ಮಾತೆ ಶೀತಲಾ ದೇವಿಯನ್ನು ಆರಾಧಿಸುವ ದಿನವೇ ಶೀತಲಾ ದೇವಿ. ಶ್ರೀಕೃಷ್ಣನು ದೇವಕಿಯ ಎಂಟನೇ ಪುತ್ರನಾಗಿ ಜನಿಸುವ ವಿಷಯ ತಿಳಿದು ಕಂಸನು ದೇವಕಿ ಮತ್ತು ವಸುದೇವರನ್ನು ಸೆರೆಯಲ್ಲಿ ಇಟ್ಟಿದ್ದನು. ಎಂಟನೇ ಪುತ್ರನಾಗಿ ಶ್ರೀಕೃಷ್ಣನು ಜನಿಸಿದಾಗ ದೇವಾಜ್ಞೆಯಂತೆ ಮಗುವನ್ನು ನಂದ ಗೋಕುಲದ ಯಶೋಧೆಯಲ್ಲಿ ಮಡಿಲಿನಲ್ಲಿ ಇರಿಸಿದನು. ಅವಳಿಗೆ ಜನಿಸಿದ ಮಗುವೇ ಶೀತಲಾ ದೇವಿ ಎನ್ನುವುದು ನಂಬಿಕೆ. ಈ ಮಗುವನ್ನು ಕೊಲ್ಲಲು ಕಂಸ ಪ್ರಯತ್ನಿಸಿದಾಗ ನಿಜ ಸಂಗತಿ ತಿಳಿದು ಅವರು ಭ್ರಾಂತನಾದನು. ಶೀತಲಾ ದೇವಿಗೆ ಉಪವಾಸವು ಅತಿ ಮುಖ್ಯವಾದದ್ದು. ಈ ದಿನದಂದು ಶುದ್ಧವಾದ ನೀರನ್ನು ಮಾತ್ರ ಸೇವಿಸಿ ದೇವಿಯನ್ನು ಆರಾಧಿಸುತ್ತಾರೆ.