ಕನೂ ಹಬ್ಬ

ಸಂಕ್ರಾಂತಿ ಮಾರನೆಯ ದಿನ 'ಕನೂ ಎಂಬ ಹಬ್ಬವನ್ನು ತಮಿಳರಲ್ಲಿ ಸುಮಂಗಲಿಯರು ಆಚರಿಸುತ್ತಾರೆ. ಇದನ್ನು ಮಾಟ್ರುಪೊಂಗಲ್ ಎಂದು ಕರೆಯುತ್ತಾರೆ. ಇದರಲ್ಲಿ ಬಣ್ಣ ಬಣ್ಣದ ಅನ್ನದ ಉಂಡೆಗಳನ್ನು ಮಾಡಿ ಅಗ್ರದ ಬಾಳೆಲೆಯ ಮೇಲೆ ಈ ಉಂಡೆಗಳನ್ನು ಕಾಗೆ-ಗುಬ್ಬಚ್ಚಿಗಳನ್ನು ಉದ್ದೇಶಿಸಿ ಇಡುವುದು ಇಂದಿಗೂ ರೂಢಿಯಲ್ಲಿದೆ.ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನವನ್ನು ಬಂಡಿ ಹಬ್ಬ ಎಂದು ಆಚರಿಸುತ್ತಾರೆ. ಅಕ್ರೂರನು ಈ ದಿನದಂದು ಶ್ರೀಕೃಷ್ಣ ಮತ್ತು ಬಲರಾಮರನ್ನು ದ್ವಾರಕೆಯಿಂದ ಮಥುರೆಗೆ ಕರೆದುಕೊಂಡು ಹೋಗಿದ್ದನೆಂಬುದು ಪೌರಾಣಿಕ ಪ್ರತೀತಿ. ಈ ದಿನದಂದು ಬಂಡಿಗಳ ಸ್ಪರ್ಧೆ ಕೂಡ ನಡೆಯುತ್ತದೆ. ರೊಟ್ಟುಪಲ್ಯವನ್ನು ಮಾಡಿ ದೇಸಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುವುದೂ ಕೂಡ ಇದೆ.