ಕಾನೂನು ದಿನ

ಭಾರತದ ಸಂವಿಧಾನವನ್ನು ಅಂಗೀಕರಿಸುವ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನ (ಅಥವಾ ಸಂವಿಧಾನ ದಿವಸ್) ಆಚರಿಸಲಾಗುತ್ತದೆ. 1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತು, ಮತ್ತು ಅದು 26 ಜನವರಿ 1950ರಂದು ಜಾರಿಗೆ ಬಂದಿತು.

ಸಂವಿಧಾನ ದಿನ

ಕೇಂದ್ರ ಸರ್ಕಾರ 2015ರ ನವೆಂಬರ್ 26ರಂದು ಗೆಜೆಟ್ ಅಧಿಸೂಚನೆ ಮೂಲಕ 26 ನವೆಂಬರ್ ನ್ನು ಸಂವಿಧಾನ ದಿನವನ್ನಾಗಿ ಘೋಷಿಸಿತು. 2015ರ ಅಕ್ಟೋಬರ್ 11ರಂದು ಮುಂಬೈನಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಪ್ರತಿಮೆಯ ಶಂಕುಸ್ಥಾಪನೆ ವೇಳೆ ಭಾರತದ ಪ್ರಧಾನಿ ಈ ಘೋಷಣೆ ಮಾಡಿದ್ದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ 2015 ರ ವರ್ಷವಾಗಿದ್ದು, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಅವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಹಿಂದೆ ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ನವೆಂಬರ್ 26ರಂದು ಸಂವಿಧಾನದ ಮಹತ್ವವನ್ನು ಪಸರಿಸಲು ಮತ್ತು ಅಂಬೇಡ್ಕರ್ ಅವರ ಚಿಂತನೆ ಮತ್ತು ವಿಚಾರಗಳನ್ನು ಪ್ರಸಾರ ಮಾಡಲು ಆಯ್ಕೆ ಮಾಡಲಾಯಿತು.

ಆಚರಣೆ

2015 ರಲ್ಲಿ ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷ (14 ಏಪ್ರಿಲ್ 1891 - 6 ಡಿಸೆಂಬರ್ 1956) ಭಾರತದ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಟ್ಟಿದ್ದರಿಂದ ಸರ್ಕಾರ 2015ರ ಮೇ ತಿಂಗಳಲ್ಲಿ ಈ ವರ್ಷವನ್ನು "ದೊಡ್ಡ ರೀತಿಯಲ್ಲಿ" ಆಚರಿಸಲು ನಿರ್ಧರಿಸಿತು. ಭಾರತದ ಪ್ರಧಾನಿ ಅಧ್ಯಕ್ಷತೆಯ ವಿಶೇಷ ಸಮಿತಿಯನ್ನು ವರ್ಷದ ಸಂಭ್ರಮಾಚಾರಣೆಯಾಗಿ  ಪ್ರಕಟಿಸಲಾಯಿತು.

ಸಂಭ್ರಮಾಚರಣೆ

ಸಂವಿಧಾನ ದಿನಾಚರಣೆ ಸಾರ್ವಜನಿಕ ರಜಾ ದಿನವಲ್ಲ. ಭಾರತ ಸರ್ಕಾರದ ವಿವಿಧ ಇಲಾಖೆಗಳು ಮೊದಲ ಸಂವಿಧಾನ ದಿನವನ್ನು ಆಚರಿಸುತ್ತವೆ. ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಕಾರ, ಸಂವಿಧಾನದ ಪೀಠಿಕೆಯು ಎಲ್ಲಾ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿ೦ದ ಓದಲ್ಪಡುತ್ತದೆ. ಇದರ ಜೊತೆಗೆ ಭಾರತದ ಸಂವಿಧಾನದ ಬಗ್ಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜನೆಗೊಳ್ಳುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಎಲ್ಲಾ ಸಾಗರೋತ್ತರ ಭಾರತೀಯ ಶಾಲೆಗಳಿಗೆ ನಿರ್ದೇಶನ ನೀಡಿತು ಮತ್ತು ಆ ದೇಶದ ಸಂವಿಧಾನವನ್ನು ಸ್ಥಳೀಯ ಭಾಷೆಗೆ ಭಾಷಾಂತರಿಸಲು ಮತ್ತು ಅದನ್ನು ವಿವಿಧ ಅಕಾಡೆಮಿಗಳು, ಗ್ರಂಥಾಲಯಗಳು ಮತ್ತು ಇಂಡಾಲಜಿಯ ಬೋಧಕರಿಗೆ ವಿತರಿಸಲು ರಾಯಭಾರ ಕಚೇರಿಗಳಿಗೆ ನಿರ್ದೇಶನ ನೀಡಿತು. ಭಾರತದ ಸಂವಿಧಾನವನ್ನು ಅರೇಬಿಕ್ ಗೆ ಭಾಷಾಂತರಿಸುವ ಕೆಲಸ ಪೂರ್ಣಗೊಂಡಿದೆ. ಕ್ರೀಡಾ ಇಲಾಖೆಯು "ಸಮಾನತೆಗಾಗಿ ಓಟ" ಎಂಬ ಸಾಂಕೇತಿಕ ಓಟ ಏರ್ಪಡಿಸುತ್ತದೆ.