ಕುರವತ್ತಿ ಬಸವೇಶ್ವರ ರಥ

ಕುರವತ್ತಿಯನ್ನು ತ್ರಿಪುರದಹನ ಕ್ಷೇತ್ರ ಎಂದು ಕೂಡ ಕರೆಯಲಾಗುತ್ತದೆ. ತುಂಗಾಭದ್ರ ನದಿಯಲ್ಲಿ ಪರಶಿವನು ಲಿಂಗ ರೂಪದಲ್ಲಿ ಕುರಹನ್ನು ತೋರಿ ರಕ್ಕಸರನ್ನು ಸಂಹಾರ ಮಾಡಿದನು ಎಂಬುದು ಪೌರಾಣಿಕ ಪ್ರತೀತಿ. ರಕ್ಕಸರು ಇದ್ದ ತ್ರಿಪುರಗಳು ಎಂದು ಹತ್ತಿರದಲ್ಲೇ ಇರುವ ಚೌಡಯ್ಯ ದಾಸಪುರ, ನರಸಿಂಹಪುರ, ಚಂದಾಪುರಗಳನ್ನುಕರೆಯಲಾಗುತ್ತದೆ. ಶಿವನು ಕುರುಹು ಎತ್ತಿತೋರಿದ್ದರಿಂದ ಕುರವತ್ತಿ ಎನ್ನುವ ಹೆಸರು ಬಂದಿತು ಎನ್ನುವುದು ಇಲ್ಲಿನ ಜನರ ನಂಬಿಕೆ. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ದೊರೆ 1ನೇ ಸೋಮೇಶ್ವರನು (1044-68) ಇಲ್ಲಿನ ಮಲ್ಲಿಕಾರ್ಜನ ಸ್ವಾಮಿ ದೇವಸ್ಥಾನವನು ಕಟ್ಟಿದನು ಎನ್ನುವುದು ಐತಿಹಾಸಿಕ ದಾಖಲೆ. ಹೊಯ್ಸಳರ ಕಾಲದಲ್ಲಿ ದೇಗುಲವು ಅಭಿವೃದ್ಧಿಹೊಂದಿತು. ಪ್ರತಿ ಸೋಮವಾರ ಮತ್ತು ಅಮವಾಸ್ಯೆಗಳಂದು ಇಲ್ಲಿ ಉತ್ಸವಗಳು ನಡೆಯಲಿದ್ದು ಮಾಘ ಬಹುಳ ದ್ವಾದಶಿಯಿಂದ ಮಹಾ ಶಿವರಾತ್ರಿಯವರೆಗೆ ಮೂರು ದಿನ ಇಲ್ಲಿ ಜಾತ್ರೆ ನಡೆಯುತ್ತದೆ