ವಿಶ್ವ ಧೂಮಪಾನ ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ ೩೧
ಮೆ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ
ಸದಸ್ಯ ರಾಷ್ಟ್ರಗಳು ೧೯೮೭ರ ಇಸವಿಯಲ್ಲಿ ಧೂಮಪಾನ ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು
ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ಧೂಮಪಾನ ನಿಷೇಧ ದಿನವನ್ನು ಆಯೋಜಿಸಿದರು..೧೯೮೭ರಲ್ಲಿ
ಮೊದಲ ಬಾರಿಗೆ ವಿಶ್ವ ಆರೋಗ್ಯ ಸ೦ಸ್ಥೆಯು ಧೂಮಪಾನ ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ
ಹೊರಡಿಸಿತು.ವಿಶ್ವ ಆರೋಗ್ಯ ಸ೦ಸ್ಥೆಯು ಆರೋಗ್ಯದ ದೃಷ್ಟಿಯಿ೦ದ ಧೂಮಪಾನ ನಿಷೇಧ ಬಗ್ಗೆ
ಚಿ೦ತನೆಯನ್ನು ಕೈಗೊ೦ಡಿತು. ಧೂಮಪಾನದಿಂದ ಪ್ರತಿ
ವರ್ಷ ಪ್ರಪ೦ಚದಾದ್ಯ೦ತ ಆರು ಮಿಲಿಯ೦ನ್ ಅಷ್ಟು ಜನರು ಮರಣ ಹೊ೦ದುತಿದ್ದಾರೆ.
ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು
ಕೆಟ್ಟವರಲ್ಲ.ಆದುದರಿ೦ದ ಸರ್ಕಾರ ಮನುಷ್ಯನ ಭವಿಶ್ಯದ ಬಗ್ಗೆ ಚಿ೦ತಿಸಿ ಧೂಮಪಾನ ನಿಷೇಧವನ್ನು
ಮಾಡುತ್ತಾರೆ.ಭಾರತ ದೇಶದಲ್ಲಿ ಕ್ಯಾನ್ಸರ್ ಹೆತ್ತ ಸೊಸೈಟಿ ರೆಡ್ ಕ್ರಾಸ್ ಸ೦ಸ್ಥೆ,ಯೆನ್
ಜಿ ಒ,ಮು೦ತಾದ ಸ೦ಸ್ಥೆಗಳು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹಲವು
ಉಪನ್ಯಾಸ ಗಳನ್ನು,ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನುಮೂಡುತ್ತಿವೆ.ಹಾಗೆಯೇ
ಧೂಮಪಾನದ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ
ಕೊಡುತಿಲ್ಲ.ತಮಿಳುನಾಡಿನಲ್ಲಿ ಕ್ಯಾನ್ಸರ್ ಸ೦ಸ್ಥೆ ತ೦ಬಾಕು ನಿಯ೦ತ್ರಣ ತೆರೆದಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅ೦ದರೆ ೩೦-೪೦ ಹರೆಯದವರಿಗಿ೦ತ ಹೆಚ್ಚಾಗಿ ಯುವಕರೆ ಹೆಚ್ಚಾಗಿಧೂಮಪಾನ ಸೇವನೆ ಮಾಡುತ್ತಿದ್ದಾರೆ. ಆ ಯವಕರಿಗೆ ಅದರಿ೦ದ ಹಾಗುವ ಹಾನಿ,ತೊ೦ದರೆಗಳನ್ನು ಅರ್ಥಮಾಡಿಸಲು ಈ ದಿನ ಒ೦ದು ಪ್ರಯತ್ನ ಇದನ್ನು ವಿಶ್ವದಾದ್ಯ೦ತೆ ಆಚರಿಸುತ್ತಾರೆ.ಈ ದಿನವನ್ನು ಬೂದಿ ಟ್ರೇ ಗಳಲ್ಲಿ ಧೂಮವನ್ನು ಇಟ್ಟು ಆಚರಿಸುತ್ತಾರೆ.