ಮಂಗಳೂರು ಮಹಾಮ್ಮಾಯಿ ರಥ

ಮಂಗಳಾದೇವಿ ದೇವಾಲಯ

ಮಂಗಳಾದೇವಿ (ಮಹಾಮ್ಮಾಯಿ) ದೇವಸ್ಥಾನವು ಮಂಗಳೂರು ನಗರದ ಬೋಳಾರಾ ದಲ್ಲಿರುವ ಹಿಂದೂ ದೇವಾಲಯವಾಗಿದ್ದು, ನಗರ ಕೇಂದ್ರದಿಂದ ನೈಋತ್ಯಕ್ಕೆ ಸುಮಾರು ಮೂರು ಕಿ.ಮೀ ದೂರದಲ್ಲಿದೆ. ದೇವಾಲಯವು ಹಿಂದೂ ಶಕ್ತಿ ದೇವತೆಗೆ ಮಂಗಳಾದೇವಿಯ ರೂಪದಲ್ಲಿ ಸಮರ್ಪಿತವಾಗಿದೆ. ಮಂಗಳೂರು ನಗರಕ್ಕೆ ಮಂಗಳಾದೇವಿ ಎಂಬ ಹೆಸರಿನ ನಂಟಿದೆ.

ದೇವಾಲಯವು ಗಮನಾರ್ಹವಾದ ಪ್ರಾಚೀನತೆ ಹೊಂದಿದೆ ಮತ್ತು 9ನೇ ಶತಮಾನದಲ್ಲಿ ಅಲೂಪ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆಯಾಗಿದ್ದ ಕುಂದವರ್ಮನಿಂದ ನಿರ್ಮಿಸಲ್ಪಟ್ಟಿತು ಎಂದು ನಂಬಲಾಗಿದೆ.

ದೇವಾಲಯ

ದೇವಾಲಯವು ಎರಡು ಅಂತಸ್ತಿನ ಗೋಪುರವನ್ನು ಹೊಂದಿದ್ದು ಹಬ್ಬ-ಹರಿದಿನಗಳಲ್ಲಿ ಡ್ರಮ್ ಬಾರಿಸುವುದು ವಿಶೇಷ. ಆಯತಾಕಾರದ ಗೋಡೆ ಎಲ್ಲಾ ದೇವಾಲಯಗಳನ್ನು ಸುತ್ತುವರಿದಿದೆ. ದೇವಾಲಯದ ಗರ್ಭಗುಡಿಗೆ ಹೋಗುವಲ್ಲಿ ದ್ವಾರಸ್ತಂಭ ಅಥವಾ ಧ್ವಜಸ್ತಂಭವನ್ನು ಇಲ್ಲಿ ಕಾಣಬಹುದು. ಗರ್ಭಗುಡಿ ಎಂಬ ಕೇಂದ್ರ ಭಾಗದಲ್ಲಿ ದೇವರ ವಿಗ್ರಹವಿದೆ. ಎತ್ತರಿಸಿದ ಪ್ಲಾಟ್ ಫಾರಂನಲ್ಲಿ ಐದು ಮೆಟ್ಟಿಲುಗಳ ಮೂಲಕ ಒಂದೇ ಬಾಗಿಲನ್ನು ತಲುಪಲಾಗುತ್ತದೆ. ದ್ವಾರಪಾಲಕ ದೇವತೆಗಳ ಎರಡೂ ಬದಿಗಳಲ್ಲಿ ರಕ್ಷಕ ದೇವತೆಗಳ ವಿಗ್ರಹಗಳಿವೆ.

ಹಬ್ಬಗಳು

ನವರಾತ್ರಿ (ದಸರಾ) ಎಲ್ಲಾ ಒಂಬತ್ತು ದಿನಗಳಲ್ಲಿ ವಿಶೇಷ ಪೂಜೆಗಳಿಗೆ ಸಮಯ. ಏಳನೇ ದಿನ ಮಂಗಳಾದೇವಿಯನ್ನು ಚಂಡಿಕಾ (ಅಥವಾ ಮಾರಿಕಾಂಬ) ಎಂದು ಪೂಜಿಸಲಾಗುತ್ತದೆ, ಎಂಟನೇ ದಿನ ದೇವಿಯನ್ನು ಮಹಾಸರಸ್ವತಿ ಎಂದು ಪೂಜಿಸಲಾಗುತ್ತದೆ. ಮಹಾನವಮಿ ಎಂದೂ ಕರೆಯಲ್ಪಡುವ ಒಂಬತ್ತನೇ ದಿನದಂದು ದೇವತೆಯನ್ನು ವಾಗ್ದೇವಿ ಎಂದು ಪೂಜಿಸಲಾಗುತ್ತದೆ. ಆಯುಧ ಪೂಜೆ ಯನ್ನು ಮಾಡಲಾಗುತ್ತದೆ. ದಿನದಂದು ದುರ್ಗಾದೇವಿಯು ಕ್ರೂರ ರಾಕ್ಷಸರ ಹತ್ಯೆ ಮಾಡಿದಳೆಂದು ನಂಬಲಾಗಿದೆ. ಚಂಡಿಕಾಯಾಗವನ್ನು ಸಹ ಮಾಡಲಾಗುತ್ತದೆ. ದಸರಾ ಎಂದು ಆಚರಿಸಲ್ಪಡುವ ಹತ್ತನೆಯ ದಿನ ನಡೆಯುವ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಅಲಂಕೃತಗೊಂಡ ದೇವಿಯನ್ನು ಭವ್ಯ ರಥದ ಮೇಲೆ ಹತ್ತಿ ದಪ್ಪ ಹಗ್ಗಗಳಿಂದ ಎಳೆಯಲಾಗುತ್ತದೆ. ಮಾರ್ನೌಮಿಕಟ್ಟೆಗೆ ಹೋಗುವ ಮೆರವಣಿಗೆಯಲ್ಲಿ ದೇವಿ ಮತ್ತು ಶಮಿವೃಕ್ಷವನ್ನು ಪೂಜಿಸಲಾಗುತ್ತದೆ.