ಎಳ್ಳಾಮಾವಾಸ್ಯೆಯೆಂದು ತೀರ್ಥಹಳ್ಳಿಯಲ್ಲಿ ನಡೆಯುವ ತುಂಗಾ ಉತ್ಸವವು ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ರಾಮಕುಂಡದಲ್ಲಿ ಸ್ನಾನ ಮಾಡುವುದಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಪರಶುರಾಮನು ತಂದೆಯ ಅಜ್ಞೆಯಂತೆ ತಾಯಿಯ ತಲೆಯನ್ನು ಕತ್ತರಿಸಿದ ನಂತರ ತನ್ನ ಗಂಡುಗೊಡಲಿಯನ್ನು ಯಾವ ನದಿಯಲ್ಲಿ ತೊಳೆದರೂ ಕೂಡ ರಕ್ತದಕಲೆಗಳು ಹೋಗಲಿಲ್ಲವೆಂದೂ ಈ ರಾಮಕುಂಡದಲ್ಲಿ ತೊಳೆದಕೂಡಲೇ ರಕ್ತದಕಲೆಗಳು ಹೋದವೆಂದು ಪ್ರತೀತಿ. ತೀರ್ಥಹಳ್ಳಿಯಲ್ಲಿ ಇನ್ನೂ ಕೆಲವುಕುಂಡಗಳಿದ್ದು ರಾಮಕುಂಡವು ಪ್ರಸಿದ್ಧವಾಗಿದೆ. ಎಳ್ಳಮಾವಾಸ್ಯೆಯವರೆಗೆ ಇಲ್ಲಿ ಮೂರುದಿನಗಳ ಜಾತ್ರೆ ನಡೆಯುತ್ತದೆ. ಇದರಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಸಕಲಪಾಪಗಳೂ ಪರಿಹಾರವಾಗುತ್ತವೆ ಎನ್ನುವುದು ಜನರ ನಂಬಿಕೆಯಾಗಿದೆ.