ಶರವು ಮಹಾಗಣಪತಿ ಕ್ಷೇತ್ರ

ಶ್ರೀ ಶರಭೇಶ್ವರ ಅಥವಾ ಶ್ರೀ ಮಹಾಗಣಪತಿ ಕ್ಷೇತ್ರವು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪುರಾತನ ದೇವಾಲಯಗಳಲ್ಲಿ ಒಂದು. ದೇವಾಲಯದ ಪ್ರಮುಖ ದೇವತೆಗಳೆಂದರೆ ಶರಭೇಶ್ವರ ಮತ್ತು ಮಹಾಗಣಪತಿ.

ಶರವು ಕ್ಷೇತ್ರದ ಪ್ರಾರಂಭ ಮತ್ತು ಪ್ರಾಮುಖ್ಯತೆಯನ್ನು ಸ್ಕಂದಪುರಾಣದಲ್ಲಿ ವಿವರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿರುವ ಭಗವಾನ್ ಶರಭೇಶ್ವರ ಮತ್ತು ಭಕ್ತರನ್ನು ಆಕರ್ಷಿಸುವ ಮಹಾಗಣಪತಿಯು ದೇವಾಲಯದ ದಕ್ಷಿಣ ಭಾಗದಲ್ಲಿದೆ.

ಕರ್ನಾಟಕದ ಮಂಗಳೂರು ನಗರದಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಶರವು ಮಹಾಗಣಪತಿ ದೇವಸ್ಥಾನವೂ ಒಂದು. "ಶರವು" ಎಂಬ ಹೆಸರು "ಶರ" ದಿಂದ ಬಂದಿದೆ.  ಇದರ ಅರ್ಥಬಾಣ’. ದೇವಾಲಯವು ನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಶ್ರೀ ಗಣೇಶ ಚತುರ್ಥಿ, ವಾರ್ಷಿಕ ರಥೋತ್ಸವ, ಚಂದ್ರಮಾನ ಯುಗಾದಿ, ದೀಪೋತ್ಸವ ಅಥವಾ ಮತ್ತು ಸಂಕಷ್ಟ ಚತುರ್ಥಿಯ ದಿನ, ಶರಭೇಶ್ವರ ಮಹಾಗಣಪತಿಯ ಪರಮ "ದರ್ಶನ" ವನ್ನು ಭಕ್ತರು ಮಾಡುತ್ತಾರೆ. ಇದು ಯಕ್ಷಗಾನ, ನೃತ್ಯ ನಾಟಕ ಮುಂತಾದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.