ವ್ಯಾಲೆಂಟೈನ್ ದಿನ

ಸಂತ ವ್ಯಾಲೆಂಟೈನ್ದಿನ ಎಂದು ಕರೆಯಲ್ಪಡುವ ಈ ಆಚರಣೆ ಪ್ರೇಮಿಗಳ ದಿನ ಎಂದೇ ಖ್ಯಾತಿಯನ್ನು ಪಡೆದಿದೆ. ಇದರ ಕುರಿತು ಸಾಕಷ್ಟು ಕಥೆಗಳು ಪ್ರಚಲಿತವಾಗಿದ್ದು ಯಾವುದಕ್ಕೂ ಸ್ಪಷ್ಟಚಾರಿತ್ರಿಕ ಆಧಾರವಿಲ್ಲ. ಕ್ರಿ. 273ರಲ್ಲಿ ಸಂತವ್ಯಾಲಂಟೈನ್ ಅವರನ್ನು ಮರಣದಂಡನೆಗೆ ಗುರಿ ಪಡಿಸಲಾಯಿತು ಎನ್ನುವುದು ಬಹುಮಟ್ಟಿಗೆ ಖಚಿತಗೊಂಡಿದೆ. ಅದು ರೋಂ ಸಾಮ್ರಾಜ್ಯದ ಕಾಲ. ದೊರೆ ಕ್ಲಾಡಿನಸ್ತನ್ನ ಸೈನಿಕರು ವಿವಾಹವಾಗಬಾರದು ಎನ್ನುವ ಕಟ್ಟಾಜ್ಞೆಯನ್ನು ವಿಧಿಸಿದ್ದ. ಆದರೆ ಅನೇಕ ಸೈನಿಕರು ಗುಟ್ಟಾಗಿ ವಿವಾಹ ಆಗುತ್ತಿದ್ದರು. ಅಂತಹವರನ್ನು ವ್ಯಾಲೆಂಟೈನ್ಪ್ರೋತ್ಸಾಹಿಸಿ ವಿವಾಹ ಮಾಡಿಸುತ್ತಿದ್ದ. ಬಹಳ ಕಾಲಗುಟ್ಟಾಗಿ ನಡೆಯುತ್ತಿದ್ದ ಈ ವಿಚಾರ ಹೇಗೋ ದೊರೆಯ ಕಿವಿಗೆ ಬಿದ್ದು ವ್ಯಾಲೆಂಟೈನ್ನನ್ನು ಹಿಡಿದು ವಿಚಾರಣಗೆ ಗುರಿಪಡಿಸಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಲ್ಲಿಂದ ಮುಂದೆ ವ್ಯಾಲೆಂಟೈನ್ಕುರಿತಾಗಿ ಅನೇಕ ಜನ ಪದಕಥೆಗಳು ಹಬ್ಬಿದವು. ಪವಾಡಗಳೂ ಹುಟ್ಟಿಕೊಂಡವು. ಕ್ರಿ. 496ರಲ್ಲಿ ಪೋಪ್ಜೆಲೆಸಿಯಾನ್ವ್ಯಾಲೆಂಟೈನ್ದಿನದ ಆಚರಣೆಯನ್ನು ಆರಂಭಿಸಿದ. ವ್ಯಾಲೆಂಟೈನ್ಚಿತಾಭಸ್ಮ ಇರುವ ಇಟಲಿಯ ಇಂಟಮೇನಾದಲ್ಲಿ ಇದು ಮೊದಲು ಆರಂಭವಾಯಿತು. ಆರಂಭದಲ್ಲಿ ಕೇವಲ ಸ್ಮರಣೆಗಾಗಿ ನಡೆಯುತ್ತಿದ್ದ ಈ ದು:ಖದ ಆಚರಣೆ ಕ್ರಮೇಣ ಪ್ರೇಮಿಗಳ ದಿನ ಎನ್ನುವ ಹೆಸರಿನಲ್ಲಿ ಸಂಭ್ರಮದ ಆಚರಣೆಯಾಗಿ ಮಾರ್ಪಟ್ಟಿತು. 19ನೇ ದೇಶದ ಸುಮಾರಿಗೆ ಜಗತ್ತಿನ ಎಲ್ಲೆಡೆ ಪಸರಿಸಲು ಆರಂಭವಾಯಿತು. ಭಾರತಕ್ಕೆ 20ನೇ ಶತಮಾನದಲ್ಲಿ ಬಂದಿದ್ದರೂ ಕೂಡ ಬಹುಬೇಗ ಜನಪ್ರಿಯವಾಯಿತು. ಈಗ ಜಾಗತಿಕ ಆಚರಣೆಯಾಗಿ ನಡೆಯುತ್ತಿರುವ ವ್ಯಾಲೆಂಟೈನ್ಸ್ಡೇಯನ್ನು ಜಗತ್ತಿನ ಕೆಲವು ದೇಶಗಳಲ್ಲಿ ನಿಷೇದಿಸಲಾಗಿದೆ.