ಕೆಲವು ಭಾರತೀಯ ಹಬ್ಬಗಳಲ್ಲಿ ಸೌರ ಮತ್ತು ಚಾಂದ್ರ ಎರಡೂ ಪದ್ದತಿಯನ್ನು ಅನುಸರಿಸುವುದು ಇದೆ. ಅಂತಹ ಹಬ್ಬಗಳಲ್ಲಿ ತುಳುಷಷ್ಠಿ ಕೂಡ ಒಂದು. ಮಕರಸೌರಮಾಸದ ಶುದ್ಧಷಷ್ಠಿಯಂದು ಬರುವ ಈ ಆಚರಣೆಯಲ್ಲಿ ಘಾಟಿಸುಬ್ರಹ್ಮಣ್ಯ ಸೇರಿದಂತೆ ಹಲವು ನಾಗಪ್ರಧಾನಕ್ಷೇತ್ರಗಳಲ್ಲಿ ರಥೋತ್ಸವ ನಡೆಯುತ್ತದೆ.