ಹೊರನಾಡು ಅನ್ನಪೂರ್ಣೇಶ್ವರೀ ರಥ

ಅನ್ನಪೂರ್ಣೇಶ್ವರೀ ದೇವಾಲಯ

ಅನ್ನಪೂರ್ಣೇಶ್ವರೀ ದೇವಾಲಯವು ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಮತ್ತು ಕಣಿವೆಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಎಂಬಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರೀ ದೇವಿಗೆ ಸಮರ್ಪಿತವಾದ ಒಂದು ಹಿಂದೂ ದೇವಾಲಯವಾಗಿದೆ. ಇದು ಭದ್ರಾ ನದಿಯ ದಂಡೆಯ ಮೇಲೆ ಇದೆ. ದೇವಾಲಯವನ್ನು ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ ಎಂದೂ ಕರೆಯುತ್ತಾರೆ.

ಪುರಾಣ

8ನೇ ಶತಮಾನದಲ್ಲಿ ಅಗಸ್ತ್ಯ ಋಷಿ ಇಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ.

ಪುರಾಣದ ಪ್ರಕಾರ, ಅನ್ನಪೂರ್ಣೆಯಾಗಿ ಅನ್ನ (ಆಹಾರ) ದೇವತೆಯಾದ ಶಿವ ಮತ್ತು ಅವನ ಪತ್ನಿ ಪಾರ್ವತಿ ಒಂದು ವಾದವಿವಾದ ನಡೆಯುತ್ತದೆ. ಆಹಾರವೂ ಸೇರಿದಂತೆ ಪ್ರಪಂಚದಲ್ಲಿ ಎಲ್ಲವನ್ನೂ ಮಾಯೆ ಎಂದು ಶಿವ ಘೋಷಿಸಿದನು. ಆಹಾರವು ಭ್ರಮೆಯಲ್ಲ ಎಂದು ಸಾಬೀತು ಪಡಿಸಲು ಪಾರ್ವತಿಯು ಮಾಯವಾದಳು, ಇದರಿಂದ ಪ್ರಕೃತಿ ನಿಶ್ಯಬ್ದವಾಗಿ ಪರಿವರ್ತನೆಯಾಗುತ್ತದೆ. ಇದು ಜಗತ್ತಿನಲ್ಲಿ ಬರವನ್ನು ಉಂಟುಮಾತ್ತದೆ. ನಂತರ ಶಾಂತಳಾದ ಪಾರ್ವತಿಯು ಲೋಕವನ್ನು ಉದ್ಧರಿಸಿ ಎಲ್ಲರಿಗೂ ಆಹಾರವನ್ನು ಹಂಚಿದಳು.

ದೈವ ಮತ್ತು ಆಚರಣೆಗಳು

ಅನ್ನಪೂರ್ಣ ಎಂಬ ಪದವು ಎರಡು ಪದಗಳಿಂದ ಮಾಡಲ್ಪಟ್ಟಿದೆ. ಅನ್ನ ಎಂದರೆ ಧಾನ್ಯಗಳು ಅಥವಾ ಆಹಾರ ಮತ್ತು ಪೂರ್ಣ ಎಂದರೆ ಪರಿಪೂರ್ಣ. ಆದ್ದರಿಂದ ಅನ್ನಪೂರ್ಣ ಎಂದರೆಪರಿಪೂರ್ಣ ಆಹಾರ’ (ಜ್ಞಾನದ ಸಂಕೇತ). ಶ್ರೀ ಅನ್ನಪೂರ್ಣೇಶ್ವರೀಯು ಶಿವನ ಪತ್ನಿ ಪಾರ್ವತಿ ದೇವಿಯ ಅವತಾರವೆಂದು ನಂಬಲಾಗಿದೆ. ಇಲ್ಲಿ ಅನ್ನಪೂರ್ಣೇಶ್ವರೀ ದೇವಿ ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿ ಕಾಣಬಹುದಿದೆ. ಶಂಖು, ಚಕ್ರ, ಶ್ರೀ ಚಕ್ರ ಮತ್ತು ದೇವಿ ಗಾಯತ್ರಿಯನ್ನು ನಾಲ್ಕು ಕೈಗಳಲ್ಲಿ ಹಿಡಿದಿದ್ದಾಳೆ. ವಿಗ್ರಹವು ಚಿನ್ನದಿಂದ ಆವೃತವಾಗಿದೆ ಮತ್ತು ಅನ್ನಪೂರ್ಣ ದೇವಿಯನ್ನು ದರ್ಶಿಸಿದರೆ ಅವರ ಜೀವನದಲ್ಲಿ ಆಹಾರವಿಲ್ಲದೆ ಎಂದಿಗೂ ಹೋಗುವುದಿಲ್ಲ ಎಂಬ ನಂಬಿಕೆ ಇದೆ. ಅನ್ನಪೂರ್ಣ ದೇವಿಯನ್ನು ಅನೇಕ ಪ್ರಾಚೀನ ಗ್ರಂಥಗಳಲ್ಲಿ ಶ್ಲಾಘಿಸಲಾಗಿದೆ.

ಅಕ್ಷಯ ತೃತೀಯ, ದೇವಾಲಯದಲ್ಲಿ ನಡೆಯುವ ಪ್ರಮುಖ ಹಬ್ಬ. ದಿನವು ದೇವಿ ಅನ್ನಪೂರ್ಣೆಯ ಜನ್ಮ ದಿನಾಂಕವೆಂದು ನಂಬಲಾಗಿದೆ. ದಿನವು ತ್ರೇತಾ ಯುಗದ ಆರಂಭ, ಚಳಿಗಾಲಗಳ ಅಂತ್ಯ ಮತ್ತು ಬೇಸಿಗೆಗಳ ಆರಂಭವನ್ನು ಸೂಚಿಸುತ್ತದೆ. ದೇವಾಲಯದಲ್ಲಿ 5 ದಿನಗಳ ಕಾಲ ನಡೆಯುವ ರಥೋತ್ಸವ, ಸೆಪ್ಟೆಂಬರ್ ನಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ, ದೀಪೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.