ ಸಮಯದಲ್ಲಿ ವೈದ್ಯೇಶ್ವರ ದೇವಸ್ಥಾನದ ಬಳಿಯಿರುವ ಗೋಕರ್ಣ ತೀರ್ಥ ಕಲ್ಯಾಣಿ ಅಥವಾ ಪುಷ್ಕರಣಿಯಲ್ಲಿ ಮಿಂದು ಅಗ್ರೋದಕ (ಪವಿತ್ರ ನೀರನ್ನು) ತಂದು ಗಂಗಾ ಪೂಜೆಯನ್ನು ನೆರವೇರಿಸುತ್ತಾರೆ.


ಸಂದರ್ಭದಲ್ಲಿ ಶಕ್ತಿ ಗಣಪತಿ, ಮನೋನ್ಮಣಿ ದೇವಿ, ಚಂಡಿಕೇಶ್ವರ ಹಾಗು ವೀರಭದ್ರಸ್ವಾಮಿಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಂತರ ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ ಹಾಗೂ ಮಲ್ಲಿಕಾರ್ಜುನೇಶ್ವರರ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಐದು ಪಂಚಲಿಂಗಗಳ ಪೂಜೆಯ ನಂತರ ಗಜಾರೋಹಣ, ಶ್ರೀ ದಿವ್ಯ ಬ್ರಹ್ಮ ರಥೋತ್ಸವಗಳು ಏರ್ಪಟ್ಟು, ಮರುದಿನ ಶ್ರೀ ಶಯನೋತ್ಸವವನ್ನು ಕೈಗೊಳ್ಳಲಾಗುತ್ತದೆ.