ಶಂಕರಲಿಂಗ ಭಗವಾನರ ಜಯಂತಿ

ಮಧ್ಯ ಕರ್ನಾಟಕದ ಪ್ರಮುಖ ಅವಧೂತರಾದ ಶಂಕರಲಿಂಗ ಭಗವಾನರು ಜನಿಸಿದ್ದು ವಿಕ್ರಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು (ಕ್ರಿ. 1880 ರಆಗಸ್ಟ್  21ರಂದು). ತಂದೆ ಕೃಷ್ಣಪ್ಪ ಮತ್ತು ತಾಯಿ ಸುಬ್ಬಮ್ಮ. ಅವರ ಜನ್ಮ ನಾಮ ರಂಗಪ್ಪ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ರಂಗಪ್ಪನವರು ಕಷ್ಡದಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡರು. ಅಧ್ಯಾತ್ಮದಕಡೆಗೆ ಸೆಳೆತ ಅವರಿಗೆ ಚಿಕ್ಕಂದಿನಿಂದಲೇ ಬಂದಿತು. ಹಿತೈಷಿಗಳಾದ ತುಂಬಗೆರೆ ಬ್ರಹ್ಮಾನಂದರ ಶಿಷ್ಯರಾದ ಎಲ್ಲ ಪ್ಪಜ್ಜನವರು ಮಹಾವಾಕ್ಯವನ್ನುಉಪದೇಶಿಸಿದರು. ಪಾರ್ವತಮ್ಮನವರನ್ನು ವಿವಾಹವಾಗಿ ಶ್ಯಾನುಭೋಗರಾಗಿ ಲೌಕಿಕ ಜೀವನನ್ನುನಡೆಸಿದರೂ ಅವರ ಮನಸ್ಸು ಅಧ್ಯಾತ್ಮದಲ್ಲಿಯೇ ಇತ್ತು. ಅಗಡಿಯ ಶಂಕರ ಭಗವಾನರು ಮತ್ತು ಬನವಾಸಿಯದತ್ತ ರಾಜಯೋಗೀಂದ್ರರ ಅನುಗ್ರಹವು ಅವರಿಗೆದೊರಕಿತು. ಗುರುಪಂಥ, ದತ್ತಪಂಥ ಮತ್ತು ದೇವಿಪಂಥ ಮೂರರಲ್ಲಿಯೂ ಪ್ರವೇಶವಿದ್ದ ಅವರು ಎಲ್ಲ ದರಸಾರವನ್ನು ಗ್ರಹಿಸಿ ಉಪದೇಶ ಮಾಡಿದರು. ದಕ್ಷಿಣಭಾರತವನ್ನುಸಂಚಾರಮಾಡಿತಮ್ಮವಿಚಾರಗಳನ್ನುಪ್ರಚಾರಮಾಡಿದರು

ಶೃಂಗೇರಿಯ ಜಗದ್ಗುರುಗಳಾದ ಚಂದ್ರಶೇಖರ ಭಾರತಿಗಳಿಂದ ಸಂನ್ಯಾಸವನ್ನು ಸ್ವೀಕರಿಸಿ ಸದ್ಗುರು ಶಂಕರಲಿಂಗ ಭಗವಾನ್ಸರ ಸ್ವತಿಗಳು ಎಂಬ ಅಭಿದಾನವನ್ನು ಪಡೆದರು. ನುಲೇನೂರು, ಮಾಳೇನಹಳ್ಳಿ, ಲೋಕಿಕೆರೆ ಮತ್ತು ಕೊಮಾರನಹಳ್ಳಿಗಳಲ್ಲಿ ಆಶ್ರಮವನ್ನು ಸ್ಥಾಪನೆ ಮಾಡಿದರು. ಫಾಲ್ಗಣ ಶುದ್ಧ ತದಿಗೆಯಂದು (1953ರಫೆಬ್ರವರಿ 16ರಂದು) ದೇಹತ್ಯಾಗ ಮಾಡಿದರು. ಅವರ ಸಮಾದಿ ಕೊಮಾರನಹಳ್ಳಿಯಲ್ಲಿ ಇದೆ. ತಮ್ಮ ಚಿಂತನೆಗಳಿಂದ ಜೀವಿತಕಾಲದಲ್ಲಿ ಲಕ್ಷಾಂತರ ಭಕ್ತರನ್ನು ಪಡೆದಿದ್ದ ಅವರ ಅನುಯಾಯಿಗಳು ಈಗ ಮಧ್ಯ ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಇದ್ದು ಅವರ ಆರಾಧನಾ ಮಹೋತ್ಸವವು ಪ್ರತಿವರ್ಷ ಮಾಘ ಬಹುಳ ಏಕಾದಶಿಯಿಂದ ಫಾಲ್ಗುಣ ಶುದ್ದ ತದಿಗೆವರೆಗೆ ಕೊಮಾರನಹಳ್ಳಿಯಲ್ಲಿ ನಡೆಯಲಿದ್ದು ಲಕ್ಷಾಂತರಭಕ್ತರು ಪಾಲ್ಗೊಳ್ಳುತ್ತಾರೆ.